ಗದಗ 27: ಶ್ರೀ ಮಹಾವೀರ ಜೈನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೨೦೨೫-೨೬ ನೇ ಸಾಲಿನ ಅದ್ದೂರಿ ಶಾಲಾ ಪ್ರಾರಂಭೋತ್ಸವ ವಿಶೇಷ ದಾಖಲಾತಿ ಆಂದೋಲನ ಹಾಗೂ ಎಸ್ ಎಸ್ ಎಲ್ ಸಿ ಫಲಿತಾಂಶ ವಿಶ್ಲೇಷಣೆ ಕುರಿತು ಜಿಲ್ಲೆಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಾಗಾರವನ್ನ ಉಪನಿರ್ದೇಶಕರಾದ ಶ್ರೀ ಆರ್ ಎಸ್ ಬುರಡಿಯವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮಕ್ಕಳ ಹಕ್ಕುಗಳ ಕಾಯಿದೆ ೨೦೦೯ ರನ್ವಯ ೬ ರಿಂದ ೧೪ ವರ್ಷ ವಯಸ್ಸಿನ ಎಲ್ಲಾ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವಂತೆ, ದಾಖಲಾದ ಎಲ್ಲಾ ಮಕ್ಕಳು ಪ್ರತಿ ದಿನ ಶಾಲೆಗೆ ಹಾಜರಾಗಿ ಆಯಾ ವರ್ಗ ವಿಷಯಕ್ಕೆ ನಿಗದಿಪಡಿಸಿದ ಸಾಮರ್ಥ್ಯಗಳನ್ನು ಮಕ್ಕಳು ಕಲಿಯುವಂತೆ ಶಿಕ್ಷಕರು ಪೂರ್ವ ತಯಾರಿಯೊಂದಿಗೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಚಟುವಟಿಕೆ ಆಧಾರಿತ ಪರಿಣಾಮಕಾರಿ ಕಲಿಕಾ ಭೋದನೆ ಪ್ರಕ್ರಿಯೆಯಲ್ಲಿ ತೊಡಗಬೇಕು ಎಂದರು.
ಶಾಲೆಯಿಂದ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲಾ ವ್ಯಾಪ್ತಿಗೆ ತರಲು ವಿಶೇಷ ದಾಖಲಾತಿ ಆಂದೋಲನ ಪ್ರಾರಂಭಿಸಲಾಗಿದ್ದು, ಜು.೩೧ ರವರೆಗೂ ನಡೆಯಲಿದೆ. ದಾಖಲಾತಿ ಆಂದೋಲನವನ್ನು ಜನವಸತಿ, ಶಾಲೆ, ಕ್ಲಸ್ಟರ್, ಬ್ಲಾಕ್, ಜಿಲ್ಲೆ ಹಂತದಲ್ಲಿ ಆಯೋಜಿಸಬೇಕು.
ಈ ಪ್ರಕ್ರಿಯೆಯಲ್ಲಿ ಶಿಕ್ಷಕರು, ಎಸ್ಡಿಎಂಸಿ ಹಾಗೂ ಸ್ಥಳೀಯರು ಎಲ್ಲ ಮನೆಗಳಿಗೆ ಶಾಲಾ ಅವಧಿಗೆ ಮುನ್ನ ಹಾಗೂ ನಂತರ ಭೇಟಿ ನೀಡಿ, ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರದ ಆಶಯ ಹಾಗೂ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಸೂಚಿಸಿದರು. ಜೊತೆಗೆ ಇಲಾಖೆ ನೀಡುತ್ತಿರುವ ಎಲ್ಲ ಸವಲತ್ತು ಪರಿಚಯಿಸಬೇಕು. ಪ್ರಾರಂಭೋತ್ಸವಕ್ಕೆ ಮಕ್ಕಳನ್ನು ಎತ್ತಿನ ಗಾಡಿ,ಆಟೊ ಹಾಗೂ ವಿವಿಧ ವಾಹನಗಳ ಮೂಲಕ ಶಾಲೆಗೆ ಖುಷಿಯಿಂದ ಕರೆತರಬೇಕು ಇದಕ್ಕೆ ಅಗತ್ಯ ತಯಾರಿ ಹಾಗೂ ಪ್ರಚಾರ ನಡೆಸಿ ಶಾಲಾ ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರೇರೇಪಿಸಬೇಕು.ಇನ್ನು ಶಾಲಾ ಕೊಠಡಿ ಮೈದಾನ ಶೌಚಾಲಯ ಅಂಗಳ ಸರಿಯಾದ ಸ್ವಚ್ಛತೆ ಕೈಗೊಂಡು ಶಾಲಾ ವಾತಾವರಣ ಸುರಕ್ಷಿತವಾಗಿರಬೇಕು. ಶಾಲಾವಾರು ನೋಡಲ್ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸಿದ್ದತೆ ಕುರಿತು ವರದಿ ನೀಡುವಂತೆ ತಿಳಿಸಿದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಮಕ್ಕಳನ್ನು ಆಕರ್ಷಿಸುವ ಹಾಗೆ ಕಲಿಕಾ ವಾತಾವರಣಕ್ಕೆ ಸಿದ್ಧಗೊಳಿಸಿ, ಆಟದ ಮೈದಾನ, ಶೌಚಾಲಯದ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಮಕ್ಕಳನ್ನು ಕೈಬಿಸಿ ಶಾಲೆಯತ್ತ ಕರಿಯುವ ಹಾಗೆ ಕಲಿಕಾ ವಾತಾವರಣ ನಿರ್ಮಿಸಿ, ಶಾಲಾ ಪ್ರಾರಂಭೋತ್ಸವವನ್ನು ತಳಿರು ತೋರಣಗಳಿಂದ ಶೃಂಗರಿಸಿ, ಈ ಅದ್ದೂರಿ ಪ್ರಾರಂಭೋತ್ಸವವು ಹಬ್ಬದ ವಾತಾವರಣದಂತಿರಲಿ ಶಾಲಾ ಶೈಕ್ಷಣಿಕ ಯೋಜನೆ,ಕ್ಯಾಮ್ಸ್, ಸೇತುಬಂಧ, ವಿವಿಧ ಕ್ಲಬ್ಗಳು ಅವುಗಳ ಉದ್ದೇಶ , ವಾರ್ಷಿಕ ಕ್ರಿಯಾಯೋಜನೆಯು, ಫಲಿತಾಂಶಮುಖಿಯಾಗಿರಲಿ, ಬುನಾದಿ, ಸಂಖ್ಯಾ ಜ್ಞಾನ, ಸಾಕ್ಷರತೆ ಹಾಗೂ ನಿಧಾನಕಲಿಕೆ ವಿದ್ಯಾರ್ಥಿಗಳ ಪ್ರಗತಿಗೋಸ್ಕರ ಸಿದ್ದಪಡಿಸಿದ ನಮೂನೆಗಳೊಂದಿಗೆ ದಾಖಲಿಕರಿಸುವುದು, ಶಾಲಾ ಕೊಠಡಿಗಳಲ್ಲಿ ಶಿಕ್ಷಕರು ಚೈತನ್ಯಯತವಾಗಿ ಚಟುವಟಿಕೆ ಆಧಾರಿತ ಬೋಧನೆ ಒತ್ತು ನೀಡುವುದು,ಶಿಕ್ಷಕರು ತಮ್ಮ ಪಾಠದ ಉದ್ದೇಶವನ್ನರಿತು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಣಾಮವಾಗಿ ಬೋಧಿಸುವ ಪ್ರಕ್ರಿಯೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಓದಿಸುವ ಬರೆಸುವ ಪ್ರಯತ್ನ ಪ್ರತಿನಿತ್ಯ ಆಗಲೇ ಬೇಕು. ನಿತ್ಯವೂ ವಿದ್ಯಾರ್ಥಿಯನ್ನು ಕಾಳಜಿ ಯಿಂದ ಮಾತನಾಡಿಸಿ ಕಲಿಕೆಯಲ್ಲಿ ಕ್ಲಿಷ್ಟಕರ ಅಂಶಗಳನ್ನು ಪಟ್ಟಿ ಮಾಡಿ ಸರಳಿಕರಣಗೊಳಿಸುವಲ್ಲಿ ನಮ್ಮೆಲ್ಲರ ಪಾತ್ರ ಬಹುಮುಖ್ಯ, ಜೊತೆಗೆ ಇಂದಿನ ಮಕ್ಕಳಲ್ಲಿ ಮೌಲ್ಯ ಶಿಕ್ಷಣದ ಅವಶ್ಯಕತೆ ತುಂಬಾ ಇದ್ದು ಅವುಗಳನ್ನು ರೂಡಿಸಲು ನಾವೆಲ್ಲರೂ ಕಂಕಣಭದ್ಧರಾಗಿರಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ನಮ್ಮ ಆದ್ಯತೆ ಮೊದಲಿರಲಿ , ಮನೆ ಭೇಟಿ ಮೊದಲ ಸೋಮವಾರ ಹಾಗೂ ಮೂರನೇ ಸೋಮವಾರ ಕಡ್ಡಾಯವಾಗಿ ಮಾಡಿ ಮೇಲುಸ್ತುವಾರಿ ಅಧಿಕಾರಿಗಳು ಪ್ರತಿ ನಿತ್ಯ ಶಾಲೆಗಳಿಗೆ ಭೇಟಿ ನೀಡಿ ಕುಂದು ಕೊರತೆಗಳ ಪಟ್ಟಿ ನೀಡುವದು, ಸೇತುಬಂಧ ಪೂರ್ವದಲ್ಲಿ ಕಲಿಕಾ ಫಲಗಳ ಪಟ್ಟಿ ಪಡೆದು,ಸೇತುಬಂಧದ ನಂತರ ಮಗು ಯಾವ ವಿಷಯದಲ್ಲಿ ನಿಧಾನಕಲಿಕೆ ಹೊಂದಿದ್ದಾನೆ ಎಂಬ ಪಟ್ಟಿ, ಎಲ್ಲ ವಿಷಯವಾರು ಶಿಕ್ಷಕರ ಹತ್ತಿರ ಇರಲಿ ಜೊತೆಗೆ ಆ ಮಗು ಸಾಮರ್ಥ್ಯ ಸಾಧಿಸುವಲ್ಲಿ ತಮ್ಮ ಪ್ರಯತ್ನ ಇರಲಿ ಹಾಗೂ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಿ ಎಫ್ ಪೂಜಾರವರು ಇಲಾಖೆಯ ಅನೇಕ ಒತ್ತಡಗಳಲ್ಲಿ ಕೂಡ ನಮ್ಮೆಲ್ಲ ಶಿಕ್ಷಕರ ಪ್ರಯತ್ನದಿಂದ ಗುಣಾತ್ಮಕ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ಇಲಾಖಾಧಿಕಾರಿಗಳ ಮಾರ್ಗದರ್ಶನ ಸತತ ಭೇಟಿಯಿಂದ ಒಳ್ಳೆಯ ಕಲಿಕಾ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ ವಿ ನಡುವಿನಮನಿಯವರು ಮಕ್ಕಳಿಗಾಗಿ ವಿಶೇಷ ಶಿಬಿರಗಳನ್ನು ಏರ್ಪಡಿಸುವುದರಿಂದ ಜೊತೆಗೆ ವಿಷಯವಾರು ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಕ್ಲಿಷ್ಟಕರಂಶಗಳನ್ನು ಸರಳಿ ಕರಣಗೊಳಿಸಿದ್ದರ ಪರಿಣಾಮ ಗುಣಾತ್ಮಕ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಜಿಲ್ಲಾ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳಾದ ಶ್ರೀ ಎಚ್ ಬಿ ರೆಡ್ಡರ್ ಫಲಿತಾಂಶ ವಿಶ್ಲೇಷಣೆಯನ್ನು ಮಾಡಿದರು.ಶಿಕ್ಷಣಾಧಿಕಾರಿಗಳಾದ ಶ್ರೀ ಎಂ ಎಚ್ ಕಂಬಳಿ ಅವರು ಬಾಲ್ಯ ವಿವಾಹದ ಕಾಯ್ದೆ, ತಡೆಗಟ್ಟುವ ಕ್ರಮಗಳು ಕುರಿತು ಮಾತನಾಡಿದರು.
ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಂ ಕೆ ಲಮಾಣಿಯವರು ಮಾತನಾಡುತ್ತಾ ವಿಶೇಷವಾಗಿ ಈ ವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಅಧಿಕಾರಿಗಳು ಪಟ್ಟ ಪರಿಶ್ರಮಕ್ಕೆ ಎಷ್ಟು ಶ್ಲಾಘಿಸಿದರು.ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಗುಣಾತ್ಮಕ ಫಲಿತಾಂಶ ಫಲಿತಾಂಶ ನಮ್ಮದಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು,
ವೇದಿಕೆ ಮೇಲೆ ಗದಗ ಶಹರದ ಕ್ಷೇತ್ರಶಿಕ್ಷಣಧಿಕಾರಿಗಳಾದ ಶ್ರೀ ಆರ್ ವಿ ಶಟ್ಟೇಪ್ಪನವರ, ಶರಣಪ್ಪ ನಾಗರಳ್ಳಿ, ಎ ಎಸ್ ಪಾಟೀಲ, ಲಲಿತ ವಾಣಿಕ್ಯಾಳ, ಸರೋಜಿನಿ ಬಂಡಿವಡ್ಡರ, ಶ್ರೀಧರ್ ಬಡಿಗೇರ, ಚಂದ್ರಕಾಂತ ಕಬಾಡಿ ಉಪಸ್ಥಿತರಿದ್ದರು. ಜಿಲ್ಲೆಯ ಒಟ್ಟು ೩೦೦ ಕ್ಕೂ ಹೆಚ್ಚು ಪ್ರೌಢಶಾಲಾ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು
ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ಎಸ್ ಬಿ ದೊಡ್ಡನವರ, ಸ್ವಾಗತವನ್ನು ಶ್ರೀಧರ್ ಬಡಿಗೇರ, ಕಾರ್ಯಕ್ರಮ ನಿರೂಪಣೆಯನ್ನು ಪ್ರಕಾಶ ಮಂಗಳೂರು ನೆರವೇರಿಸಿದರೆ ವಂದನಾರ್ಪಣೆಯನ್ನು ಶ್ರೀ ಎಂ ಎಚ್ ಸವದತ್ತಿ ನಿರ್ವಹಿಸಿದರು.
