Headlines

ಬಾರಕೋಲ ಬಿಸಿ..! ಪಾಟೀಲರ ವ್ಯಂಗ್ಯಕ್ಕೆ ಕಾಶಪ್ಪನವರ ಕಿಡಿಕಾರಿಕೆ!

ಬಾಗಲಕೋಟೆ: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ಸಿ.ಸಿ. ಪಾಟೀಲ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಹೋರಾಟದ ವೇಳೆ ಮಲಗಿದ್ದಾಗಲೂ ಕಾಶಪ್ಪನವರ ಬಳಿ ಬಾರಕೋಲು ಇತ್ತು, ಈಗ ಎಲ್ಲಿ ಹೋಯ್ತು ಬಾರಕೋಲು?” ಎಂಬ ಸಿ.ಸಿ. ಪಾಟೀಲ ಅವರ ವ್ಯಂಗ್ಯಕ್ಕೆ ತಿರುಗೇಟು ನೀಡಿದ ಅವರು, “ಇನ್ನೂ ನನ್ನ ಬಳಿ ಬಾರಕೋಲ ಇದೆ. ಬಾ ನನ್ನ ಮನೆಯಲ್ಲಿ ಬಾರಕೋಲ ಇಟ್ಟೀನಿ, ನಿಮಗಾಗಿ ಬಾ ಇಲ್ಲಿ. ಕೊಡತೀನಿ ಬೇಕಾದ್ರೂ ನಿನಗೂ. ಬಾರಕೋಲ ತಗೋಂಡ ಮಲಕೊಂಡಾ ಅಂತಾನಾ? ಏ ಮಿಸ್ಟರ್, ನಿಮಗ ತಾಕತ್ತಿಲ್ಲ,” ಎಂದು ಪಾಟೀಲರ ವಿರುದ್ಧ ಏಕವಚನದಲ್ಲಿಯೇ ಟೀಕಿಸಿದರು.

ಪೀಠ ಹಾಗೂ ಗುರುಗಳ ಬಗ್ಗೆ ಮಾತನಾಡಿದ ಕಾಶಪ್ಪನವರ, “ಪೀಠದ ಬಗ್ಗೆ, ಗುರುಗಳ ಬಗ್ಗೆ ಮಾತಾಡ್ತೀರಿ. ಮತ್ತೊಂದು ಪೀಠ ಮಾಡ್ತೀನಿ ಅಂತಾರೆ – ಮಾಡೋದಾದ್ರೆ ಮಾಡಿಕೊಳ್ಳಿ. ನಿಮಗಾರು ಬೇಡ ಅಂತಾರೆ? ನಮ್ಮ ಸಮಾಜದ ಟ್ರಸ್ಟ್ ಇದೆ, ಟ್ರಸ್ಟ್ ಅಡಿ ರೆಜಿಸ್ಟ್ರೇಶನ್ ಆಗಿದೆ. ಅದಕ್ಕೆ ಗುರುಗಳಿಗೆ ಸ್ಥಾನ ಕೊಟ್ಟಿದ್ದೀವಿ. ಗುರುಗಳು ಹೇಗಿರಬೇಕೆಂದು ಶಿಷ್ಟಾಚಾರ ಇದೆ, ಬೈಲಾ ಇದೆ. ಶಿಷ್ಟಾಚಾರ ಉಲ್ಲಂಘನೆ ಆದರೆ ಅವರ ವಿರುದ್ಧ ಕ್ರಮ ಆಗುತ್ತೆ,” ಎಂದು ಗುಡುಗಿದರು.

ಹುಬ್ಬಳ್ಳಿಯಲ್ಲಿ ಎಪ್ರಿಲ್ 22ರಂದು ಎಲ್ಲಾ ಜನಪ್ರತಿನಿಧಿಗಳ ಸಭೆ ಕರೆದಿದ್ದೇವೆ. ಅಲ್ಲಿ ಎಲ್ಲವೂ ತೀರ್ಮಾನ ಆಗುತ್ತೆ. ಹಿಟ್ ಆಂಡ್ ರನ್ ಮಾಡೋರಿಗೆ ಉತ್ತರವನ್ನ ಸಮಾಜದ ಜನರೇ ನೀಡಲಿದ್ದಾರೆ,” ಎಂದು ಅವರು ಹೇಳಿದರು.

ಸಮಾಜಕ್ಕೆ ನಮ್ಮ ಕುಟುಂಬ ಏನು ಕೊಡುಗೆ ನೀಡಿದೆ ಅಂತಾರೆ. ಪಂಚಮಸಾಲಿ ಸಮಾಜದ ಸಂಘಟನೆ ಮಾಡಲು ಮೊದಲಿಗೆ ಮುಂದಾಗಿದ್ದೇ ನನ್ನ ತಂದೆಯವರು. ಇವರೆಲ್ಲಾ 2004 ರಲ್ಲಿ ರಾಜಕೀಯಕ್ಕೆ ಬಂದವರು. ಅಲ್ಲಿ ತನಕ ಸಮಾಜದ ಸಂಘಟನೆ ಬಗ್ಗೆ ನಿಮಗೇನು ಗೊತ್ತು?” ಎಂದು ಪ್ರಶ್ನಿಸಿದ ಅವರು, “ನೀವೆಂತಾ ಪ್ರಭಾವಿ ಸಚಿವರಿದ್ದೀರಾ? ಆಗ ಅಧಿಕಾರದಲ್ಲಿದ್ದೀರಾ. ನಾವು ಮಾಜಿ ಆಗಿದ್ವಿ, ನಮ್ಮತ್ರ ರೊಕ್ಕ ಇರಲಿಲ್ಲ. ನಿಮ್ಮತ್ರ ಎಲ್ಲಾ ಇತ್ತು, ನೀವು ಯಾಕೆ ಮಾಡಲಿಲ್ಲ?” ಎಂದು ಪಾಟೀಲರ ವಿರುದ್ಧ ಸವಾಲು ಎಸೆದರು.

ಒಬ್ರು ನಾನೇ ಮುಖ್ಯಮಂತ್ರಿ ಅಂತಾನ (ಯತ್ನಾಳ)! ಒಂದು ದೊಡ್ಡ ಪಕ್ಷದಿಂದ ಹೊರ ಹಾಕಿದ್ರು, ಇಂತವರು ಎಷ್ಟೋ ಮಂದಿ ಹೋಗಿದ್ದಾರೆ. ಸ್ವಯಂ ಘೋಷಿತ ನಾಯಕ, ಮಂತ್ರಿ, ಅಪ್ಪಗೋಳು ಯಾರೇ ತಪ್ಪು ಮಾಡಿದ್ರೂ ತಪ್ಪೇ – ಅದು ಗುರುಗಳೇ ಇರಲಿ, ಯಾರೇ ಇರಲಿ, ಸಮಾಜ ನಿರ್ಧಾರ ಮಾಡಬೇಕಿದೆ. ಅದನ್ನ ನಾವು ಏಪ್ರಿಲ್ 22ಕ್ಕೆ ತೀರ್ಮಾನ ಮಾಡಿ ತೋರಿಸುತ್ತೀವಿ,” ಎಂದು ಕಾಶಪ್ಪನವರ ತಮ್ಮ ತೀಕ್ಷ್ಣ ಅಭಿಪ್ರಾಯವನ್ನು ಹೊರಹಾಕಿದರು.

Leave a Reply

Your email address will not be published. Required fields are marked *