Saturday, April 19, 2025
Homeರಾಜ್ಯಜಗದ ಎಲ್ಲ ಜನರನ್ನ ಮಿತ್ರರಂತೆ ಕಾಣುವ ಅಜಾತ ಶತ್ರುವೇ ವೀರಶೈವನು: ಹಂಪಸಾಗರದ ಶಿವಲಿಂಗ ರುದ್ರಮುನಿ ಶ್ರೀಗಳು..

ಜಗದ ಎಲ್ಲ ಜನರನ್ನ ಮಿತ್ರರಂತೆ ಕಾಣುವ ಅಜಾತ ಶತ್ರುವೇ ವೀರಶೈವನು: ಹಂಪಸಾಗರದ ಶಿವಲಿಂಗ ರುದ್ರಮುನಿ ಶ್ರೀಗಳು..

ಮುಂಡರಗಿ: ಶತ್ರು ಇಲ್ಲದೆ, ಜಗದ ಜನರನ್ನ ಮಿತ್ರರಂತೆ ಕಾಣುವ ಅಜಾತ ಶತ್ರುವೇ ವೀರಶೈವನು ಎಂದು ಹಂಪಸಾಗರದ ಶ್ರೀ ಷ.ಬ್ರ. ಶಿವಲಿಂಗ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಕರೆ‌ ನೀಡಿದರು.

ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಕಲ್ಯಾಣಮಂಟಪದಲ್ಲಿ ಜರಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ‌ ಜಯಂತಿ‌ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಪೂಜ್ಯರು ಮಾತನಾಡಿದರು.

ಬಸವಣ್ಣನು‌ ಸಮಾಜಕ್ಕೆ ಸಪ್ತ ಸೂತ್ರಗಳನ್ನ ಕೊಟ್ಟರೆ ಅದಕ್ಕಿಂತ ಪೂರ್ವದಲ್ಲೇ ಜಗದ್ಗುರು ರೇಣುಕಾಚಾರ್ಯರು ದಶಸೂತ್ರಗಳನ್ನ ನೀಡಿದ್ದಾರೆ. ಯಾವುದೇ ಸಿದ್ಧಾಂತಗಳಿರಲಿ,‌ ಅದರಲ್ಲಿ‌ ಏನು ಅಡಗಿದೆ ಅನ್ನೋದನ್ನ ಅರಿತುಕೊಳ್ಳಬೇಕು. ಯಾವುದೇ ಪೀಠಗಳಿರಲಿ ಎತ್ತರದಲ್ಲಿವೆ ಕುಳಿತಿವೆ ಎಂದು ಸಮಾಜ ತಿಳಿದುಕೊಂಡಿವೆ. ಅದು ತಪ್ಪು. ಪೀಠಗಳು ಎತ್ತರದಲ್ಲಿ ಕುಳಿತಿಲ್ಲ,‌ ಬದಲಾಗಿ ನಿಮ್ಮನ್ನೆಲ್ಲ ಎಚ್ಚರಿಸಲಿಕ್ಕೆ ಕುಳಿತಿವೆ ಅನ್ನೋದನ್ನ ಸಮಾಜ ಅರಿತುಕೊಳ್ಳಬೇಕು.

ಜಂಗಮ ಜೋಳಿಗೆ ಹಾಕಿದ್ದಾನೆ ಅಂದರೆ, ಹಿಟ್ಟು ಹೊಟ್ಟೆಗಾಗಿ ಅಲ್ಲ, ಸಮಾಜದ ತಟ್ಟೆ ಸರಿಪಡಿಸಲಿಕ್ಕೆ.ಯಾವುದೇ ತತ್ವಗಳಿರಲಿ, ಆದರೆ ಮನುಷ್ಯತ್ವ ಅನ್ನುವದು ಮೇಲು, ಆ ದಿಸೆಯಲ್ಲಿ ಕರುಣೆಯ‌ ಕಣ್ಣಾಗಿ ಉಭಯ ಪರಂಪರೆಗಳನ್ನ ಕೊಟ್ಟ ನಾಡು ಅದು ಮೃಡಗಿರಿ‌ ಹಾಗೂ ಮೃಡಗಿರಿಯ ಅನ್ನದಾನೀಶ್ವರ ಸಂಸ್ಥಾನಮಠ ಎಂದು ವ್ಯಾಖ್ಯಾನಿಸುವದಕ್ಕೆ ಹೆಮ್ಮೆಯೆನಿಸುತ್ತದೆ. ಎಂದು ಪೂಜ್ಯರು ತಿಳಿಸಿದರು.

ಹಿರೇವಡ್ಡಟ್ಟಿಯ ಷ.ಬ್ರ.ವಿರೇಶ್ವರ ಶಿವಾಚಾರ್ಯ ಸ್ವಾಮಿಜಿ‌ ಮಾತನಾಡಿ, ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಬೇಕು.‌ಸಮಾಜದ ಆಚರಣೆ, ಸಂಸ್ಕಾರ,‌ ಸಂಪ್ರದಾಯ ಕಡ್ಡಾಯವಾಗಿರಲಿ,ಜೊತೆಗೆಶಿಕ್ಷಣ ಅನ್ನೋದು, ಮಕ್ಕಳನ್ನ ಸ್ವಾಭಿಮಾನಿ ಜೀವನ ನಡೆಸಲಿಕ್ಕೆ ದಾರಿಯಾಗುತ್ತದೆ‌ ಎಂದು ಹೇಳಿದರು.

ಅಳವಂಡಿ‌ ಕಟ್ಟಿಮನಿ ಹಿರೇಮಠದ ವೇ.ಗುರುಮೂರ್ತಿಸ್ವಾಮಿಗಳು ಮಾತನಾಡಿ, ಉಳಿದ ಸಮಾಜಗಳಂತೆ ಸೀಮಿತಕ್ಕನುಗುಣವಾಗಿ ಜಯಂತಿ,‌ ಸ್ಮರಣೆಗಳ ಆಚರಣೆ ನಮ್ಮದಾಗಿಲ್ಲ. ನಮ್ಮದು ಮಾನವ ಧರ್ಮದ ತತ್ವದ ತಳಹದಿಯಲ್ಲಿ ನಾವುಗಳೆಲ್ಲ ಜಯಂತಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ವಿರುಪಾಪುರದ ಷ.ಬ್ರ.ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.

ಇದೇ ವೇಳೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಷಡಕ್ಷರಯ್ಯ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ಎಸ್.ಎಸ್.ಹಿರೇಮಠ, ಹಾಗೂ ಸುನಿತಾ ಹಿರೇಮಠ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭಕ್ಕೂ ಮುನ್ನ ಪಟ್ಟಣದ‌ ಪ್ರಮುಖ ಬೀದಿಗಳಲ್ಲಿ ರೇಣುಕಾಚಾರ್ಯರ‌ ಭಾವಚಿತ್ರದ ಮೆರವಣಿಗೆ ಜರುಗಿತು.

ಜಾಲವಾಡಗಿ, ಹಿರೇವಡ್ಡಟ್ಟಿ, ಡೋಣಿ, ಡಂಬಳ, ವಿರುಪಾಪೂರ ಸೇರಿದಂತೆ ತಾಲೂಕಿನ ಅನೇಕ ಗ್ರಾಮೀಣ ಭಾಗದ ಸಮಾಜದ‌ ಬಾಂಧವರು ಸೇರಿದಂತೆ ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ಶಹರ ಘಟಕ, ಯುವ ಘಟಕ ಹಾಗೂ ಮಹಿಳಾ ಘಟಕದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ವೀರಮಹೇಶ್ವರ‌‌ ಮಹಿಳಾ‌ ಬಳಗದ ಸದಸ್ಯಣಿಯರಿಂದ ಪ್ರಾರ್ಥನೆ ನೆರವೇರಿತು. ಸರಸ್ವತಿ NHM ಸ್ವಾಗತಿಸಿದರು. ವಿ ಜೆ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕುಂತಲಾ ಹಂಪಿಮಠ ನಿರೂಪಿದರೆ, ಲತಾ‌ ಅಮರಗೋಳಮಠ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments