Home » News » “ಬೈಕ್ ಕಳ್ಳನ ಬೇಟೆ: ರೋಣ ಪೊಲೀಸರ ಬಿಗ್ ಬ್ರೇಕ್!”

“ಬೈಕ್ ಕಳ್ಳನ ಬೇಟೆ: ರೋಣ ಪೊಲೀಸರ ಬಿಗ್ ಬ್ರೇಕ್!”

by CityXPress
0 comments

ಗದಗ: ಜಿಲ್ಲೆಯ ರೋಣ ಪೊಲೀಸರ ತೀವ್ರ ಪರಿಶ್ರಮದ ಫಲವಾಗಿ, ಅಂತರ್‌ ಜಿಲ್ಲಾ ಮಟ್ಟದಲ್ಲಿ ಬೈಕ್ ಕಳ್ಳತನ ನಡೆಸುತ್ತಿದ್ದ ಬೈಕ್ ಕಳ್ಳನ ಬಂಧನ ನಡೆದಿದೆ. ಗುಜಮಾಗಡಿ ಗ್ರಾಮದ ಈಶ್ವರಪ್ಪ ತವಳಗೇರಿ ಎಂಬಾತನನ್ನು ಬಂಧಿಸಿರುವ ಪೊಲೀಸರು, ಆತನಿಂದ ಬರೋಬ್ಬರಿ 32 ಕಳ್ಳತನವಾದ ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮೌಲ್ಯ ಅಂದಾಜು ರೂ. 17 ಲಕ್ಷ!

ಆರೋಪಿಯು ಗದಗ ಜಿಲ್ಲೆಯಲ್ಲಿ 5, ಕೊಪ್ಪಳದಲ್ಲಿ 20, ಬಾಗಲಕೋಟೆಯಲ್ಲಿ 6 ಹಾಗೂ ಬೆಳಗಾವಿಯಲ್ಲಿ 1 ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ತಕ್ಷಣವೇ ಸಂಬಂಧಿತ ಆಯಾ ಠಾಣೆಗಳಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ಮತ್ತಷ್ಟು ಆಳವಾಗಿ ಮುಂದುವರೆದಿದೆ.

banner

ಗದಗ ಎಸ್ಪಿ ಅವರ ಸೂಚನೆ ಮೆರೆಗೆ, ನರಗುಂದ ವಿಭಾಗದ ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಈ ಯಶಸ್ಸಿಗೆ ಕಾರಣರಾದವರಲ್ಲಿ ರೋಣ ಪೊಲೀಸ್ ಠಾಣೆಯ ಸಿಪಿಐ ಎಸ್.ಎಸ್.ಬೀಳಗಿ ಪಿ.ಎಸ್.ಐ ಪ್ರಕಾಶ ಬಣಕಾರ, ವ್ಹಿ.ಎಸ್ ಚವಡಿ, ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಎಂ.ಬಿ ವಡ್ಡಟ್ಟಿ, ಕುಮಾರ ತಿಗರಿ, ಮಂಜುನಾಥ ಬಂಡಿವಡ್ಡರ, ಶಿವಕುಮಾರ ಹುಬ್ಬಳ್ಳಿ ಎಂಬವರ ಶ್ರಮವನ್ನು ಜಿಲ್ಲೆಯ ಎಸ್.ಪಿ ಬಿ.ಎಸ್ ನೇಮಗೌಡ ಪ್ರಶಂಸೆ ಮಾಡಿ, ಅವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.

ರೋಣ ಪೊಲೀಸ್ ಠಾಣೆಯ ಈ ಭರ್ಜರಿ ಕಾರ್ಯಾಚರಣೆ ಕಾನೂನು ಮತ್ತು ಸುವ್ಯವಸ್ಥೆಯ ಪರಿಪಾಲನೆಗೆ ಅತ್ಯಂತ ಮಹತ್ವದ ಹೆಜ್ಜೆಯಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ಗಳಿಸಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb