ಲಕ್ಷ್ಮೇಶ್ವರ: ಓವರ ಲೋಡ್ ಹಾಕಿಕೊಂಡು ವಾಹನ ಚಲಾಯಿಸುತ್ತಿರುವ ಕ್ರಷರ್ ಮಾಲೀಕರಿಗೆ ಶಾಸಕ ಡಾ.ಚಂದ್ರು ಲಮಾಣಿಯವರು ಮಾಧ್ಯಮ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಲಕ್ಷ್ಮೇಶ್ವರ ವರದಿ: ಪರಮೇಶ ಲಮಾಣಿ.
ಮಾಧ್ಯಮ ಜತೆ ಮಾತನಾಡಿದ ಅವರು ಶಿರಹಟ್ಟಿ ಮತಕ್ಷೇತ್ರದಲ್ಲಿ ಬಹುತೇಕ ರಸ್ತೆಗಳು ಹಾಳಾಗಿ ಹೋಗಿದ್ದು ರಸ್ತೆಗಳು ಹಾಳಾಗುವುದಕ್ಕೆ ಮುಖ್ಯ ಕಾರಣ ಕಲ್ಲು, ಮರಳು, ಹಾಕಿಕೊಂಡು ಓವರ ಲೋಡ್ ಹಾಕಿಕೊಂಡು ಲಾರಿಗಳು ಓಡಾಡುತ್ತಿವೆ ಆದರಿಂದ ತಹಶೀಲ್ದಾರ ಹಾಗೂ ಎ.ಸಿ ಯವರೊಂದಿಗೆ ಮಾತನಾಡಿ ಮುಂದಿನ ದಿನಮಾನಗಳಲ್ಲಿ ಚೆಕಪೋಸ್ಟ್ ಮಾಡುವ ವ್ಯವಸ್ಥೆ ಮಾಡಲಾಗುವುದು.

24-26 ಟನ್ ಓವರ್ ಲೋಡ್ ಹಾಕಿಕೊಂಡು 14-15 ಟನ್ ತೋರಿಸುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರಿಂದ ತಾವು ಸ್ವಯಂ ಪ್ರೇರಿತವಾಗಿ ಓವರ್ ಲೋಡ್ ಹಾಕುವುದನ್ನು ನಿಲ್ಲಿಸಿ. ಇಲ್ಲ ಎಂದರೆ ಮುಂದಿನ ದಿನಮಾನಗಳಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಅಲ್ಲಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುವುದು ಎಂದು ಕ್ರಷರ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ, ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಇನ್ನು ಮುಂದೆ ಓವರ್ ಲೋಡ ಹಾಕಿಕೊಂಡು ಓಡಾಡುವ ಲಾರಿಗಳನ್ನು ಸಾರ್ವಜನಿಕರು ನಿಲ್ಲಿಸಲು ಸಜ್ಜಾಗುತ್ತಾರೆ ಎಂದರು.
