ಗದಗ: ಇಂದು ಗದಗ ಜಿಲ್ಲೆಯ ನೇಕಾರ ಕಾಲೋನಿ, ವಾರ್ಡ್ ಸಂಖ್ಯೆ 22, 8 ಮತ್ತು 6 ರಲ್ಲಿ ಅಖಿಲ ಭಾರತ ಸಮಾನತೆಯ ಮಂದಿರ ಪ್ರತಿಷ್ಠಾನ ಮಹಾಸಭೆಯ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರತಿಷ್ಠಾನದ ಸದಸ್ಯೆಯಾಗಿರುವ ವಿಜಯಲಕ್ಷ್ಮಿ ಮಾನ್ವಿಯವರು ಮಾತನಾಡಿ, ಮುಂದಿನ ಮಹಾಸಭೆಯನ್ನು ಎಲ್ಲರೂ ಒಗ್ಗಟ್ಟಾಗಿ, ಸಮಾನತೆಯ ಬುತ್ತಿಯ ಭಾವನೆ ಹೊಂದಿ ಯಶಸ್ವಿಯಾಗಿ ನೆರವೇರಿಸಬೇಕೆಂದು ಕರೆ ನೀಡಿದರು.
“ಸಮಾನತೆಯ ಸಂದೇಶವನ್ನು ಮನೆಮನೆಗೂ ತಲುಪಿಸಲು ನಮ್ಮೆಲ್ಲರ ಸಹಕಾರ ಅಗತ್ಯವಿದೆ. ಈ ಮಹಾಸಭೆ ನಮ್ಮ ಎಲ್ಲಾ ಸದಸ್ಯರ ಶ್ರದ್ಧೆ, ನಂಬಿಕೆ ಮತ್ತು ಬದ್ಧತೆಯ ಪ್ರತೀಕವಾಗಬೇಕು,” ಎಂದು ಅವರು ತಿಳಿಸಿದರು.

ಮೇಲಿನ ಪೋಸ್ಟ್ ಮೇಲೆ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಸಭೆಯಲ್ಲಿ ಗೀತಾ ಗೌಡರ, ರಾಧಾ ಗೌಡರ, ರಜನಿ, ಸುಜಾತ ಗೌಡರ, ಪೂಜಾ ಗೌಡರ, ರುಕ್ಸಾನ ಕುಕನೂರು, ನೀಲಾ ತಳ್ಲಿಹಾಳ, ಹನುಮವ್ವ ದೊಡ್ಡಮನಿ, ರೇಣುಕಾ ದೊಡ್ಮನೆ, ಲತಾ ದೊಡ್ಡಮನಿ, ಪುಷ್ಪು ಗಾಡದ, ಭಾಗ್ಯ ಗದಗಿನಮಠ, ಚೈತ್ರ ಪಟ್ಟೆದ, ಜ್ಯೋತಿ ತೆಗ್ಗಿನಮಠ, ಲಕ್ಷ್ಮಿ ದ್ವಾರಪಾಲಕ್, ಸುವರ್ಣ ನಾಲ್ವಾಡ, ನಿರ್ಮಲ ನಾಲವಾಡ, ನೀಲಂಬಿಕಾ ಆಲೂರ, ವಿದ್ಯಾವತಿ ಗುತ್ತಿ ಸೇರಿದಂತೆ ಹಲವಾರು ಮಹಿಳೆಯರು ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಭೆಯು ಸಾಮೂಹಿಕ ಜವಾಬ್ದಾರಿ ಮತ್ತು ಮಹಿಳಾ ಶಕ್ತೀಕರಣದ ದೃಷ್ಟಿಯಿಂದ ವಿಶೇಷ ಮಹತ್ವ ಪಡೆದಿತ್ತು.