Saturday, April 19, 2025
Homeರಾಜ್ಯ10 ಸೆಕೆಂಡಿನಲ್ಲಿ ಷೇರು ಮಾರುಕಟ್ಟೆಗೆ ಭಾರಿ ಹೊಡೆತ: ಹೂಡಿಕೆದಾರರಿಗೆ 13 ಲಕ್ಷ ಕೋಟಿ ನಷ್ಟ!

10 ಸೆಕೆಂಡಿನಲ್ಲಿ ಷೇರು ಮಾರುಕಟ್ಟೆಗೆ ಭಾರಿ ಹೊಡೆತ: ಹೂಡಿಕೆದಾರರಿಗೆ 13 ಲಕ್ಷ ಕೋಟಿ ನಷ್ಟ!

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರಿಗೆ ತಂದಿರುವ ಹೊಸ ಸುಂಕ ನೀತಿ ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಭಾರೀ ತೀವ್ರ ಅಲೆಮಾರುತೆಗೆ ಕಾರಣವಾಗಿದೆ. ಈ ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆ 10 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಕೇವಲ 10 ಸೆಕೆಂಡುಗಳಲ್ಲೇ ಹೂಡಿಕೆದಾರರ 13 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತು ಹಾರಿಹೋಗಿದೆ. ಸೆನ್ಸೆಕ್ಸ್ 2226.79 ಪಾಯಿಂಟ್ ಕುಸಿತ ಕಂಡು, 3.5% ರಷ್ಟು ಇಳಿಕೆಯಾಗಿದ್ದು, ಇದು ಇತ್ತೀಚಿನ ವಹಿವಾಟಿನಲ್ಲಿ ಕಂಡಿರುವ ದೊಡ್ಡ ಕುಸಿತವಾಗಿದೆ. ನಿಫ್ಟಿಯು ಕೂಡಾ 1000 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿತ ಕಂಡಿದೆ.

ಟ್ರಂಪ್ ಅವರ ನಿರ್ಧಾರ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದ್ದು, ಹೂಡಿಕೆದಾರರ ಆತಂಕವನ್ನು ಹೆಚ್ಚಿಸಿದೆ. ಮುಂದೆ ಮಾರುಕಟ್ಟೆ ಏನೆಂಥ ತಿರುವು ತಗೆದುಕೊಳ್ಳಬಹುದು ಎಂಬುದು ಪ್ರಸ್ತುತ ಅನಿಶ್ಚಿತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments