ಲಕ್ಷ್ಮೇಶ್ವರ: ಪಟ್ಟಣದ 15 ನೇ ವಾರ್ಡಿನ ಗೋಸಾವಿ ಸಮಾಜದ ಮಹಿಳೆಯರು ವೃದ್ಧರು ನಿವಾಸಿಗರು ಚರಂಡಿ ಸ್ವಚ್ಛತೆಗೆ ತಾವೇ ಮುಂದಾಗಿ ಚರಂಡಿ ಸ್ವಚ್ಛತೆ ಮಾಡಿ ಮುಖ್ಯಾಧಿಕಾರಿ ಹಾಗೂ ಪುರಸಭೆ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೌದು ಕಳೆದ 60 ವರ್ಷದಿಂದ ಪಟ್ಟಣದ ಮದ್ಯಬಾಗದಲ್ಲಿ ವಾಸಿಸುತ್ತಿರುವ ಗೋಸಾವಿ ಸಮಾಜದ 30 ಕ್ಕೂ ಹೆಚ್ಚು ಕುಟುಂಬಗಳಿಗೆ ಸರಿಯಾದ ಶೌಚಾಲಯ ಇಲ್ಲ ಇನ್ನೂ ಒಂದೆ ಒಂದು ಕುಡಿಯುವ ನೀರಿ ನಳ ಇದೆ ಶೌಚಾಲಕ್ಕೆ ಬಯಲಿಗೆ ಹೋಗಬೇಕು ಇಷ್ಟೇಲ್ಲಾ ಸಮಸ್ಯೆ ಇದ್ದರು ಇಲ್ಲಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಸದಸ್ಯರು ನಮಗೆ ಕಡೆಗನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2018-2020 ರಲ್ಲಿ ಪುರಸಭೆಗೆ ಬಯಲು ಶೌಚಾಲಯ ಮುಕ್ತ ಎಂದು ಕೇಂದ್ರ ಸರಕಾರದ ಸ್ವಚ್ಚ ಭಾರತ ಮೀಸನ(ಅರ್ಭನ್) ಸ್ವಚ್ಚತಾ ಪಡೆದಿದ್ದೇವೆ ಎಂದು ಹೆಮ್ಮೆಯಿಂದ ಪುರಸಭೆಯವರು ಹೆಳುತ್ತಾರೆ. ಆದರೆ ಪಟ್ಟಣದ 15 ನೇ ವಾರ್ಡಿನ ನಿವಾಸಿಗರು ಶೌಚಾಲಯ ಇಲ್ಲದೇ ಬಯಲು ಬಹೀರ್ದೇಸೆಗೆ ಹೋಗುವಂತಾಗಿದೆ. ಇದು ಕಾಗದ ಮೇಲೆ ಅಷ್ಟೇ ಅನ್ನುವಂತಾಗಿದೆ. ಇನ್ನೂ ಪುರಸಭೆಗೆ ಚರಂಡಿ ಸ್ವಚ್ಚಗೊಳಿಸಿ ಎಂದು ಕೇಳಿದರೆ ಅನುದಾನ ಇಲ್ಲ ಹಣ ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ ಅದರಿಂದ ನಾವೇ ಚರಂಡಿ ಸ್ವಚ್ಚಗೊಳಿಸುತ್ತೀದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೆಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಪುರಸಭೆಯವರು ಚರಂಡಿಯನ್ನು ಮೂರು ತಿಂಗಳಿಗೊಮ್ಮೆ ಸ್ವಚ್ಚಗೊಳಿಸುತ್ತಾರೆ. ಇಲ್ಲಿ ದೇವಸ್ಥಾನ ಇದೆ. ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ. ಸೊಳ್ಳೆ ಕಾಟದಿಂದ ನಮ್ಮ ಮಕ್ಕಳಿಗೆ ಮಲೇರಿಯಾ ಡ್ಯೆಂಗು ಬಂದಿದೆ. ಪುರಸಭೆಗೆ ಮನವಿ ಕೊಟ್ಟುಕೊಟ್ಟು ಸಾಕಾಗಿದೆ. ಇನ್ನಾದರೂ ನಮಗೆ ಮೂಲಸೌಕರ್ಯಗಳ ಜೊತೆಗೆ ಶೌಚಾಲಯ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೋಟ್.೧
ವಾರ್ಡ್ ನಂ.15 ರಲ್ಲಿ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಚರಂಡಿಗಳಿವೆ. ಈ ಚರಂಡಿಯಲ್ಲಿ ನೀರು ನಿತ್ತು ನಮ್ಮ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುತ್ತಿದೆ ಎಂದು ಗೋಸಾವಿಯವರು ಮನವಿ ಕೊಟ್ಟಿದ್ದಾರೆ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ಕ್ರಮವಹಿಸಲಾಗುವುದು.
ಮಹೇಶ ಹಡಪದ(ಪುರಸಭೆ ಮುಖ್ಯಾಧಿಕಾರಿ)
ಕೋಟ್೨.
ನಾವು ಕಳೆದ 60 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೇವೆ ಚರಂಡಿಯಲ್ಲಿ ನೀರು ನಿತ್ತು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದೇವೆ ಹಾಗೂ ನಮಗೆ ಒಂದೇ ನಳ ಇರುವುದರಿಂದ ಅದು ನಮಗೆ ಸಾಲುತ್ತಿಲ್ಲ ಇನ್ನೊಂದು ನಳದ ವ್ಯವಸ್ಥೆ ಮಾಡಿಕೊಂಡಿ ಇನ್ನೂ ನಮಗೆ ಶೌಚಾಲಯ ಇಲ್ಲದೇ ಬಯಲು ಬಹಿರ್ದೇಷಯಕ್ಕೆ ಹೋಗುತ್ತಿದ್ದೇವೆ ನಮಗೆ ಒಂದು ಶೌಚಾಲಯ ವ್ಯವಸ್ಥೆಯನ್ನು ಮಾಡಿಕೊಡಿ.
ಬಾಳಪ್ಪ ಗೋಸಾವಿ (ವಾರ್ಡಿನ್ ನಿವಾಸಿ)
