ಲಕ್ಷ್ಮೇಶ್ವರ:ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ರಾಮ್ ರವರ ಜಯಂತಿಯನ್ನು ಕೇವಲ ಮೆರವಣಿಗೆ ಮಾಡುವ ಮೂಲಕ ಸೀಮಿತಗೊಳಿಸದೆ ಅವರ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ತಜ್ಞರನ್ನು ಕರೆಸಿ ವಿಚಾರ ಸಂಕೀರ್ಣವನ್ನು ಅಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಮಹಾನ್ ನಾಯಕರ ಜಯಂತಿಗಳನ್ನು ಆಚರಿಸಬೇಕು ಎಂದು ತಹಶಿಲ್ದಾರ ವಾಸುದೇವಸ್ಬಾಮಿ ಹಾಗೂ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಹೇಳಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕ ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ:ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರವರ ಜಯಂತಿಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಮಾತನಾಡಿದ ಸುರೇಶ ನಂದೇಣ್ಣವರ್, ಕೊಟೇಪ್ಪ ವರದಿ, ಗಂಗಾಧರ ಮೆನಸಿನಕಾಯಿ ಪೋಟೋ ಮೆರವಣಿಗೆ ಮಾಡುವುದಕ್ಕಿಂತ ಡಾ:ಬಿ.ಆರ್.ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.
ಅಂಬೇಡ್ಕರ್ ಜಯಂತಿ ಹಾಗೂ ಜಗಜೀವನರಾಮ್ ರವರ ಜಯಂತಿಯನ್ನು ಹೇಗೆ ಆಚರಣೆ ಮಾಡಬೇಕು ಎಂಬುದರ ಕುರಿತು ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕಿನವರು ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದಲಿತ ಪರ ಮುಖಂಡರ ಸಮಿತಿಯನ್ನು ರಚಿಸಿ ಸಮಿತಿ ಕೈಗೊಳ್ಳುವ ತೀರ್ಮಾನದಂತೆ ಜಯಂತಿಯನ್ನು ಆಚರಿಸೋಣ ಎಂದು ತಹಶಿಲ್ದಾರ ವಾಸುದೇವ ಸ್ವಾಮಿ ಮತ್ತು ಸಮಾಜ ಕಲ್ಯಾಣ ಇಲಾಖೆ ಎ.ಡಿ ಗೋಪಾಲ ಟಿ ಲಮಾಣಿ ಹೇಳಿದರು.

ಲಕ್ಷ್ಮೇಶ್ವರ ಪಟ್ಟಣವು ಹೊಸ ತಾಲೂಕಾಗಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿಯೇ ಈ ಬಾರಿ ಅಂಬೇಡ್ಕರ್ ಜಯಂತಿ ಆಚರಿಸಲು ಸಭೆಯಲ್ಲಿ ಕೇಳಲಾಯಿತು. ಎಲ್ಲಾ ಸಮಾಜದ ಮುಖಂಡರು ತಿರ್ಮಾನ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸುರೇಶ ನಂದೇಣ್ಣವರ್, ಕೊಟೇಪ್ಪ ವರದಿ, ಫಕ್ಕೀರೇಶ ಮ್ಯಾಟನ್ನವರ್, ಗಂಗಾಧರ ಮೆನಸಿಕಾಯಿ, ಫಕ್ಕೀರೇಶ ನಂದೇಣ್ಣವರ್, ರಮೇಶ ಹಂಗನಕಟ್ಟಿ, ರಮೇಶ ಅಡಗಿಮನಿ, ರಾಮು ಗಡದವರ, ಸದಾನಂದ ನಂದೇಣ್ಣವರ್, ಜಗದೀಶ ಹುಲಮ್ಮನ್ನವರ್, ಸಂತೋಷ ಹಾದಿಮನಿ, ಚಂದ್ರು ತಳವಾರ, ವಿನೋದ ಶಿರಹಟ್ಟಿ, ದೇವಪ್ಪ ನಂದೇಣ್ಣವರ್, ಆನಂದ ತಳಗೇರಿ, ಕೆ.ಓ.ಹುಲಿಕಟ್ಟಿ, ರಾಜು ಕಮತದ, ಅನೀಲ ಮುಳಗುಂದ, ನಾಗರಾಜ ದೊಡ್ಡಮನಿ ಹಾಗೂ ಮತ್ತಿತರಿದ್ದರು ಮತ್ತು ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಇದ್ದರು.