Home » News » ಮತ್ತೆ ಮೆರೆಯುತ್ತಾ ಬರ್ತಿದೆ ಕೊರೊನಾ: ಕೇರಳ ಅಗ್ರಸ್ಥಾನದಲ್ಲಿ, ಬೆಂಗಳೂರು ಸಹ ನಿರ್ಲಕ್ಷ್ಯಕ್ಕೆ ಸ್ಥಳವಿಲ್ಲ! ಸರ್ಕಾರದ ಮಾರ್ಗಸೂಚಿ ಬಿಡುಗಡೆ: ಗದಗ ಜೀಮ್ಸ್ ನಲ್ಲಿ ಏನೆಲ್ಲಾ ಸಿದ್ಧತೆ..!?

ಮತ್ತೆ ಮೆರೆಯುತ್ತಾ ಬರ್ತಿದೆ ಕೊರೊನಾ: ಕೇರಳ ಅಗ್ರಸ್ಥಾನದಲ್ಲಿ, ಬೆಂಗಳೂರು ಸಹ ನಿರ್ಲಕ್ಷ್ಯಕ್ಕೆ ಸ್ಥಳವಿಲ್ಲ! ಸರ್ಕಾರದ ಮಾರ್ಗಸೂಚಿ ಬಿಡುಗಡೆ: ಗದಗ ಜೀಮ್ಸ್ ನಲ್ಲಿ ಏನೆಲ್ಲಾ ಸಿದ್ಧತೆ..!?

by CityXPress
0 comments

ಐದು ವರ್ಷಗಳ ಹಿಂದೆ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡ ರಣರಕ್ಕಸ ಕೊರೊನಾ ವೈರಸ್ ಈಗ ಮತ್ತೆ ತನ್ನ ಕಾಲುಚೀಲ ಹೊತ್ತಿದೆ. ಬಾರಿ ದೇಶ ರಾಜಧಾನಿ ದೆಹಲಿಯಿಂದ ಹಿಡಿದು ನಮ್ಮ ಕರ್ನಾಟಕ, ಕೇರಳದವರೆಗೆ ಆತಂಕದ ನೆರಳು ಮರೆದಿದೆ.

ಕೆಲ ದಿನಗಳ ಹಿಂದೆ ದೆಹಲಿಯಲ್ಲಿ 99 ಕೊರೊನಾ ಪ್ರಕರಣಗಳಿರಲಿದ್ದರೆ, ಇಂದು ಅದು 104 ಕ್ಕೆ ತಲುಪಿದೆ. ದೇಶದಲ್ಲಿ ದೆಹಲಿ ಈಗ 3 ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ 209 ಪ್ರಕರಣಗಳೊಂದಿಗೆ 2 ನೇ ಸ್ಥಾನದಲ್ಲಿದ್ದು, ಬಾರಿಯೂ ಕೇರಳ 430 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನಮ್ಮ ಕರ್ನಾಟಕದಲ್ಲಿಯೂ 71 ಪ್ರಕರಣಗಳು ವರದಿಯಾಗಿವೆ.

banner

ಮಹಾರಾಷ್ಟ್ರದಲ್ಲಿ ಈಗಾಗಲೇ ನಾಲ್ಕು ಸಾವುಗಳು ಸಂಭವಿಸಿದ್ದು, ಕೇರಳದಲ್ಲಿ ಎರಡು ಮತ್ತು ಕರ್ನಾಟಕದಲ್ಲಿ ಒಂದು ಸಾವಿನ ಪ್ರಕರಣ ವರದಿಯಾಗಿದೆ. ಇದರಿಂದ ರೋಗದ ಗಂಭೀರತೆಯನ್ನು ಕಡೆಗಣಿಸುವಂತಿಲ್ಲ.

ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಈಗಾಗಲೇ 71 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ದಿನದಿಂದ ದಿನಕ್ಕೆ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ RT-PCR ಮತ್ತು RAT ಪರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದೀಗ ದಿನಕ್ಕೆ ಕನಿಷ್ಠ 150 ರಿಂದ 200 ಪರೀಕ್ಷೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ.

1. ಗಂಭೀರ ಉಸಿರಾಟದ ಸೋಂಕು (SARI) ಹೊಂದಿರುವ ಎಲ್ಲರಿಗೂ ಕಡ್ಡಾಯವಾಗಿ RT-PCR ಪರೀಕ್ಷೆ ಮಾಡಬೇಕು.

2. ವಯೋವೃದ್ಧರು, ಗರ್ಭಿಣಿಯರು, ಮಕ್ಕಳಲ್ಲಿ ರೋಗ ಲಕ್ಷಣಗಳಿದ್ದರೆ ಕೂಡಲೇ ಪರೀಕ್ಷೆ ಮಾಡಬೇಕು.

3. ಪರೀಕ್ಷಾ ಮಾದರಿಗಳನ್ನು ಅದೇ ದಿನ ಸರ್ಕಾರಿ ಪ್ರಯೋಗಾಲಯಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು.

4. ಲಭ್ಯವಿರುವ ಕೋವಿಡ್ ಪರೀಕ್ಷಾ ಕಿಟ್‌ಗಳನ್ನು ಹಳೆಯದರಿಂದ ಹೊಸದಕ್ಕೇರಿಸುವ FIFO ವಿಧಾನದಲ್ಲಿ ಬಳಸಬೇಕು.

ಇನ್ನು ಪ್ರತಿ ಜಿಲ್ಲೆಗಳಿಗೂ ಮಾರ್ಗಸೂಚಿ ಸುತ್ತೋಲೆ ಹೊರಡಿಸಿರೋ ಆರೋಗ್ಯ ಇಲಾಖೆ, ಗದಗ ಜಿಲ್ಲೆಗೂ ಮಾರ್ಗಸೂಚಿ ರವಾನಿಸಿದೆ. ನಗರದ ಜೀಮ್ಸ್ ಆಸ್ಪತ್ರೆಯಲ್ಲಿ ಮಾರ್ಗಸೂಚಿ ಪ್ರಕಾರ ಎಲ್ಲ ಸಿದ್ಧತೆ ಒಳಗೊಂಡಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಸಹ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ನಗರ ಜೀಮ್ಸ್ ಆಸ್ಪತ್ರೆಯಲ್ಲಿ, ಕೊರೊನಾ ಹೊಸ ರೂಪಾಂತರಿ ಯಾವುದೇ ಆಕ್ರಮಣಕ್ಕೆ, ಆಡಳಿತ ಮಂಡಳಿ ಸಕಲ ರೀತಿಯಲ್ಲಿ ಸಜ್ಜಾಗಿದೆ. 890 ಬೆಡ್ ಗಳನ್ನ ಜೀಮ್ಸ್ ಹೊಂದಿದ್ದು, 50 MICU (ತೀವ್ರ ನಿಗಾ ಘಟಕ) ಹಾಗೂ 20 ಚಿಕ್ಕಮಕ್ಕಳ ತೀವ್ರ ನಿಗಾ ಘಟಕ ಒಳಗೊಂಡಂತೆ, ಸಮರ್ಪಕ ಆಕ್ಸಿಜನ್ ಸೌಲಭ್ಯವನ್ನ ಆಸ್ಪತ್ರೆ ಒಳಗೊಂಡಿದೆ ಎಂದು ಜೀಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದು, ಸರ್ಕಾರದ ಮಾರ್ಗಸೂಚಿ ಅನ್ವಯ, SARI ಟೆಸ್ಟ್, ಸೇರಿದಂತೆ ಇನ್ನಿತರೆ ಪರೀಕ್ಷೆಗಳನ್ನ ಈಗಾಗಲೇ ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ.

ಅಂಡಮಾನ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲವೆಂದರೂ, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಈಗಾಗಲೇ 1,009 ದಾಟಿದೆ.

ಇನ್ನಷ್ಟು ಬಾರಿ ಕೊರೊನಾನ್ನು ಪರಿಗಣಿಸದೇ ಇರುವ ಶಕ್ತಿ ನಮಗೆ ಇಲ್ಲ. ಹಿಂದಿನ ಅನುಭವಗಳಿಂದ ಕಲಿತು, ಬಾರಿ ನಾವು ಸಜ್ಜಾಗಿ ಇರುವ ಸಮಯ ಬಂದಿದೆ. ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಳ್ಳಿ, ಹಾಗೂ ಅಗತ್ಯವಿದ್ದರೆ ಮಾತ್ರ ಬಾಹ್ಯಗಮನ ಮಾಡಿ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb