ಗದಗ, ಮೇ 12 : ಗದಗ ಜಿಲ್ಲೆಯ ಮೀನುಗಾರಿಕೆ ಸಹಕಾರಿ ಸಂಘಗಳಿಗಾಗಿ ಮಹತ್ವದ ಅವಕಾಶ ಲಭಿಸಲಿದೆ. ಜಿಲ್ಲಾ ಮೀನುಗಾರಿಕೆ ಇಲಾಖೆಯ ಅಧೀನದಲ್ಲಿರುವ ಕೆಲ ಕೆರೆಗಳ ಮೀನುಗಾರಿಕೆ ಹಕ್ಕುಗಳನ್ನು ಗುತ್ತಿಗೆ ಮೂಲಕ ನೀಡುವ ಕುರಿತು ಇಲಾಖೆ ಪ್ರಸ್ತಾವನೆ ಆಹ್ವಾನಿಸಿದೆ. ಈ ಮೂಲಕ ಅರ್ಹ ಮತ್ತು ಆಸಕ್ತ ಸಹಕಾರಿ ಸಂಘಗಳು ತಮ್ಮ ಸಂಸ್ಥೆಗಳ ವ್ಯಾಪ್ತಿಯ ಕೆರೆಗಳ ಮೀನು ಉತ್ಪಾದನೆ ಹಾಗೂ ಸಂಗ್ರಹಣೆಗೆ ಭಾಗವಹಿಸಬಹುದಾಗಿದೆ.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಈ ಗುತ್ತಿಗೆ 2025-26ನೇ ಮೀನುಗಾರಿಕೆ ಫಸಲಿ ವರ್ಷದಿಂದ ಆರಂಭವಾಗಿ 5 ವರ್ಷಗಳ ಅವಧಿಗೆ, ಅಂದರೆ 01-05-2025ರಿಂದ 30-06-2030ರವರೆಗೆ ಇರಲಿದೆ. ಸಂಬಂಧಪಟ್ಟ ಸಂಸ್ಥೆಗಳು ಸರ್ಕಾರದ ಗುತ್ತಿಗೆ ನಿಯಮ ಹಾಗೂ ಷರತ್ತುಗಳನ್ನು ಪಾಲಿಸಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-05-2025.
ಅರ್ಜಿಗಳನ್ನು ಸಲ್ಲಿಸಬೇಕಾದ ಸ್ಥಳ: ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ, ಮುಂಡರಗಿ.
ಗುತ್ತಿಗೆಗೆ ಪ್ರಸ್ತಾಪಿಸಲಾದ ಕೆರೆಗಳ ವಿವರ:
ಮುಂಡರಗಿ ತಾಲ್ಲೂಕು: ಚಿಕ್ಕವಡ್ಡಟ್ಟಿ ಕೆರೆ,ಮುರಡಿ ಕೆರೆ, ಕೇಲೂರು ಕೆರೆ, ಶಿರಹಟ್ಟಿ ತಾಲ್ಲೂಕಿನ ಕೆರೆ, ಲಕ್ಷ್ಮೇಶ್ವರ ತಾಲ್ಲೂಕು:, ಪೇಠಬಣ ಕೆರೆ

ಈ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಂಬಂಧಿತ ವಿವರಗಳಿಗಾಗಿ ಸ್ಥಳೀಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಮತ್ತು ಮುಖ್ಯವಾಗಿ: ಈ ಗುತ್ತಿಗೆ ಪ್ರಕ್ರಿಯೆ ರೈತ ಮೀನುಗಾರರ ಉತ್ಪಾದಕ ಸಂಸ್ಥೆಗಳಿಗೆ ಮೀನುಗಾರಿಕೆಯ ಹಕ್ಕುಗಳನ್ನು ನೀಡುವ ಮೂಲಕ ಗ್ರಾಮೀಣ ಆರ್ಥಿಕತೆಯ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಈ ಅವಕಾಶವನ್ನು ಜಿಲ್ಲೆಯ ಎಲ್ಲಾ ಅರ್ಹ ಮೀನುಗಾರಿಕೆ ಸಹಕಾರಿ ಸಂಘಗಳು ಸದುಪಯೋಗಪಡಿಸಿಕೊಳ್ಳುವಂತೆ ಇಲಾಖೆಯು ಕೋರಿದೆ.
