ಗದಗ:ಶಾಲೆಗಳ ಪುನಾರಂಭದ ಮೊದಲೇ ಗದಗದಲ್ಲಿ ತೀವ್ರ ಆತಂಕ ಹುಟ್ಟಿಸುವ ಘಟನೆ ನಡೆದಿದೆ. ಗದಗ ನಗರದ ಆರ್ಕೆ ನಗರ ಸಮೀಪದ ಅಂಡರ್ಪಾಸ್ ಬಳಿ ಶಾಲಾ ಬಸ್ಗೆ ಅಪಘಾತವಾಗಿದ್ದು, ಬಸ್ ಪಲ್ಟಿಯಾಗಿದೆ. ಆದರೆ ದೇವರ ಕೃಪೆಯಿಂದ ಬಸ್ ನಲ್ಲಿ ಶಾಲಾ ಮಕ್ಕಳಿರಲಿಲ್ಲ.
ಶ್ರೀ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಸೇರಿದ ಈ ಬಸ್, ಮಕ್ಕಳನ್ನು ಕರೆತರಲು ಹೊರಟಿತ್ತು. ಈ ವೇಳೆ ಎದುರಿನಿಂದ ಬಂದ ಮಿನಿ ಕ್ಯಾಂಟರ್ ವಾಹನ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ, ಅಂಡರ್ಪಾಸ್ನಲ್ಲಿ ಶಾಲಾ ಬಸ್ ಪಲ್ಟಿಯಾಗಿದೆ.

ಮೇಲಿನ ಈ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಬಸ್ನಲ್ಲಿ ಸಿಬ್ಬಂದಿ ಮಾತ್ರ ಇದ್ದು, ಗಂಭೀರ ಅನಾಹುತ ತಪ್ಪಿದೆ. ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಕ್ರೇನ್ ಮೂಲಕ ಪಲ್ಟಿಯಾದ ಬಸ್ ಅನ್ನು ತೆರವುಗೊಳಿಸಲಾಯಿತು. ಈ ಘಟನೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರತಿದಿನ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ಸುರಕ್ಷತೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಇನ್ನಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂಬ ಚಿಂತೆ ಈ ಘಟನೆ ಮೂಡಿಸಿದೆ. ಶಾಲಾ ವಾಹನಗಳ ನಿಯಂತ್ರಣ ಮತ್ತು ನಿಗಾವಳಿ ಪಾಲನೆಯ ಅಗತ್ಯತೆಯನ್ನೂ ಈ ಘಟನೆ ನೆನಪಿಸಿದೆ.
