ಹುಬ್ಬಳ್ಳಿಯ ಸಂದೀಪ್ ಹೊಸಕೋಟಿಯ ತವರು ನೆಲದ ಪ್ರೀತಿಗೆ ಎಲ್ಲೆ ಇಲ್ಲ
ಲಂಡನ್‌ನ ರಸ್ತೆಯಲ್ಲಿ ಧಾರವಾಡ (KA-25) ರಿಜಿಸ್ಟ್ರೇಷನ್ ಸಂಖ್ಯೆಯ ಟೆಸ್ಲಾ ಕಾರು ಓಡುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ. ಎಷ್ಟೇ ದೂರದಲ್ಲಿದ್ದರೂ, ತವರು ನೆಲದ ನೆನಪನ್ನು ಉಳಿಸಿಕೊಂಡಿರುವ ವ್ಯಕ್ತಿಯೊಬ್ಬರ ಅಪರೂಪದ ಹೆಜ್ಜೆ ಇದು.
ಈ ಕಾರು ಹುಬ್ಬಳ್ಳಿ ಮೂಲದ ಸಂದೀಪ್ ಹೊಸಕೋಟಿಯವರದು. ಅವರು ಪ್ರಸ್ತುತ ಲಂಡನ್‌ನಲ್ಲಿ ವಾಸವಾಗಿದ್ದಾರೆ. ತನ್ನ ಮೂಲದ ಬಗ್ಗೆ ಹೆಮ್ಮೆ ಹೊಂದಿರುವ ಅವರು, ಇತ್ತೀಚೆಗೆ ಕೊಂಡುಕೊಂಡಿದ್ದ ಟೆಸ್ಲಾ ಕಾರಿಗೆ ‘KA 25 HBL’ ಎಂಬ ನಂಬರ್ ಪ್ಲೇಟನ್ನು ಹಾಕಿಸಿಕೊಂಡಿದ್ದಾರೆ. ಈ ಮೂಲಕ ಹುಬ್ಬಳ್ಳಿ ಹಾಗೂ ಧಾರವಾಡದ ಜನರ ಗಮನ ಸೆಳೆದು, ಹೃದಯ ಗೆದ್ದಿದ್ದಾರೆ.

ಸಂದೀಪ್ ಅವರ ಈ ವಿಶಿಷ್ಟ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಅವರ ಈ ನಿಷ್ಠೆಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.