Headlines

ಗದಗ-ಮದುವೆಯಾಗಿ ನಾಲ್ಕೇ ತಿಂಗಳು… ನವ ವಿವಾಹಿತೆಯ ನಿಗೂಢ ಸಾವು – ಪೋಷಕರಿಂದ ಗಂಭೀರ ಆರೋಪ..!

ಗದಗ (ಬೆಟಗೇರಿ):
ಗದಗ ಜಿಲ್ಲೆಯ ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿ ನವ ವಿವಾಹಿತೆಯೊಬ್ಬಳ ಅನುಮಾನಾಸ್ಪದ ಮರಣ ನಡೆದಿದ್ದು, ಪ್ರದೇಶದಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಬಳ್ಳಾರಿ ಮೂಲದ ಪೂಜಾ ಅಯ್ಯನಗೌಡ್ರು ಎಂಬ ಮಹಿಳೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೃತ ಪೂಜಾ ನಾಲ್ಕು ತಿಂಗಳ ಹಿಂದಷ್ಟೆ ಗದಗನ ಶರಣಬಸವೇಶ್ವರ ನಗರದ ಅಮರೇಶ ಎಂಬಾತನೊಂದಿಗೆ ವಿವಾಹವಾಗಿದ್ದರು. ಇಂದು ಮುಂಜಾನೆಯಷ್ಟೇ ತಮ್ಮ ಕುಟುಂಬಸ್ಥರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಪೂಜಾ, ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿರುವುದು ಈ ಘಟನೆಗೆ ಮತ್ತಷ್ಟು ಗಂಭೀರತೆಯನ್ನು ನೀಡಿದೆ.

ಮನೆಯ ಕಿಟಕಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದರ ಹಿನ್ನೆಲೆ ಕುರಿತು ಮೃತಳ ಪೋಷಕರು ಗಂಭೀರ ಆರೋಪಗಳನ್ನು ಹೊರ ಹಾಕಿದ್ದು, ಅತ್ತೆ ಶಶಿಕಲಾ ಹಾಗೂ ಮಾವ, ಭಾವನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪ್ರತಿಯೊಂದು ವಿಷಯಕ್ಕೂ ಅತ್ತೆಯಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದಳು. ಬೇಸರದಿಂದ ಬಂದು ಹೋಗುತ್ತೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದಳು” ಎಂಬ ಪೋಷಕರ ಹೇಳಿಕೆ ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.

“ಇವರ ಕಿರುಕುಳದಿಂದಲೇ ನಮ್ಮ ಮಗಳು ತೊಂದರೆ ಅನುಭವಿಸಿ ಕೊನೆಯಾಗಿ ಕೊಲೆಗೀಡಾದಳು” ಎಂಬ ಗಂಭೀರ ಆರೋಪ ಮಾಡಿದ್ದಾರೆ.ಇದೇ ವೇಳೆ ಆಕ್ರೋಶಗೊಂಡ ಮೃತ ಪೂಜಾಳ ಪೋಷಕರು, ಪತಿಯ ಅಣ್ಣನ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದು, ಪೊಲೀಸರ ಮಧ್ಯಸ್ಥಿಕೆಯಿಂದ ತಿಳಿಗೊಂಡಿದೆ.

ಈ ಘಟನೆ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿ ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ. ಮೃತಳ ಪೋಷಕರ ದೂರು ಪಡೆದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳವಣಿಗೆಯಾಗುತ್ತಿದೆ. ಬೆಟಗೇರಿ ಪೊಲೀಸರು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು, ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *