ಗದಗ: ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಜಾರಿ ಮಾಡಿದೆ. ಆದ್ರೂ ಕೂಡಾ ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ತಾಯಿಲ್ಲಾ. ಹೌದು ಮನೆಗೆ ಬಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು, ಸಾಲದ ಹಣವನ್ನು ಕಟ್ಟುವಂತೆ ಕಿರುಕುಳ ನೀಡಿದ್ದಕ್ಕೆ, ಮನೆ ಮಾಲೀಕ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಸಾಲ ಮರುಪಾವತಿಗಾಗಿ ಕಿರುಕುಳ ನೀಡಬಾರದು ಎಂದು ಸರ್ಕಾರ ಸುಗ್ರಿವಾಜ್ಞೆ ಜಾರಿ ಮಾಡಿದೆ. ಆದ್ರೂ ಕೂಡಾ ಫೈನಾನ್ಸ್ ಸಿಬ್ಬಂದಿಗಳು ಸರ್ಕಾರದ ಆದೇಶಕ್ಕೆ ಕೇರ್ ಮಾಡದೆ ಕಿರುಕುಳ ನೀಡಿದ್ದಾರಂತೆ. ಹೀಗಾಗಿ ಮನೆ ಯಜಮಾನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.. ಹೌದು ಗದಗನ ಬೆಟಗೇರಿಯ ನರಸಾಪುರದ ಆಶ್ರಯ ಕಾಲೋನಿ ನಿವಾಸಿ, 40 ವರ್ಷದ ಉಮೇಶ್ ಕಾಟವಾ ಎನ್ನುವಾತ ನೇಣು ಹಾಕಿಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ.. ಅಂದಹಾಗೆ ಉಮೇಶ್ ಗಾರೆ ಕೆಲಸ ಮಾಡಿದ್ರೆ, ಪತ್ನಿ, ಜ್ಯೋತಿ ಬಟ್ಟೆ ವ್ಯಾಪಾರ ಮಾಡ್ತಾಯಿದ್ರು. ಮನೆ ಅಡಚಣೆ ಅಂತಾ ಮೂರು ಫೈನಾನ್ಸ್ ನಲ್ಲಿ ಸಾಲವನ್ನು ಪಡೆದುಕೊಂಡಿದ್ದಾರೆ.

ಆದ್ರೆ, ಮನೆಗೆ ಬಂದು ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆ. ಸಂಜೆ ಬರುತ್ತೇವೆ ಹಣವನ್ನು ಕಟ್ಟದಿದ್ರೆ, ಮನೆಗೆ ಬೀಗ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಪತ್ನಿ ಜ್ಯೋತಿ, ಪತಿಗೆ ವಿಷಯ ತಿಳಿಸಿ, ಬ್ಯಾಂಕ್ ನಲ್ಲಿ ಹಣವನ್ನು ವ್ಯವಸ್ಥೆ ಮಾಡೋಕಂತ ಬ್ಯಾಂಕ್ ಹೋಗಿದ್ದಾಳೆ. ಸಾಲಗಾರರಿಗೆ 500 ಹಣವನ್ನು ಕಟ್ಟಲು ಮರಳಿ ಮನೆಗೆ ಬಂದಿದ್ದಾಳೆ.ಇದೇ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ, ನೇಣು ಹಾಕಿಕೊಂಡು ಉಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುಮಾರು 1 ಲಕ್ಷ 20 ಸಾವಿರ ಸಾಲವನ್ನು ಮಾಡಿಕೊಂಡಿದ್ದ ಉಮೇಶ್, ಪ್ರತಿ ವಾರ ಕಂತಿನ ಪ್ರಕಾರ ಹಣ ಕಟ್ಟಿಕೊಂಡು ಬರ್ತಿದ್ದ. ಆದರೆ ಕೆಲವು ಅಡಚಣೆ ಬಂದಾಗ ಹಣವನ್ನು ಕಟ್ಟಿಲ್ವಂತೆ. ಇದೇ ಕಾರಣಕ್ಕೆ ಫೈನಾನ್ಸ್ ಸಿಬ್ಬಂದಿಗಳು ಒಂದು ವಾರದಿಂದ ಸಾಕಷ್ಟು ಹಣವನ್ನು ಕಟ್ಟುವಂತೆ ಕಿರುಕುಳ ನೀಡಿದ್ದಾರೆ. ಜೊತೆಗೆ ಇಂದು ಮನೆಗೆ ಬೀಗ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮನೆ ಯಜಮಾನ ಉಮೇಶ್ ಸಾಕಷ್ಟು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸ್ಥಳೀಯರು ಕೂಡಾ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಿನಾಲು ಮನೆಗೆ ಬಂದು ಸಾಕಷ್ಟು ಕಿರುಕುಳ ನೀಡ್ತಾರೆ, ಸಾಲವನ್ನು ಮರುಪಾವತಿ ಮಾಡಲು ಸಮಯವಕಾಶ ನೀಡುವಂತೆ ಕೇಳಿದ್ರು, ಆದರೆ ಬೈದಾಡಿ ಹೋಗುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈವಾಗ ಸಾಲಗಾರರ ಕಾಟಕ್ಕೆ ಬೇಸತ್ತು ಬಡ ಕುಟುಂಬ ಯಜಮಾನ ಸಾವಿನ ಮನೆ ಸೇರಿದ್ದಾನೆ. ಪತ್ನಿ, ಇಬ್ಬರು ಮಕ್ಕಳು ಮುಂದೆ ಹೇಗೆ ಜೀವನ ನಡೆಸೋದು ಎನ್ನುವ ಪ್ರಶ್ನೆ ಕಾಡ್ತಾಯಿದೆ. ಹೀಗಾಗಿ ಫೈನಾನ್ಸ್ ಸಿಬ್ಬಂದಿಗಳ ಕಾಟಕ್ಕೆ ಕಡಿವಾಣ ಹಾಕಬೇಕು ಅಂತ ಒತ್ತಾಯ ಮಾಡಿದ್ದಾರೆ..
ನಿರಂತರ ಸಾಲಗಾರರ ಕಾಟಕ್ಕೆ ಬಡ ಕುಟುಂಬದ ಯಜಮಾನ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸರ್ಕಾರ ಪೈನಾಸ್ಸ್ ಹಾವಳಿಗೆ ನಿಯಂತ್ರಣಕ್ಕೆ ಸುಗ್ರಿವಾಜ್ಞೆ ಜಾರಿ ಮಾಡಿದ್ರು, ಕಾನೂನು ಸಚಿವ ಎಚ್ ಕೆ ಪಾಟೀಲ್ ತವರು ಜಿಲ್ಲೆಯಲ್ಲಿ ಅಷ್ಟೊಂದು ಜಾರಿಯಾಗಿಲ್ಲ. ಸಾಲವನ್ನು ನೀಡಿದವರು, ಕಿರುಕುಳ ನೀಡೋ ಆರೋಪಗಳು ಕೇಳಿ ಬರ್ತಾಯಿವೆ. ಈವಾಗ ಒಂದು ಜೀವ ಕೂಡಾ ಬಲಿಯಾಗಿದೆ. ಇನಾದ್ರು ಫೈನಾನ್ಸ್ ಕಿರುಕುಳ ನಿಲ್ಲುತ್ತಾ ಕಾದು ನೋಡ್ಬೇಕು..