ಭಾರತದ ಸಂವಿಧಾನ ಶಿಲ್ಪಿ, ಜ್ಞಾನಪಥದ ದೀಪ, ಸಮಾಜ ಸೇವಕ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಮುಂಡರಗಿ ತಹಶೀಲ್ದಾರ್ ಸಭಾಭವನದಲ್ಲಿ ಭಾವುಕವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಪಿ.ಎಸ್. ಏರಿಸ್ವಾಮಿಯವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಿ ಮಾತನಾಡುತ್ತಾ, “ಭಾರತದ ಅತ್ಯಂತ ದೊಡ್ಡ ಸಂವಿಧಾನ ರೂಪಿಸಿದ ಮಹಾತ್ಮ ಅಂಬೇಡ್ಕರ್ ಅವರ ಜನ್ಮದಿನವನ್ನು ‘ಜ್ಞಾನ ದಿನ’ವೆಂದು ಆಚರಿಸಲಾಗುತ್ತಿದೆ,” ಎಂದು ಹೇಳಿದರು.
ಮುಂದೆ ಮಾತನಾಡಿದ ಮುಖಂಡ ಸೋಮಣ್ಣ ಹೈತಾಪೂರ ಅವರು, “ಬಾಬಾ ಸಾಹೇಬರು ಭಾರತದ ಎಲ್ಲಾ ಸಮುದಾಯದ ಜನರಿಗೆ ಸಂವಿಧಾನದ ಮೂಲಕ ಸಮಾನ ಹಕ್ಕುಗಳನ್ನು ನೀಡಿದ ಮಹಾನ್ ನಾಯಕ,” ಎಂದು ಹೇಳಿದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಮತ್ತೊಬ್ಬ ಮುಖಂಡ ಲಕ್ಷ್ಮಣ್ ತಗಡಿನಮನಿ ಮಾತನಾಡುತ್ತಾ, “ಅಂಬೇಡ್ಕರ್ ಅವರ ಶ್ರಮ ಕೇವಲ ಎಸ್‌ಸಿ/ಎಸ್‌ಟಿ ಸಮುದಾಯಕ್ಕಲ್ಲ; ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ನೀಡುವ ಕನಸನ್ನು ಅವರು ನನಸು ಮಾಡಿದ್ದಾರೆ,” ಎಂದರು.
ಪರಶುರಾಮ್ ಮ್ಯಾಗೇರಿ ಹಾಗೂ ಚಂದ್ರಶೇಖರ್ ಪೂಜಾರ್ ಅವರು ಮಾತನಾಡಿ, “ಅಂಬೇಡ್ಕರ್ ಅವರು ಕಂಡ ಕನಸುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಪೂರ್ಣಗೊಳಿಸಿದಾಗ ಮಾತ್ರ ಜಯಂತಿಯ ಸಾರ್ಥಕತೆ ಸಿಗುತ್ತದೆ,” ಎಂದರು.
ಕಾರ್ಯಕ್ರಮದ ಅಂತಿಮ ಭಾಷಣದಲ್ಲಿ ಶಿಕ್ಷಕ ಎಚ್.ಡಿ. ಪೂಜಾರ್ ಮಾತನಾಡುತ್ತಾ, “ಡಾ. ಅಂಬೇಡ್ಕರ್ ಅವರು ಜಗತ್ತಿನಲ್ಲಿಯೇ ಹೆಚ್ಚಿನ ಪದವಿಗಳನ್ನೂ ಹಾಗೂ ಪುಸ್ತಕಗಳನ್ನೂ ಅಧ್ಯಯನ ಮಾಡಿದ ಜ್ಞಾನಪರಿಪೂರ್ಣ ವ್ಯಕ್ತಿ. ಅವರು ನೀಡಿದ ಹಕ್ಕುಗಳ ಮೂಲಕ ಮತದಾನ, ಉದ್ಯೋಗ, ಶಿಕ್ಷಣ ಹಾಗೂ ರಾಜಕೀಯ ಹಕ್ಕುಗಳನ್ನು ಸರ್ವರಿಗೂ ಸಮಾನವಾಗಿ ಸಿಕ್ಕಿವೆ. ಅವರ ನಿಧನದ ಬಳಿಕ 19 ರಾಷ್ಟ್ರಗಳು ಗೌರವ ಸಲ್ಲಿಸಿದ್ದನ್ನು ಮರೆಯಕೂಡದು,” ಎಂದರು.

ಈ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗದ ಮುಖಂಡರುಗಳು, ವಿವಿಧ ಸಮುದಾಯದ ಮುಖಂಡರುಗಳು ಹಾಗೂ ತಾಲೂಕಿನ ಎಲ್ಲಾ ಇಲಾಖೆ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.