Home » News » “ಡ್ರಿಪ್ ಪೈಪ್‌-ಕಾಪರ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರು ಸೆರೆ, ಐವರು ಪರಾರಿ!”ಮುಂಡರಗಿ ಪೊಲೀಸರ ಕಾರ್ಯಾಚರಣೆ..!

“ಡ್ರಿಪ್ ಪೈಪ್‌-ಕಾಪರ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರು ಸೆರೆ, ಐವರು ಪರಾರಿ!”ಮುಂಡರಗಿ ಪೊಲೀಸರ ಕಾರ್ಯಾಚರಣೆ..!

by CityXPress
0 comments

ಗದಗ, ಏಪ್ರಿಲ್ 19:
ಗದಗ ಜಿಲ್ಲೆಯ ಮುಂಡರಗಿ ಠಾಣಾ ವ್ಯಾಪ್ತಿಯ ಜಂತ್ಲಿ-ಶಿರೂರ, ಹಿರೇವಡ್ಡಟ್ಟಿ ಹಾಗೂ ಅತ್ತಿಕಟ್ಟಿ ಗ್ರಾಮಗಳಲ್ಲಿ ಕಳೆದ ವರ್ಷ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳಿಗೆ ಮುಕ್ತಿಹಾದಿ ಸಿಕ್ಕಿದ್ದು, ಮುಂಡರಗಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ರೂ. 8.85 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

2024 ರಲ್ಲಿ ರೈತರ ಜಮೀನಿನಲ್ಲಿ ಇದ್ದ ಡ್ರಿಪ್ ಪೈಪ್ ಬಂಡಲಗಳು, ಹಾಗೂ ಗಾಳಿ ವಿದ್ಯುತ್ ಕಂಬದಲ್ಲಿನ ಕಾಪರ್ ಕೇಬಲ್ ಕಳ್ಳತನಗೊಂಡ ಘಟನೆಗಳ ಸಂಬಂಧ ಮುಂಡರಗಿ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಸಾರ್ವಜನಿಕ ಆಸ್ತಿ ಹಾಗೂ ಕೃಷಿ ವಸ್ತುಗಳ ಮೇಲಿನ ಈ ಕಳ್ಳತನಗಳು ಅಲ್ಲಿ ಭೀತಿ ಸೃಷ್ಟಿಸಿತ್ತು.

ಈ ಪ್ರಕರಣಗಳ ತನಿಖೆಗಾಗಿ ಗದಗ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಬಿ.ಎಸ್. ನೇಮಗೌಡ ರವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ಪೋಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಕುಸುಗಲ್ ಹಾಗೂ ಪಿಎಸ್‌ಐ ವಿ.ಜಿ. ಪವಾರ ನೇತೃತ್ವದ ತಂಡ ರಚನೆಯಾಯಿತು.

banner

ಬಂಧಿತರ ಪಟ್ಟಿ (ಪ್ರಮುಖ ನಾಲ್ವರು):

1. ಮೈಲಾರಪ್ಪ ಹನಮಂತಪ್ಪ ಕಾಡಣ್ಣವರ

2. ನಾಗರಾಜ ಕಣಿವೆಪ್ಪ ಬಾಲಣ್ಣವರ

3. ಮಾಬೂಸಾಬ @ ಮಾಬೂಸಿ ಮಹ್ಮದಸಾಬ ಕೋಲಕಾರ

4. ಶರಣಪ್ಪ ವಿರುಪಾಕ್ಷಪ್ಪ ಮೇವುಂಡಿ

ಇವರು ಸೇರಿ ಒಟ್ಟು 9 ಜನ ಆರೋಪಿತರು ಈ ಸರಣಿ ಕಳ್ಳತನಗಳಲ್ಲಿ ಭಾಗವಹಿಸಿದ್ದರು. ಉಳಿದ ಐವರು ಪರಾರಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.

ವಶಪಡಿಸಿದ ವಸ್ತುಗಳು:

204 ಡ್ರಿಪ್ ಪೈಪ್ ಬಂಡಲಗಳು – ಅಂದಾಜು ಮೌಲ್ಯ ರೂ. 5.15 ಲಕ್ಷ

ಕಾಪರ್ ಕೇಬಲ್ – ಅಂದಾಜು ಮೌಲ್ಯ ರೂ. 1.20 ಲಕ್ಷ

ಕಳ್ಳತನಕ್ಕೆ ಬಳಸಿದ ಟಾಟಾ ಇಂಟ್ರಾ ವಾಹನ (ಕೆಎ-25/ಎಬಿ-9182) – ರೂ. 2.50 ಲಕ್ಷ
ಒಟ್ಟು ಮೌಲ್ಯ: ರೂ. 8,85,000/-

ತೀವ್ರ ತನಿಖೆ ವೇಳೆ ಬಂಧಿತರು ದೋಷ ಒಪ್ಪಿಕೊಂಡಿದ್ದು, ಹಿರೇವಡ್ಡಟ್ಟಿ ಹಾಗೂ ಜಂತ್ಲಿ-ಶಿರೂರ ಪ್ರದೇಶಗಳಲ್ಲಿ ರೈತರ ಜಮೀನಿನಲ್ಲಿದ್ದ ಡ್ರಿಪ್ ಪೈಪ್ ಹಾಗೂ ಅತ್ತಿಕಟ್ಟಿ ಹದ್ದಿಯ ಗಾಳಿ ವಿದ್ಯುತ್ ಕಂಬದ ಕಾಪರ್ ಕೇಬಲ್ ಕಳವು ಮಾಡಿದರೆಂದು ನಿರೂಪಿಸಿದ್ದಾರೆ.

ಪೊಲೀಸರ ಪರಿಶ್ರಮಕ್ಕೆ ಮೆಚ್ಚುಗೆ: ಪತ್ತೆ ಕಾರ್ಯದಲ್ಲಿ ಪಾತ್ರವಹಿಸಿದ ಸಿಬ್ಬಂದಿ:

ಮಂಜುನಾಥ ಕುಸುಗಲ್ (ಇನ್ಸ್‌ಪೆಕ್ಟರ್), ವಿ.ಜಿ. ಪವಾರ, ಬಿ.ಎನ್.ಯಳವತ್ತಿ, ಎಸ್.ಎಮ್.ಹಡಪದ, ಜೆ.ಐ.ಬಚ್ಚೇರಿ, ಲಕ್ಷ್ಮಣ ಲಮಾಣಿ, ಮಹೇಶ ಗೊಳಗೊಳಕಿ, ಮಲ್ಲಿಕಾರ್ಜುನ ಬನ್ನಿಕೊಪ್ಪ, ಹಾಗೂ ಇತರ ಪೊಲೀಸರು ಮತ್ತು ಟೆಕ್ನಿಕಲ್ ಸಿಬ್ಬಂದಿ ಸಂಜು ಕೊರಡೂರ ಇವರುಗಳು ಗಮನಾರ್ಹ ಕೆಲಸ ಮಾಡಿದ್ದಾರೆ.

ಗದಗ ಎಸ್‌ಪಿ ಬಿ.ಎಸ್.ನೇಮಗೌಡ ಅವರು ಈ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಹುಮಾನ ನೀಡುವ ಭರವಸೆ ನೀಡಿದ್ದಾರೆ.

ಒಟ್ಟಾರೆ ಈ ಪತ್ತೆ ಕಾರ್ಯದಿಂದಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಜಾಲದ ತೆರೆಬರಹ ಉಂಟಾಗಿದ್ದು, ಗ್ರಾಮೀಣ ಪ್ರದೇಶದ ರೈತರಿಗೆ ಭದ್ರತೆ ಸಂಬಂಧಿಸಿದ ಹೊಸ ಭರವಸೆ ಮೂಡಿಸಿದೆ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb