ಲಕ್ಷ್ಮೇಶ್ವರ: ಜಮ್ಮು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಪ್ರವಾಸಿವತಾಣದಲ್ಲಿ ಭಯೋತ್ಪಾದಕರು ನಡೆಸಿದ ಹೇಯ ಗುಂಡಿನ ದಾಳಿ ಖಂಡಿಸಿ ಲಕ್ಷ್ಮೇಶ್ವರ ದ ಅಂಜುಮನ್ ಏ ಇಸ್ಲಾಂ, ಕಮಿಟಿ ತಹಶಿಲ್ದಾರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು
ನಂತರ ಮಾತನಾಡಿದ ಕಮಿಟಿಯ ಅಧ್ಯಕ್ಷ ಮುಕ್ತಾಯಾ ಅಹ್ಮದ್, ಜಮ್ಮು ಮತ್ತು ಕಾಶ್ಮೀರದ ‘ಪಹಲ್ಗಾಮ್’ ಪಟ್ಟಣದ ‘ಬೈಸರನ್’ ಪ್ರವಾಸಿ ತಾಣದಲ್ಲಿ ಭಯೋತ್ಪಾದಕರು ನಡೆಸಿದ ಹೇಯ ಗುಂಡಿನ ದಾಳಿಗೆ ‘ನಾಗರಿಕ ಸಮಾಜ’ ತಲೆ ತಗ್ಗಿಸುವಂತಾಗಿದೆ. ಕೋಮುವಾದಿ ಮನಸ್ಥಿತಿಯಿಂದ ಮುಗ್ಧ ನಾಗರಿಕರ ಮೇಲೆ ನಡೆಸಿದ ಈ ದಾಳಿಯನ್ನ ನಮ್ಮ ಸಂಘಟನೆ, ಸಂಸ್ಥೆಗಳಿಂದ ತೀವ್ರವಾಗಿ ಖಂಡಿಸುತ್ತೇವೆ.
ಈ ದಾಳಿಯಿಂದ ಇಡೀ ದೇಶ ಅಘಾತಗೊಂಡಿದೆ. ಕಾಶ್ಮೀರದ ಭಯೋತ್ಪಾದನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ನಮ್ಮ ಸಂಘಟನೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಭದ್ರತಾ ಪಡೆಗಳನ್ನು ಹೆಚ್ಚಾಗಿ ನಿಯೋಜಿಸಬೇಕು. ಇದರಿಂದ ಶಾಂತಿ ಸ್ಥಾಪಿಸಲು ಸಾಧ್ಯ. ಮುಗ್ಧ ಜನರನ್ನು ಹತ್ಯೆ ಮಾಡುವುದು ಇಡೀ ಮಾನವತೆಯನ್ನು ಹತ್ಯೆ ಮಾಡಿದಂತೆ ಅಂತವರನ್ನು ಸುಮ್ಮನೆ ಬಿಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ನಂತರ ಮಾತನಾಡಿದ ಸಾಹೇಬಜಾನ ಹವಾಲ್ದಾರ ಮತ್ತು ಪೀರೋದೋಷ ಆಡೂರ ಪಹಲ್ಗಾಮ್‌ನಲ್ಲಿ ಉಗ್ರರು ಅಮಾಯಕರ ಮೇಲೆ ನಡೆಸಿದ ಈ ಕೃತ್ಯವನ್ನು ಎಂದಿಗೂ ಕ್ಷಮಿಸಲಾರೆವು. ಎಲ್ಲಾ ಧರ್ಮಗಳ ಸಾರ ‘ಪ್ರೀತಿ’ ಮತ್ತು ‘ಅಹಿಂಸೆ’ ಪ್ರೀತಿಯಿಂದ ಸಾಧಿಸಲಾಗದ್ದನ್ನು ಹಿಂಸೆ-ದ್ವೇಷದಿಂದ ಸಾಧಿಸಲಾಗದು.
ದೇಶದ ಏಕತೆ ಹಾಗೂ ಸಮಗ್ರತೆಗೆ ಎಲ್ಲ ಧರ್ಮದವರು ಒಂದಾಗಬೇಕು, ಈ ದಾಳಿಯಲ್ಲಿ ಯಾರೇ ಇರಲಿ ಅವರಿಗೆ ಉಗ್ರ ಶಿಕ್ಷೆ ಆಗಬೇಕು. ಇದೊಂದು ಹೇಡಿತನದ ಕೃತ್ಯ.ನಮ್ಮ ದೇಶ ಶಾಂತಿ ಪ್ರಿಯ ದೇಶ. ಸಹಬಾಳ್ವೆ-ಸಾಮರಸ್ಯದಿಂದ ಕೂಡಿದೆ. ಸರ್ಕಾರಗಳು ಉಗ್ರರು ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಕೈಗೊಂಡು ಪ್ರವಾಸಿ ತಾಣಗಳನ್ನು, ಸಾರ್ವಜನಿಕರು ರಕ್ಷಿಸಲು ಸರ್ವಧರ್ಮೀಯರನ್ನು ಈ ಮೂಲಕ ಒಮ್ಮತದಿಂದ ನಾವು ವಿನಂತಿ ಮಾಡುತ್ತೇವೆ. “ಮನುಕುಲಕ್ಕೆ ಮಾರಕವಾದ ಭಯೋತ್ಪಾದಕರನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ಸದ್ಯ ಸ್ಥಿತಿಯಲ್ಲಿ ಅಗತ್ಯ. ಈ ಕುರಿತು ಉಗ್ರರ ದಾಳಿಯನ್ನು ಖಂಡಿಸುತ್ತೇವೆ ಎಂದರು.

ಸಂದರ್ಭದಲ್ಲಿ ಮುಕ್ತಾಯಾಅಹ್ಮದ ಗದಗ, ಪೀರದೋಷ ಆಡೂರ, ಸಾಹೇಬಜಾನ ಹವಾಲ್ದಾರ, ಸುಲೇಮಾನಸಾಬ ಕಣಕೆ, ಮುಸ್ತಾಕಾಹ್ಮದ ಶಿರಹಟ್ಟಿ, ಕರಿಮಸಾಬ ಶಿರಹಟ್ಟಿ, ಶೇಖಬ್ದುಲ್, ಅಮದಸಾಹೇಬಹ್ ನಾಯಕ, ದಾದಾಪೀರ್, ಕ್ವಾಜಾಪೀರ ಜಮುಖಂಡಿ, ತೌಶೀಫ ಮಂಜಲಾಪೂರ, ಇಸ್ಮಾಯಿಲ್ ಆಡೂರ, ವಾಶೀಮ್ ಮುಚ್ಚಾಲೆ, ಯು.ಡಿ.ಚೌರಿ, ಕಲಂದರ್ ಸೂರಣಗಿ, ಮಹಮ್ಮದ್ ಸಾಧಿಕ ಹುಲಗೇರಿ, ಆಶೀಫ್ ಬಸನಕೊಪ್ಪ ಮತ್ತಿತರಿದ್ದರು.
