Home » News » ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಗಳ ಘಟಿಕೋತ್ಸವ: ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು: ಡಾ. ಶಾಂತಾ ಭೂಮರೆಡ್ಡಿ

ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಗಳ ಘಟಿಕೋತ್ಸವ: ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು: ಡಾ. ಶಾಂತಾ ಭೂಮರೆಡ್ಡಿ

by CityXPress
0 comments

ಗದಗ: ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎನ್ನುವ ನುಡಿ ಅಕ್ಷರಶಃ ಸತ್ಯ. ಶಾಲೆಗೆ ಬರುವ ಮುಂಚಿತವಾಗಿ ಮಕ್ಕಳು ಮನೆಯಲ್ಲಿ ತಾಯಿಯೊಂದಿಗೆ ಮಾತು ಸಂಸ್ಕಾರ ಸಂಸ್ಕೃತಿಯನ್ನು ಕಲಿಯುತ್ತಾರೆ.ಆ ಮೂಲಕ ತಾಯಂದಿರು ತಮ್ಮ ಮಕ್ಕಳು ಚಿಕ್ಕವರಿರುವಾಗಲೇ, ಸಂಸ್ಕಾರದ ಒಂದು ತುತ್ತನ್ನೂ ಕೂಡ ಉಣಬಡಿಸುತ್ತಾ ಹೋಗಬೇಕು ಎಂದು ಡಾ. ಶಾಂತಾ ಭೂಮರೆಡ್ಡಿಯವರು ಹೇಳಿದರು.

ನಗರದ ಪ್ರತಿಷ್ಠಿತ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಗಳ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಒಬ್ಬ ತಾಯಿ ತನ್ನ ಮಗನನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿಸಿ ದಿನಾಲು ಶಾಲೆಗೆ ಕಳುಹಿಸುತ್ತಾಳೆ. ಐದು ವರ್ಷ ಕಳೆದು ಮಗು ಐದನೇ ತರಗತಿಗೆ ಬಂದರೂ ಏನೇನೂ ಓದು ಬರಹ ಕಲಿತಿರುವುದಿಲ್ಲ, ಆಗ ಶಾಲೆಯ ಮುಖ್ಯ ಗುರುಗಳು ಆ ಮಗುವಿನ ತಾಯಿಯನ್ನ ಕರೆಸಿ ನಿಮ್ಮ ಮಗ ಮಂದ ಬುದ್ದಿಯವನಿದ್ದಾನೆ. ಅವನಿಗೆ ಓದು ಬರಹ ತಲೆಗೆ ಹತ್ತಲ್ಲ. ಇನ್ನು ಮುಂದೆ ಶಾಲೆಗೆ ಕಳಿಸಬೇಡಿ. ಮನೆಗೆ ಕರೆದುಕೊಂಡು ಹೋಗಿ ಎಂದು ಕಳುಹಿಸುತ್ತಾರೆ. ಆಗ ಆ ತಾಯಿ ಧೃತಿಗೆಡದೆ ಮಗ ಕೇಳುವ ವಿಜ್ಞಾನದ ಎಲ್ಲ ಪರಿಕರಗಳನ್ನು ತಂದು ಕೊಟ್ಟು ಮನೆಯಲ್ಲಿಯೇ ಪ್ರಯೋಗ ಮಾಡ್ತಾ ಮಾಡ್ತಾ ಬಲ್ಪನ್ನು ಕಂಡುಹಿಡಿಯುತ್ತಾನೆ. ಆ ಮಗುವೆ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಆಗುತ್ತಾನೆ. ಹೀಗೆ ತಾಯಂದಿರು ಇಚ್ಛಾಶಕ್ತಿ ಮಕ್ಕಳಿಗೆ ಭವಿಷ್ಯದ ದಾರಿಯಾಗುವದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ವಿಜಯಲಕ್ಷ್ಮೀ ನಾಗಡಾ ಅವರು ಮಾತನಾಡಿ, ಮಕ್ಕಳೆಂದರೆ ನನಗೆ ತುಂಬಾ ಇಷ್ಟ, ಶಿಕ್ಷಣದ ಮೇಲೆ ಇರುವ ನನ್ನ ಆಸಕ್ತಿ ಇವೆರಡರ ಹಂಬಲದಿಂದ ಚಿಕ್ಕಟ್ಟಿ ಗುರುಗಳು ಘಟಿಕೋತ್ಸವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ತಾವು ಆಗಮಿಸಬೇಕೆಂದು ಕೇಳಿದಾಗ ಸ್ವ ಆಸಕ್ತಿಯಿಂದ ಬಂದಿರುವೆ. ಇಲ್ಲಿರುವ ಮಕ್ಕಳನ್ನು, ಶಿಕ್ಷಕ ವೃಂದದವರನ್ನು ನೋಡಿದಾಗ ತುಂಬಾ ಸಂತಸವಾಯಿತೆಂದರು.

banner

ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಡಾ. ಶಾಂತಾ ಭೂಮರೆಡ್ಡಿ ಅವರಿಗೀಗ ಎಂಭತ್ತೆಂಟು ವರ್ಷ ವಯಸ್ಸು, ಕಾಲು ಅಪರೆಷನ್ ಮಾಡಿಸಿದ್ದಾರೆ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲೂ ನಮ್ಮ ಕರೆಗೆ ಓಗೊಟ್ಟು ಶಿಕ್ಷಣ ಮತ್ತು ಮಕ್ಕಳ ಮೇಲಿನ ಆಸಕ್ತಿಯಿಂದ ಆಗಮಿಸಿರುವುದು ನಮ್ಮೆಲ್ಲರ ಅದೃಷ್ಟ. ಅಲ್ಲದೆ ಶ್ರೀಮತಿ ವಿಜಯಲಕ್ಷ್ಮೀ ನಾಗಡಾ ಅವರನ್ನು ಶ್ಲಾಘಿಸುತ್ತಾ, ಅವರು ನಮ್ಮ ಭಾರತೀಯ ಸಂಸ್ಕಾರ ಸಂಸೃತಿಯನ್ನ ಮೈಗೂಡಿಸಿಕೊಂಡವರು, ಅಂತಹ ಮಹನೀಯರ ಆಗಮನದಿಂದ ಈ ಕಾರ್ಯಕ್ರಮಕ್ಕೆ ಕಳೆ ಬಂದಿದೆ. ಇವರ ಸುಪುತ್ರಿಯೂ ಕೂಡ ಸನಾತನ ಧರ್ಮದ ಪರಿಪಾಲಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.  

ಮುಖ್ಯ ಅತಿಥಿಗಳಾದ ಡಾ. ಶಾಂತಾ ಭೂಮರೆಡ್ಡಿ ಮತ್ತು ಶ್ರೀಮತಿ ವಿಜಯಲಕ್ಷ್ಮೀ ನಾಗಡ, ಅತಿಥಿಗಳಾದ ಆಗಮಿಸಿದ್ದ, ಬಸಪ್ಪ ವೈ ಚಿಕ್ಕಟ್ಟಿ, ಬಸವ್ವ ಸ ಬಿರಾದಾರ, ಹಾಗೂ ಸಂಬಂಧಿಕರಾದ ಭಾಗ್ಯಶ್ರೀ ಆರ್ ಕೊಳ್ಳಿ ಅವರಿಗೂ ಚಿಕ್ಕಟ್ಟಿ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ವಿನಯ್ ಚಿಕ್ಕಟ್ಟಿ ಕಾಲೇಜಿನ ಪ್ರಾಚಾರ್ಯರಾದ ವಿನಯ್ ಎಸ್. ಚಿಕ್ಕಟ್ಟಿ, ಬಿಸಿಎ ಪದವಿ ಕಾಲೇಜಿನ ಪ್ರಾಚಾರ್ಯರಾದ ಬಿಪಿನ್ ಎಸ್. ಚಿಕ್ಕಟ್ಟಿ, ವೈ ಎನ್ ಚಿಕ್ಕಟ್ಟಿ ಶಾಲೆಯ ಪ್ರಾಂಶುಪಾಲರಾದ ಶೋಭಾ ಜೆ. ಭಟ್, ವಿನಯ್ ಚಿಕ್ಕಟ್ಟಿ ಶಾಲೆಯ ಪ್ರಾಂಶುಪಾಲರಾದ ಪುಷ್ಪಲತಾ ಎಮ್. ಬೇಲೇರಿ, ಎಸ್. ವೈ. ಚಿಕ್ಕಟ್ಟಿ ಶಾಲೆಯ ಪ್ರಾಂಶುಪಾಲರಾದ ಅನುಶ್ರೀ ವಸ್ತ್ರದ, ಐ. ವೈ. ಚಿಕ್ಕಟ್ಟಿ  ಶಾಲೆಯ ಪ್ರಾಂಶುಪಾಲರಾದ ನಿರ್ಮಲಾ ಟಿ ದಂಡಿನ ಹಾಗೂ ಬಿಸಿಎ ಪದವಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಅನಿಲ್ ನಾಯಕ್‌ರವರು ಉಪಸ್ಥಿತರಿದ್ದರು.

ಅತಿಥಿಗಳ ಪರಿಚಯವನ್ನು ಶಿಕ್ಷಕಿಯರಾದ ಅನುಶ್ರೀ ವಸ್ತ್ರದ ಹಾಗೂ ಕುಮಾರಿ ಫರಿನಾ ತಾಜ್ ಮಾಡಿದರು.ಆಡಳಿತಾಧಿಕಾರಿ ಕಲಾವತಿ ಕೆಂಚರಾಹುತ ಸ್ವಾಗತಿಸಿದರೆ, ವೈ. ಎನ್ ಚಿಕ್ಕಟ್ಟಿ ಶಾಲೆಯ ವಿದ್ಯಾರ್ಥಿಗಳು ಸ್ವಾಗತ ನೃತ್ಯ ಪ್ರಸ್ತುತ ಪಡಿಸಿದರು. ಕುತೂಹಲ ಶೆಟ್ಟಿ ಪ್ರಾರ್ಥನಾ ಗೀತೆ ಸಾದರಪಡಿಸಿದನು. ಅಮೈರಾ ಚಿಕ್ಕಟ್ಟಿ ಘಟಿಕೋತ್ಸವ ಸಮಾರಂಭದ ಕುರಿತು ಭಾಷಣ ಮಾಡಿದಳು. ಅತಿಥಿ ಮಹೋದಯರೆಲ್ಲರೂ ಜ್ಯೋತಿ ಬೆಳಗಿಸಿವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ವಿನಯ್ ಚಿಕ್ಕಟ್ಟಿ  ಐ. ಸಿ. ಎಸ್. ಸಿ ಶಾಲೆಯ ವಿದ್ಯಾರ್ಥಿನೀಯರಾದ ಅದಿತಿ ಎ ಗುಗ್ಗರಿ ಹಾಗೂ ಸೋನಲ್ ಎನ್ ಹಂಜಗಿ ಕಾರ್ಯಕ್ರಮ ನಿರೂಪಿಸಿದರೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳ ಹಾಗೂ ಪಾಲಕರ ವರದಿಯನ್ನು ಶ್ರೀಮತಿ ದೀಪಾ ಉಗಲಾಟ ಹಾಗೂ ಕು.ಶ್ವೇತಾ ಕಲ್ಮಣಿ, ಕು.ಶಾಹಿನ್ ಬೇಪಾರಿ ಅವರು ಓದಿದರೆ, ಅತಿಥಿ ಮಹೋದಯರು ವಿಜೇತರಾದ ಮಕ್ಕಳಿಗೆ ಹಾಗೂ ವಿಜೇತರಾದ ಪಾಲಕರಿಗೆ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರಗಳನ್ನು, ಮತ್ತು ಬಹುಮಾನ ಪ್ರಧಾನ ಮಾಡಿದರು. ಕು. ಪೂಜಾ ಕಣವಿ ವಂದಸಿದರು. 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb