ಮುಂಡರಗಿ: ತಾಲೂಕು ಶ್ರೀ ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ವತಿಯಿಂದ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ, ಏಪ್ರಿಲ್ 7, 2025 ರಂದು (ನಾಳೆ) ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಸ್ಥಳಿಯ ಧಾರ್ಮಿಕ ಕೇಂದ್ರವಾದ ಶ್ರೀ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಸಮಾರಂಭ ಜರುಗುತ್ತಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರು ಸಂಸ್ಥಾನಮಠ, ಮುಂಡರಗಿ ಪೂಜ್ಯರು ವಹಿಸಲಿದ್ದಾರೆ.

ನೇತೃತ್ವವನ್ನು, ಷ. ಬ್ರ. ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು, ಬನ್ನಿಕೊಪ್ಪ-ಜಪದಕಟ್ಟಿ ಮಠ, ಮೈಸೂರು, ಷ. ಬ್ರ. ರುದ್ರಮುನಿಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕಟ್ಟಿಮನಿ ಹಿರೇಮಠ, ಹಂಪಸಾಗರ, ಷ. ಬ್ರ. ಮುದುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕಲಕೇರಿ ವಿರುಪಾಪೂರ, ಷ. ಬ್ರ. ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇವಡ್ಡಟ್ಟಿ ಈ ಎಲ್ಲ ಪೂಜ್ಯರು ವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇ.ಮೂ. ಗುರುಮೂರ್ತಿಸ್ವಾಮಿಗಳು, ಕಟ್ಟಿಮನಿ ಹಿರೇಮಠ, ಅಳವಂಡಿ ಇವರು ವಹಿಸಲಿದ್ದಾರೆ.
ಇನ್ನು ಸಮಾರಂಭಕ್ಕೂ ಮುನ್ನ, ಬೆಳಿಗ್ಗೆ 7 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಕಲ ಮಂಗಳ ವಾದ್ಯಗಳೊಂದಿಗೆ ಸಂಚರಿಸಿ ಶ್ರೀ ಮಠವನ್ನು ತಲುಪಲಿದೆ. ಮೆರವಣಿಗೆಗೆ ಶ್ರೀ ಮನಿಪ್ರ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಚಾಲನೆ ನೀಡಲಿದ್ದಾರೆ.
ಕಾರಣ ಸರ್ವ ಭಕ್ತಾಧಿಗಳು, ನಾಗರಿಕರು, ಹಾಗೂ ವೀರಮಹೇಶ್ವರ ಸಮಾಜದ ಬಾಂಧವರು ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನ ಯಶಸ್ವಿಗೊಳಿಸಬೇಕೆಂದು, ಶ್ರೀ ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘ, ಯುವ ಘಟಕ ಹಾಗೂ ಮಹಿಳಾ ಘಟಕ ಪ್ರಕಟನೆಯಲ್ಲಿ ತಿಳಿಸಿದೆ.