ಗದಗ, ಏಪ್ರಿಲ್ 17: ಜಾತಿ ವ್ಯವಸ್ಥೆ ಶ್ರೇಷ್ಠತೆ ಮತ್ತು ಕನಿಷ್ಠತೆಗಳನ್ನು ಹುಟ್ಟುಹಾಕಿದ್ದು, ಈ ಕುರಿತು ದೇಶದ ಮಟ್ಟದಲ್ಲಿ ಗಂಭೀರ ಅಧ್ಯಯನ ನಡೆಯಬೇಕಿದೆ ಎಂದು ಸಾಹಿತಿ ಬಸವರಾಜ ಸುಳಿಭಾವಿ ಹೇಳಿದರು.
ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, 1931ರಲ್ಲಿ ಜಾತಿ ಜನಗಣತಿ ನಡೆದಿದೆ.ಅಂದಿನಿಂದ ಇಂದಿನವರೆಗೂ ಸಮಗ್ರ ಮತ್ತು ನಿಖರವಾದ ಜಾತಿ ಗಣತಿ ನಡೆಯದಿರುವುದನ್ನು ಆಕ್ಷೇಪಿಸಿದರು. “ಇದರಿಂದಾಗಿ ಜಾತಿ ಆಧಾರದ ಮೇಲೆ ತೆಗೆದುಕೊಳ್ಳುತ್ತಿರುವ ಹಲವು ತೀರ್ಮಾನಗಳು ವೈಜ್ಞಾನಿಕತೆಯಿಂದ ವಂಚಿತವಾಗಿವೆ,” ಎಂದರು.

ಮೇಲಿನ ಪೋಸ್ಟ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
“ಬಲವಂತದ ರಾಜಕೀಯ ಶಕ್ತಿಯ ನೆರವಿನಿಂದ ಕೆಲ ಮೆಲ್ಜಾತಿಯವರು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಕೆಳಜಾತಿಯವರನ್ನು ನಿಯಂತ್ರಿಸುತ್ತಿದ್ದಾರೆ,” ಎಂಬ ಗಂಭೀರ ಆರೋಪವನ್ನು ಅವರು ಎತ್ತಿ ಹಿಡಿದರು.

ಕಾಂತರಾಜು ವರದಿ ಕುರಿತು ಸ್ಪಷ್ಟನೆ
ಕಾಂತರಾಜು ವರದಿ ಇನ್ನೂ ಸಂಪೂರ್ಣವಾಗಿ ಬಿಡುಗಡೆ ಆಗದಿರುವ ಹಿನ್ನೆಲೆಯಲ್ಲಿ, ಅದನ್ನು ಅವೈಜ್ಞಾನಿಕ ಎಂದು ಹೇಳುವುದು ಸೂಕ್ತವಲ್ಲ ಎಂದ basavaraj sulibhavi ಅವರು ಅಭಿಪ್ರಾಯಪಟ್ಟರು. “ಈ ವರದಿಯನ್ನು ಕೆಲವರು, ವಿಶೇಷವಾಗಿ ಕೆಲವು ಮಠಾಧೀಶರು ಮತ್ತು ಬಲಾಡ್ಯ ಸಮುದಾಯದ ನಾಯಕರು, ತಾವು ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ನಿರಾಕರಿಸುತ್ತಿದ್ದಾರೆ,” ಎಂದು ಹೇಳಿದರು.
ಕಾಂತರಾಜು ವರದಿ ಕೇವಲ ಜಾತಿ ಸಂಖ್ಯೆ ನಿರ್ಧಾರವಲ್ಲದೆ, ವಿವಿಧ ಸಮುದಾಯಗಳ ಸಾಮಾಜಿಕ ಸ್ಥಿತಿಗತಿಯನ್ನೂ ಒಳಗೊಂಡಿದೆ ಎಂಬುದನ್ನು ಅವರು ವಿವರಿಸಿದರು.

ಸಾಮಾಜಿಕ ನ್ಯಾಯಕ್ಕಾಗಿ ವರದಿ ಜಾರಿಗೆ ಒತ್ತಾಯ
“ಹಾವನೂರ ವರದಿ, ಚಿನ್ನಪ್ಪರೆಡ್ಡಿ ವರದಿ ಮುಂತಾದ ಅನೇಕ ವರದಿಗಳನ್ನು ಬಲಿಷ್ಟ ಜಾತಿಗಳು ಈಗವರೆಗೆ ಅಂಗೀಕರಿಸಿಲ್ಲ. ಅದೇ ರೀತಿ ಕಾಂತರಾಜು ವರದಿಯನ್ನೂ ತಿರಸ್ಕರಿಸಲು ಪ್ರಯತ್ನ ನಡೆಯುತ್ತಿದೆ. ಲಿಂಗಾಯತರು ಮತ್ತು ಒಕ್ಕಲಿಗರು ವರದಿಯನ್ನು ಒಪ್ಪಿಕೊಳ್ಳದೆ, ಅದರ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ,” ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಒತ್ತಡಕ್ಕೆ ಒಳಗಾಗದೇ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದ ಸುಳಿಭಾವಿ, ಈ ವರದಿ ಹಿಂದೂಳಿದ ವರ್ಗಗಳ ಏಳಿಗೆಗೆ ದಾರಿಯಾಗುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದರು. “ದೋಷಗಳಿದ್ದರೆ, ಶೋಧನೆ ಮಾಡಿ ಸರಿಪಡಿಸಬಹುದು,” ಎಂಬ ಸಲಹೆಯನ್ನು ಅವರು ನೀಡಿದರು.
ಸಭೆಯಲ್ಲಿ ಹಾಜರಿದ್ದವರು: ಬಾಲರಾಜ ಅರಬರ, ಬಸವರಾಜ ಪೂಜಾರ ಸರ್, ಶರೀಫ್ ಬಿಳೆಯಲಿ, ಆನಂದ ಸಿಂಗಾಡಿ, ಪರಸುರಾಮ ಕಾಳೆ, ಅನಿಲ ಕಾಳೆ ಹಾಗೂ ಮುತ್ತು ಬಿಳೆಯಲಿ ಸಭೆಯಲ್ಲಿ ಉಪಸ್ಥಿತರಿದ್ದರು.