Home » News » “ಒಗ್ಗಟ್ಟೇ ಆಯುಧ: ಬಿಜೆಪಿ ಕಾರ್ಯಕರ್ತರಿಗೆ ವಿಜಯೇಂದ್ರನ ಕಠಿಣ ಎಚ್ಚರಿಕೆ”

“ಒಗ್ಗಟ್ಟೇ ಆಯುಧ: ಬಿಜೆಪಿ ಕಾರ್ಯಕರ್ತರಿಗೆ ವಿಜಯೇಂದ್ರನ ಕಠಿಣ ಎಚ್ಚರಿಕೆ”

by CityXPress
0 comments

ಬಿಜೆಪಿಯಲ್ಲಿ ವೈಮನಸ್ಸು ಕೊನೆಗೊಳಿಸಿ, ಒಗ್ಗಟ್ಟಿಗೆ ಶಕ್ತಿ ಪ್ರದರ್ಶಿಸೋಣ: ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರನ ಪ್ರಬಲ ಆಹ್ವಾನ..

ಗದಗ: “ರಾಜಕೀಯ ಯುದ್ಧ ಆರಂಭವಾಗಿದೆ. ಈ ಬಾರಿ ಹಿಂದಿನ ತಪ್ಪುಗಳನ್ನು ಮರುಕಳಿಸುವ ಪ್ರಶ್ನೆಯೇ ಇಲ್ಲ. ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಂಡು, ಪಕ್ಷದ ಯಶಸ್ಸಿಗಾಗಿ ಶ್ರಮಿಸಬೇಕು” ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಂಗಳವಾರ ಗದಗ ನಗರದಲ್ಲಿ ಘೋಷಿಸಿದರು.

ಗದಗ ಜಿಲ್ಲಾ ಪ್ರವಾಸದ ಭಾಗವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪಕ್ಷದ ಒಳಗಿನ ವೈಮನಸ್ಸು ಹಾಗೂ ಸಂಘಟನೆಯ ಬಲವರ್ಧನೆ ಕುರಿತಂತೆ ಪ್ರಮುಖ ಅಭಿಪ್ರಾಯಗಳನ್ನು ಹಂಚಿಕೊಂಡರು. ಅವರು ಗದಗ ಸೇರಿ ಹಲವು ಜಿಲ್ಲೆಗಳ ಜಿಲ್ಲಾ ನಾಯಕರ ನಡುವೆ ಉಂಟಾಗಿರುವ ಅಸಮಾಧಾನ ಹಾಗೂ ಒಳಹೊಂದಾಣಿಕೆಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

banner

“ವೈಮನಸ್ಸು ದೂರಮಾಡುವುದು ನನ್ನ ಜವಾಬ್ದಾರಿ”

“ರಾಜ್ಯಾದ್ಯಂತ ಕೆಲ ಜಿಲ್ಲೆಗಳಲ್ಲಿರುವ ಪಕ್ಷದ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಚುನಾವಣೆಗೊಳಗಾಗುವ ಸಹಕಾರಾತ್ಮಕ ವಾತಾವರಣಕ್ಕೆ ಅಡ್ಡಿಯಾಗಬಾರದು. ಪಕ್ಷದಲ್ಲಿ ಒಗ್ಗಟ್ಟಿನ ವಾತಾವರಣವನ್ನು ನಿರ್ಮಿಸುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾನು ಸ್ವತಃ ಅಖಾಡಕ್ಕೆ ಇಳಿದು, ಎಲ್ಲ ಜಿಲ್ಲೆಗಳ ನಾಯಕರೊಂದಿಗೆ ಸಂವಾದ ನಡೆಸಿ, ಸಂಘಟನೆಯಲ್ಲಿ Discipline ಹಾಗೂ Direction ತಂದೆ ಹೊರಟಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು.

“ನಾನು ಹೆಬ್ಬಟ್ಟು ಅಲ್ಲ, ಜನತೆಯ ನಾಡಿಮಿಡಿತ ನನಗೊತ್ತಿದೆ”

ವಿಜಯೇಂದ್ರ ಅವರು ತಮ್ಮ ರಾಜಕೀಯ ಪಠಭೂಮಿಯತ್ತ ಗಮನ ಹರಿಸಿಕೊಂಡು, “ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕಳೆದ ಒಂದೂವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೆ 1998 ರಿನಿಂದಲೇ ಯಡಿಯೂರಪ್ಪ ಅವರೊಂದಿಗೆ ರಾಜ್ಯದ ಗಲಿಬಿಲಿ, ಜನತೆಯ ನೋವಿನ ಸ್ವರೂಪ, ಭಾಗ್ಯದ ಹೆಜ್ಜೆಗುರುತುಗಳನ್ನು ನನಗೆ ಅರಿವು. ನಾನು ಹೆಬ್ಬಟ್ಟು ಎಂಬ ಅಭಿಪ್ರಾಯಕ್ಕೆ ಮಣೆ ಹಾಕುವ ಅವಶ್ಯಕತೆಯೇ ಇಲ್ಲ” ಎಂದು ತಮ್ಮ ಅನುಭವವನ್ನು ಸತ್ಯವಾಗಿ ಬಿಚ್ಚಿಟ್ಟರು.

ವಿಧಾನಸಭಾ ಚುನಾವಣೆ: ಅಭ್ಯರ್ಥಿ ಘೋಷಣೆಗೆ ಮುಂಚಿತ ತಯಾರಿ

ಮುಂಬರುವ ವಿಧಾನಸಭಾ ಚುನಾವಣೆ ಕುರಿತಂತೆ ಮಾತನಾಡಿದ ಅವರು, “ಈ ಬಾರಿ ನಾವು ಆರು ತಿಂಗಳು ಮೊದಲೇ ಅಭ್ಯರ್ಥಿಗಳ ಘೋಷಣೆಗೆ ತೀರ್ಮಾನಿಸಿದ್ದು, ಇದು ಪಕ್ಷದ ಆಂತರಿಕ ಸಂಘಟನಾತ್ಮಕ ಶಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಹೆಜ್ಜೆಯಾಗಿದೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಸ್ಥಳೀಯ ಮಟ್ಟದಲ್ಲಿ ಸಜೀವ ಚಟುವಟಿಕೆ ಪ್ರಾರಂಭಿಸಲು ಇದು ಸಹಕಾರಿಯಾಗಲಿದೆ” ಎಂದರು.

ಅನುದಾನ ವಿಚಾರ: ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯತೆ ವಿರುದ್ಧ ಆಕ್ರೋಶ

ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳಿಗೆ ಅಗತ್ಯ ಅನುದಾನವನ್ನು ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸಂದರ್ಭ, ಅವರ ನಿರ್ಲಕ್ಷ್ಯಪೂರ್ಣ ಹಾಗೂ ತುಚ್ಯ ಮಾತುಗಳಿಂದ ನಿರಾಶೆ ವ್ಯಕ್ತವಾಗಿದೆ ಎಂದು ವಿಜಯೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದರು. “ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ಶಾಸಕರಿಗೂ ಸಮಾನ ಅನುದಾನ ನೀಡುವ ಔದಾರ್ಯವನ್ನು ತೋರಿದ್ದರು. ಆದರೆ ಪ್ರಸ್ತುತ ಸರ್ಕಾರದಲ್ಲಿ ಆ ಧೋರಣೆ ಕಾಣುತ್ತಿಲ್ಲ” ಎಂದು ಅವರು ಆರೋಪಿಸಿದರು.

ಜಾತಿಗಣತಿ: ರಾಜಕೀಯ ಉದ್ದೇಶಪೂರ್ಣತೆ ಮೇಲಿನ ಗಂಭೀರ ಆರೋಪ

ಜಾತಿಗಣತಿ ಕುರಿತಂತೆ ಮಾತನಾಡಿದ ವಿಜಯೇಂದ್ರ, “ಕಾಂಗ್ರೆಸ್ ಪಕ್ಷ ಈ ವಿಷಯವನ್ನು ಜನರ ಮನಸ್ಸುಗಳನ್ನು ತಪ್ಪಿಸುವ, ಜನಾಕ್ರೋಶ ಯಾತ್ರೆಯ ದಿಕ್ಕು ಬದಲಾಯಿಸುವ ಉದ್ದೇಶದಿಂದ ಉಪಯೋಗಿಸುತ್ತಿದೆ. ಈ ವರದಿ ಸಾಕಷ್ಟು ಹಿಂದೆಯೇ ಮಂಡಿಸಬಹುದಾಗಿತ್ತು. ಆದರೆ ಈಗ ವಿಶೇಷ ರಾಜಕೀಯ ಲಾಭಕ್ಕಾಗಿ ಬಹಿರಂಗಪಡಿಸಲಾಗಿದೆ” ಎಂಬ ಗಂಭೀರ ಆರೋಪವನ್ನು ಹೊರಿಸಿದರು. “ಜಾತಿಗಣತಿ ಅನುಷ್ಠಾನ ಸಾಧ್ಯವಿಲ್ಲ ಎಂಬುದು ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ. ಆದರೆ, ಇನ್ನೊಬ್ಬರು ಸಿಎಂ ಆಗಬಾರದು ಎಂಬ ರಾಜಕೀಯ ಖಾತಿರಿಗಾಗಿ ಈ ವರದಿಯನ್ನು ಉಪಯೋಗಿಸುತ್ತಿದ್ದಾರೆ” ಎಂದು ಅವರು ದೂರಿದರು.

ಸಂಘಟನಾತ್ಮಕ ಬಲ ಮತ್ತು ಭವಿಷ್ಯದ ತಯಾರಿ

ವಿಜಯೇಂದ್ರ ಅವರು ಮಾತಿನ ಕೊನೆಯಲ್ಲಿ, “ಬಿಜೆಪಿ ಇಂದು ಬಹುಮತದತ್ತ ಸಾಗುವ ಸಮರ್ಥ ಪಕ್ಷವಾಗಿದೆ. ಆದರೆ ಅದಕ್ಕಿಂತ ಮುಂಚೆ ಕಾರ್ಯಕರ್ತರ ನಂಬಿಕೆಯನ್ನು ಗಳಿಸುವುದು ಮತ್ತು ಸಂಘಟನಾತ್ಮಕ ದೃಢತೆ ವೃದ್ಧಿಸುವುದು ನಮ್ಮ ಪ್ರಮುಖ ಗುರಿಯಾಗಬೇಕು” ಎಂದು ಹೇಳಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb