ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊವನಾಳ ಗ್ರಾಮದಲ್ಲಿ ಭಾವನಾತ್ಮಕ ಘಟನೆ ಸಂಭವಿಸಿದೆ. ಅಣ್ಣತಮ್ಮಂದಿರು ಒಂದೇ ದಿನ, ಒಂದೇ ಗಂಟೆಯ ಅಂತರದಲ್ಲಿ ಸಾವಿಗೀಡಾದ ಘಟನೆ ನಡೆದಿದೆ.
ಅಣ್ಣ ಬಸನಗೌಡ ಶಿವನಗೌಡ ಬೂವನಗೌಡ್ರು (75) ಅವರು ನಸುಕಿನ 3:15ಕ್ಕೆ ಮೃತಪಟ್ಟರೆ, ಅಣ್ಣನ ಸಾವಿನ ಸುದ್ದಿಯ ಶಾಕ್ ನಿಂದ ತಮ್ಮ ಯಲ್ಲಪ್ಪಗೌಡ ಶಿವನಗೌಡ ಬೂವನಗೌಡ್ರು (72) ಅವರು ನಸುಕಿನ 4:15ಕ್ಕೆ ಕೊನೆಯುಸಿರೆಳೆದರು.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರರಿಬ್ಬರ ಸಾವು, “ಅಣ್ಣ ತಮ್ಮಂದಿರ ನಡುವೆ ಇರುವ ಬಂಧವೊಂದು ಸಾವಿನಲ್ಲೂ ಬಿಡಲಿಲ್ಲ” ಎಂಬಂತೆ ಕಂಡುಬಂದಿದ್ದು, ಗ್ರಾಮದಲ್ಲಿ ಭಾವುಕ ವಾತಾವರಣವೊಂದು ನಿರ್ಮಾಣವಾಗಿದೆ.

ಗ್ರಾಮದಲ್ಲಿ ಸಾವಿನಲ್ಲೂ ಒಂದಾದ್ರು..ಅಣ್ಣ-ತಮ್ಮಂದಿರದು!’ ಎಂಬ ಚರ್ಚೆ ಜೋರಾಗಿದೆ. ಕುಟುಂಬದವರ ತೀವ್ರ ದುಃಖಕ್ಕೆ ಸಮುದಾಯವೂ ಕಣ್ಣೀರಿನಿಂದರಾಗಿ ಸಹಾನುಭೂತಿ ವ್ಯಕ್ತಪಡಿಸುತ್ತಿದೆ.
