ಗದಗ: ನಗರದ ಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ವಿನಯ್ ಚಿಕ್ಕಟ್ಟಿ ICSE ಶಾಲೆ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದು, ಇತ್ತೀಚೆಗೆ ಪ್ರಕಟವಾದ ICSE 10ನೇ ತರಗತಿಯ ಫಲಿತಾಂಶದಲ್ಲಿ ಶೇಕಡಾ 100 ರಷ್ಟು ಫಲಿತಾಂಶವನ್ನ ಸಾಧಿಸಿದೆ. ಈ ವರ್ಷ ಒಟ್ಟು 27 ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಅತ್ಯುತ್ತಮ ಫಲಿತಾಂಶದಿಂದ ಶಾಲೆಗೆ ಕೀರ್ತಿ ತಂದಿದ್ದಾರೆ.
ಇವರಲ್ಲಿ ಪ್ರಜ್ಞಾ ಬಿ. ಬೊಮ್ಮನಹಳ್ಳಿ 483 ಅಂಕಗಳನ್ನು (96.60%) ಗಳಿಸಿ ಶಾಲೆಯ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರು ಶ್ರಮ, ಶಿಸ್ತು ಹಾಗೂ ಶಿಕ್ಷಣ ಸಂಸ್ಥೆಯ ಮಾರ್ಗದರ್ಶನದ ಪರಿಣಾಮವಾಗಿಯೇ ಈ ಸಾಧನೆ ಸಾಧ್ಯವಾಯಿತು ಎಂಬುದು ಶಾಲೆಯ ಅಭಿಪ್ರಾಯವಾಗಿದೆ.
ಆಸ್ಪಾಕೌಸರ್ ಎಮ್. ಅಳವಂಡಿ 469 ಅಂಕಗಳನ್ನು (93.80%) ಪಡೆದು ದ್ವಿತೀಯ ಸ್ಥಾನದಲ್ಲಿ ತಮಗೆ ಲಭ್ಯವಿರುವ ಸಂಪನ್ಮೂಲಗಳನ್ನು ಸದ್ವೀಪಯೋಗ ಮಾಡಿಕೊಂಡಿದ್ದಾರೆ.

ಮೈತ್ರಿ ಸುನೀಲ್ ಎಳಮಲೆ 453 ಅಂಕಗಳನ್ನು (90.60%) ಪಡೆದು ತೃತೀಯ ಸ್ಥಾನದಲ್ಲಿದ್ದಾರೆ. ಈಕೆಯ ಶಿಸ್ತಿನ ಓದು ಮತ್ತು ನಿರಂತರ ಪರಿಶ್ರಮ ಫಲ ನೀಡಿದೆ.
ಇನ್ನುಳಿದ ಎಲ್ಲ ವಿದ್ಯಾರ್ಥಿಗಳು ಕೂಡ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಯ ಶೈಕ್ಷಣಿಕ ಮಟ್ಟವನ್ನು ಮತ್ತಷ್ಟು ಮೇಲಕ್ಕೆತ್ತಿದ್ದಾರೆ. ಇಂತಹ ಫಲಿತಾಂಶವು ಶಾಲೆಯ ನಿಯಮಿತ ಪಠ್ಯಕ್ರಮ, ಅನುಭವ ಸಂಪನ್ನ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಶ್ರಮದ ಸಮ್ಮಿಲಿತ ಫಲವಾಗಿದೆ.
ಈ ಯಶಸ್ಸಿನ ಹಿನ್ನೆಲೆಯಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್. ವೈ. ಚಿಕ್ಕಟ್ಟಿ, ಪ್ರಾಚಾರ್ಯರು ಹಾಗೂ ಇತರ ಶಿಕ್ಷಕರ ತಂಡ ವಿದ್ಯಾರ್ಥಿಗಳನ್ನು ಹಾರ್ದಿಕವಾಗಿ ಅಭಿನಂದಿಸಿದ್ದು, ಇಂದಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಪ್ರಜ್ಞಾವಂತ ನಾಗರಿಕರಾಗಿ ಬೆಳೆವಂತೆ ಶುಭ ಹಾರೈಸಿದ್ದಾರೆ.
ಶಾಲೆಯ ಈ ಸಾಧನೆಗೆ ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ.
