Home » News » ಹುಬ್ಬಳ್ಳಿ ಪ್ರಕರಣ:ಬಿಹಾರಿ ಬದಲು ಬೇರೆ ಆಗಿದ್ದರೆ ನೋ ಶೂಟೌಟ್..! ಇದು ಸರ್ಕಾರಿ ಪ್ರಾಯೋಜಿತ ಶೂಟೌಟ್..:ಸಂವಿಧಾನ ಹಿಡಿದು 18,000 ರೌಡಿಶೀಟರ್ ಕೇಸ್ ವಾಪಾಸ್..!ಸಿ.ಸಿ.ಪಾಟೀಲ ಲೇವಡಿ..

ಹುಬ್ಬಳ್ಳಿ ಪ್ರಕರಣ:ಬಿಹಾರಿ ಬದಲು ಬೇರೆ ಆಗಿದ್ದರೆ ನೋ ಶೂಟೌಟ್..! ಇದು ಸರ್ಕಾರಿ ಪ್ರಾಯೋಜಿತ ಶೂಟೌಟ್..:ಸಂವಿಧಾನ ಹಿಡಿದು 18,000 ರೌಡಿಶೀಟರ್ ಕೇಸ್ ವಾಪಾಸ್..!ಸಿ.ಸಿ.ಪಾಟೀಲ ಲೇವಡಿ..

by CityXPress
0 comments

ಗದಗ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ‌ ಪ್ರಕರಣಕ್ಕೆ ಈಗಾಗಲೇ ಒಂದು ವರ್ಷ ಕಳೆದರೂ ಇನ್ನೂ ನ್ಯಾಯದ ಬೆಳಕು‌ ಕಂಡಿಲ್ಲ‌ ಎಂದು ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ.ಪಾಟೀಲ ಸರ್ಕಾರದ ವಿರುದ್ಧ‌ ಲೇವಡಿ ಮಾಡಿದರು.

ಈ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣಕ್ಕೆ ವಿಶೇಷ ನ್ಯಾಯಾಲಯ(ಸ್ಪೇಷಲ್‌ಕೋರ್ಟ್) ಸ್ಥಾಪಿಸಿ ಆರೋಪಿಗೆ ದಂಡನೆ ನೀಡುವಲ್ಲಿ ವಿಳಂಬ ಮಾಡಬಾರದು‌ ಎಂದು ಆಗ್ರಹಿಸಿದರು.

“ಸಂವಿಧಾನ ಹೇಳುವವರು ಕೇಸ್ ವಾಪಸ್ ತೆಗೆದುಕೊಳ್ಳುತ್ತಿದ್ದಾರೆ”

ರಾಹುಲ್ ಗಾಂಧಿ,‌ ಪ್ರೀಯಾಂಕ ಗಾಂಧಿ ಹಾಗೂ‌ ಸಿದ್ಧರಾಮಯ್ಯ ಸದಾ ಚೋಪಡಿಯಂತೆ, ಸಂವಿಧಾನ ಇಟ್ಟುಕೊಂಡಿರ್ತಾರೆ. ಮಾತೆತ್ತಿದರೆ ಸಂವಿಧಾನ, ಸಂವಿಧಾನ ಎಂದು ಹೇಳುತ್ತಾರೆ ಆದರೆ, ಅವರೇ ಕೇಸ್ ವಾಪಾಸ್ ತೆಗೆದುಕೊಳ್ಳುತ್ತಾರೆ. ವಿಧಾನ ಪರಿಷತ್ ನಲ್ಲಿ‌ ಗೃಹ ಸಚಿವ ಪರಮೇಶ್ವರ ಅವರಿಗೆ ಎಂಎಲ್ಸಿ ನವೀನ ಪ್ರಶ್ನೆ ಕೇಳುತ್ತಾರೆ. ಕಾಂಗ್ರೆಸ್ ಸರ್ಕಾರದ ಬಂದಾಗಿನಿಂದ, ಈವರೆಗೂ ಎಷ್ಟು ಜನ‌ ರೌಡಿಶೀಟರ್ ಕೇಸ್ ವಾಪಾಸ್ ತೆಗೆದುಕೊಂಡ್ರಿ ಅಂತಾ. ಗೃಹ ಸಚಿವ ಪರಮೇಶ್ವರ‌ ಅವರ ಉತ್ತರ ಕೇಳಿ‌ ನಿಜಕ್ಕೂ ವಿಚಿತ್ರ‌ ಅನ್ನಿಸಿತು…

banner

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ 18,000 ರೌಡಿಶೀಟರ್ ಕೇಸ್ ವಾಪಾಸ್ ತೆಗೆದುಕೊಂಡಿದ್ದಾರೆ. ಇನ್ನು ಇವರಿಗೆ ಹುಬ್ಬಳ್ಳಿ ಘಟನೆ ಯಾವ ಲೆಕ್ಕ. ಕಾಂಗ್ರೆಸ್ ನವರ ಕಣ್ಣಿಗೆ ಅದು ದೊಡ್ಡದು ಅಲ್ಲ‌,‌ ತುಷ್ಟೀಕರಣ ರಾಜಕಾರಣವೇ ಕಾಂಗ್ರೆಸ್ ಸಂಸ್ಕೃತಿ‌ ಎಂದು ಗೃಹಸಚಿವರ ಉತ್ತರದ ಆಧಾರದ ಮೇಲೆ ಮೇಲೆ ಕಿಡಿಕಾರಿದರು.

ಸರ್ಕಾರದ ಶೂಟೌಟ್ ತಂತ್ರ..!

ಹುಬ್ಬಳ್ಳಿಯ ಅಧ್ಯಾಪಕ ನಗರದಲ್ಲಿ ಮೊನ್ನೆ ನಡೆದ ಐದು ವರ್ಷದ ಬಾಲಕಿ‌ ಮೇಲಿನ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾತನಾಡಿದ ಸಿ.ಸಿ.ಪಾಟೀಲ, ಇದೇ ಕೆಲಸವನ್ನು ಬಿಹಾರದವನು ಬಿಟ್ಟು, ಕರೀಮನೋ,‌ ರಹಿಮನೋ‌ ಅಥವಾ ಇಮಾಮ್  ಮಾಡಿದ್ದರೆ ಶೂಟೌಟ್ ಆಗುತ್ತಿರಲಿಲ್ಲ. ಆ ಬಿಹಾರದವನಿಗೆ ಹಿಂದೆ‌ ಮುಂದೆ ಯಾರೂ‌ ದಿಕ್ಕಿರಲಿಲ್ಲ.ಮೇಲಾಗಿ ಸರ್ಕಾರದ‌ ಹೆಸರು‌ ಕೆಡುತ್ತಿತ್ತು, ಸರ್ಕಾರ ಎಚ್ಚೆತ್ತುಕೊಂಡಿದೆ‌ ಅಂತ ತೋರಿಸಬೇಕಿತ್ತು. ಹೀಗಾಗಿ ಸರ್ಕಾರಿ‌ ಪ್ರಾಯೋಜಿತ ಶೂಟೌಟ್ ಮಾಡಲಾಗಿದ್ದು, ತ್ವರಿತವಾಗಿ ಮುಕ್ತಾಯಗೊಳಿಸಿದ್ದಾರೆ ಎಂದು ಟೀಕಿಸಿದರು.

“ಪಿಎಸ್‌ಐ ಅನ್ನಪೂರ್ಣಗೆ ಸೆಲ್ಯೂಟ್”

ಆದರೆ ಈ‌ ವಿಚಾರದಲ್ಲಿ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರ ಧೈರ್ಯವನ್ನ ಮೆಚ್ಚುತ್ತೇನೆ. ಕಾನೂನಾತ್ಮಕವಾಗಿ‌ ಏನೇ ಆಗಲಿ. ಆದರೆ ಇಂಥಹ ಕೃತ್ಯ ಎಸಗುವರಿಗೆ ಭಯ‌ ಹುಟ್ಟುವಂತೆ ಮಾಡಿರೋ‌ ಪಿಎಸ್ಐ ಅನ್ನಪೂರ್ಣಗೆ  ಸೆಲ್ಯೂಟ್ ಹಾಗೂ‌ ಅಭಿನಂದನೆ ತಿಳಿಸುವೆ ಎಂದು ಅವರ ಕಾರ್ಯವನ್ನ ಶ್ಲಾಘಿಸಿದರು.

ಸಂವಿಧಾನ ಹಿಡಿದು ತುಷ್ಟೀಕರಣ ರಾಜಕಾರಣ..!

ಈ‌ ಹಿಂದೆ ಇಂಥಹ ಬಹಳಷ್ಟು ಪ್ರಕರಣಗಳು ಆದಾಗ ಏನೂ‌ ಆಗಿಲ್ಲ. ಹಳೇ ಹುಬ್ಬಳ್ಳಿಯಲ್ಲಿ, ಪೊಲೀಸ್ ಜೀಪ್ ಗೆ ಬೆಂಕಿ‌ ಹಚ್ಚಿ, ಜೀಪ್ ಮೇಲೆ ಹತ್ತಿ ಕುಣಿದಾಡಿದ್ರು. ಅಂಥವರ ಪರವಾಗಿ ನಿಂತು, ಕಾಂಗ್ರೆಸ್ ಸರ್ಕಾರ ಕೇಸ್ ವಾಪಾಸ್ ತೆಗೆದುಕೊಂಡ್ರು. ಇಂಥವರು ಕೈಯಲ್ಲಿ ಸಂವಿಧಾನ‌ ಪುಸ್ತಕ ಹಿಡಿದುಕೊಂಡು‌ ಓಡಾಡ್ತಾರೆ‌, ನಾಲ್ಕು ಬಾರಿ‌ MLA ಆಗಿದ್ದೀನಿ..ಇಂಥಹ ಸರ್ಕಾರ ನೋಡಿದ್ದೀಲ್ಲ‌ ಎಂದು ವ್ಯಂಗ್ಯವಾಡಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb