ಗದಗ: ಈ ಆರ್‌ಸೆಟಿ (ಗಿಟ್‌ಸರ್ಡ್) (ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹುಲಕೋಟಿ ಗದಗ) ಮತ್ತು ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಹುಲಕೋಟಿ, ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಊಟ-ವಸತಿಯೊದಿಗೆ 1. ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ತರಬೇತಿ 2. ಅಣಬೆ ತಯಾರಿಕೆ ತರಬೇತಿ 3. ಕುರಿ ಸಾಕಾಣಿಕೆ ತರಬೇತಿ 4.ಉದ್ಯಮಶೀಲತಾ ಅಭಿವೃದ್ದಿ ತರಬೇತಿ ಈ ಉಚಿತ ತರಬೇತಿಗಳನ್ನು ಜೂನ್ ಮತ್ತು ಜುಲೈ ತಿಂಗಳು 2025ರ ಆರಂಭಿಸಲಾಗುವುದು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಆದ್ದರಿಂದ ಆಸಕ್ತರು, ನಿರುದ್ಯೋಗಿಗಳು, ಯುವಕ/ಯುವತಿಯರು, ಪುರುಷರು, ಮಹಿಳೆಯರು, ಸ್ವ ಸಹಾಯ ಗುಂಪಿನವರು ಮತ್ತು ಯಾವುದೇ ಸಾಮಾನ್ಯ ಜನರು 19 ರಿಂದ 44 ವಯಸ್ಸಿನೊಳಗಿನ ಗ್ರಾಮೀಣ ಭಾಗದವರಿಗೆ ಅರ್ಜಿ ಆಹ್ವಾನಿಸಿದೆ.
ಈ ತರಬೇತಿಗಳು ಊಟ, ವಸತಿಯೊಂದಿಗೆ ಉಚಿತವಾಗಿರುತ್ತದೆ, ಕೇಂದ್ರ ಸರಕಾರದಿಂದ ತರಬೇತಿಯ ಪ್ರಮಾಣ ಪತ್ರಕೊಡಲಾಗುವುದು, ತರಬೇತಿ ಪಡೆದವರಿಗೆ ಬ್ಯಾಂಕ್ ಸಾಲ ಮಾಡಿಸಿಕೊಡಲಾಗುವುದು.

ಆಸಕ್ತರು ಎಸ್.ಬಿ.ಆಯ್ ಆರ್‌ಸೆಟಿ ಹುಲಕೋಟಿ ಗದಗ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ಫಾರಂನಲ್ಲಿ ತುಂಬಿ ನಿರ್ದೇಶಕರುSBI-ASFD ಈ ಆರ್,ಸೆಟಿ ಸಂಸ್ಥೆ ಹುಲಕೋಟಿ ಗದಗ, ಕೃಷಿ ವಿಜ್ಞಾನ ಕೇಂದ್ರ ಆವರಣ, ಹುಲಕೋಟಿ ಗದಗ. ಇವರಿಗೆ ಅರ್ಜಿ ಸಲ್ಲಿಸಬೇಕು, ಅಥವಾ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-8880169996/9632287949 ಸಂಪರ್ಕಿಸಲು ಕೋರಲಾಗಿದೆ.
