Home » News » ವಿದ್ಯಾರ್ಥಿಯ ಜೀವನ ತಪಸ್ಸು ಇದ್ದಂತೆ : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ವಿದ್ಯಾರ್ಥಿಯ ಜೀವನ ತಪಸ್ಸು ಇದ್ದಂತೆ : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

by CityXPress
0 comments

ಗದಗ : ವಿಧ್ಯಾರ್ಥಿಗಳ, ಶ್ರಮ ಸಂಯಮ ಮತ್ತು ನಿಶ್ಚಲ ದಿಟ್ಟತೆಯೇ ಸಾಧನೆಯ ಯಶಸ್ಸು. ಅದುವೇ ತಂದೆ ತಾಯಿ, ಶಿಕ್ಷಕರಿಗೆ ಹೆಮ್ಮೆ ಸಂತೋಷ. ವಿಧ್ಯಾರ್ಥಿ ಜೀವನ ತಪಸ್ಸು ಇದ್ದಂತೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು. 

 ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನೆಡೆದ ೨೭೪೭ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ವಿಧ್ಯಾರ್ಥಿ ಜೀವನ ತಪಸ್ಸು ಇದ್ದಂತೆ. ಪ್ರತಿಯೊಂದು ಬೆಳಗಿನ ಓದು, ರಾತ್ರಿ ತಯಾರಿ ನಿಮ್ಮ ಸಾಧನೆಯನ್ನು ಉತ್ತುಂಗಕ್ಕೇರಿಸುತ್ತದೆ. ಈ ಯಶಸ್ಸು ಶಿಕ್ಷಣ ಮಾರ್ಗದ ಒಂದು ಹೆಜ್ಜೆ ಅಷ್ಟೆ. ಮುಂದೆ ಹೋದಂತೆ ಹೆಚ್ಚಿನ ಅವಕಾಶಗಳು ಮತ್ತು ಗುರಿಗಳಿವೆ. ಈ ಸಾಧನೆಗಳು ಉಜ್ವಲವಾದ ಭವಿಷ್ಯಕ್ಕೆ ದಾರಿಯಾಗಿದೆ. ನಿಮ್ಮ ಭವಿಷ್ಯ ಬೆಳಕಿನಿಂದ ತುಂಬಿರಲಿ. ನೀವು ಉಜ್ವಲ ನಕ್ಷತ್ರಗಳಾಗಿರಿ ಎಂದು ಪ್ರತಿಭಾ ಪುರಸ್ಕಾರ ಪಡೆದ ವಿಧ್ಯಾರ್ಥಿಗಳಿಗೆ ಶ್ರೀಗಳು ಹಾರೈಸಿದರು.

ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಶಾಲಾ ಶಿಕ್ಷಣ ಇಲಾಖೆಯ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳಾದ ಎಚ್ ಬಿ ರಡ್ಡೇರವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಓದುವ ಬಗ್ಗೆ ಸಮರ್ಪಣಾ ಭಾವ ಮತ್ತು ಶಿಸ್ತು ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ. ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧಿಸಿದ ಉನ್ನತ ಫಲಿತಾಂಶ ಶಿಕ್ಷಣ ಇಲಾಖೆಗೆ ಸಾಧನೆಯ ಮುಕುಟವಾಗಿದೆ. ನಿಮ್ಮ ಮುಂಬರುವ ಶಿಕ್ಷಣದ ಆಯ್ಕೆ ನಿಮ್ಮ ಆಸಕ್ತಿಯ ಆಯ್ಕೆ ಆಗಿರಲಿ ಎಂದು ಮಾರ್ಗದರ್ಶಿಯ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ ಜಿಲ್ಲೆಯ ಉಪನಿರ್ದೇಶಕರಾದ ಆರ್.ಎಸ್. ಬುರಡಿಯವರ ಮಾತನಾಡುತ್ತಾ, ಪರೀಕ್ಷೆಯಲ್ಲಿ ಪರಿಶ್ರಮ ಪಟ್ಟು ಓದಿ ಉತ್ತಮ ಅಂಕ ಪಡೆದಿದ್ದೀರಿ. ನಿಮ್ಮ ಫಲಿತಾಂಶ ನೈಜ ಫಲಿತಾಂಶ. ವೆಬ್‌ಕಾಸ್ಟಿಂಗ್ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಇದ್ದಾಗಲು ಪರಿಶ್ರಮಪಟ್ಟು ಓದಿ ಜಿಲ್ಲೆಯ ಕೀರ್ತಿಯನ್ನು ತಂದಿದ್ದೀರಿ. ಇದೇ ರೀತಿ ನಿಮ್ಮ ಸಾಧನೆ ಸಾಗಲಿ ಎಂದು ಶುಭ ಹಾರೈಸಿದರು.

banner

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದುಗಿನ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಬಿ. ಮಸನಾಯಿಕ, ಹಾಗೂ ಶಿರಹಟ್ಟಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಂ.ಸಿ. ಗಿರಿತಮ್ಮಣ್ಣವರ ಉಪಸ್ಥಿತರಿದ್ದರು. ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಅನಿರುದ್ಧ ಧನೇಶ್ ದೇಸಾಯಿ ಮತ್ತು ಶಿವಾನಂದ ಭಾವಿಕಟ್ಟಿ ನಡೆಸಿಕೊಟ್ಟರು.

ತೋಂಟದಾರ್ಯ ಕೈಗಾರಿಕಾ ತರಬೇತಿ ಕೇಂದ್ರ ಮಂಡಲಗಿರಿಯ ಕಿರಿಯ ತರಬೇತಿ ಅಧಿಕಾರಿಗಳಾದ ಭೋಜರಾಜ ಸೊಪ್ಪಿಮಠ ಅವರು ರಚಿಸಿದ “ಎಲ್ಲಾ ನನ್ನವಳದೆ” ಪುಸ್ತಕ ಲೋಕಾರ್ಪಣೆಯಾಯಿತು.

ಎಸ್‌ಎಸ್‌ಎಲ್‌ಸಿ  ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ, ದ್ವಿತೀಯ, ತೃತೀಯ ಬಂದ ೨೧ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶಿವಾನುಭವದಲ್ಲಿ ಗೌರವಿಸಲಾಯಿತು. ಧಾರ್ಮಿಕ ಗ್ರಂಥ ಪಠಣವನ್ನು ಕುಮಾರ ವಿಶ್ವಾಸ ಎಂ ಮಳಗಾವಿಮಠ ಹಾಗೂ ವಚನ ಚಿಂತನವನ್ನು ಕುಮಾರಿ ಸ್ಪೂರ್ತಿ ಎಂ ಮಳಗಾವಿಮಠ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು  ಲಿಂಗನಗೌಡ ಶಂಕರಗೌಡ ಬೆಳವಟಿಗಿ ನಿವೃತ್ತ ಶಿಕ್ಷಕರು ಗದಗ ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷರಾದ ಡಾ ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ ಕಾರ್ಯದರ್ಶಿ ವೀರಣ್ಣ ಗೋಟಡಕಿ ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ ಕೋಶಾಧ್ಯಕ್ಷರಾದ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಚೇರಮನ್ ಐ ಬಿ ಬೆನಕೊಪ್ಪರವರು, ಸಹ ಚೇರ್ಮನ್ ಶಿವಾನಂದ ಹೊಂಬಳ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಡಾ ಉಮೇಶ ಪುರದ ಸ್ವಾಗತಿಸಿದರೆ,  ಅಶೋಕ ಹಾದಿ ಕಾರ್ಯಕ್ರಮ ನಿರೂಪಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb