ಗದಗ: ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳ ಕಾನೂನುಗಳನ್ನು ಹಾಗೂ ಕೇಂದ್ರ ಸರ್ಕಾರದ ಆದೇಶ ಪಾಲಿಸದ ಕೌಶಲ್ಯಾಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ನಗರಸಭೆ ಪೌರಾಯುಕ್ತರು, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳನ್ನು ಸೇವೆಯಿಂದ ವಜಾ ಗೊಳಿಸಬೇಕು ಎಂದು ಆಗ್ರಹಿಸಿ ಬೀದಿ ಬದಿ ವ್ಯಾಪಾರಸ್ಥರ ರಾಜ್ಯ ಉಪಾಧ್ಯಕ್ಷ ಭಾಷಾಸಾಬ್ ಮಲ್ಲಸಮುದ್ರ ನೇತೃತ್ವದಲ್ಲಿ ಹುಬ್ಬಳ್ಳಿ-ಗದಗ ರಸ್ತೆ ತಡೆದು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಅವರು, 2019 ರಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯಾಗಿದ್ದು, ಅದರಂತೆ ಗದಗ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ 9 ಸ್ಥಳೀಯು ಸಂಸ್ಥೆಗಳ (ಟಿ.ವಿ.ಸಿ) ಪಟ್ಟಣ ಮಾರಾಟ ಸಮಿತಿಯ ಅಧ್ಯಕ್ಷರುಗಳಾದ ಪೌರಾಯುಕ್ತರು ಅಥವಾ ಮುಖ್ಯಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ C.A.O ಗಳು ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಸರ್ಕಾರದ ಆದೇಶ ಹಾಗೂ ಕೇಂದ್ರ ಸರ್ಕಾರದ ಕಾಯ್ದೆ ಉಲ್ಲಂಘಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಬೀದಿ ವ್ಯಾಪಾರಿಗಳ ಅಭಿವೃದ್ಧಿಗೆ ಮಾಡಬೇಕಾದ ಕಾರ್ಯವನ್ನು ಸರಿಯಾಗಿ ಮಾಡದೇ ಬೀದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡಲಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಸುಮಾರು 27 ಪ್ರಮುಖ ಅಂಶಗಳನ್ನು ಕಾರ್ಯ ನಿರ್ವಹಿಸದೇ ಮನಬಂದಂತೆ ದುರಾಡಳಿತ ನಡೆಸಿದ್ದು, ಜಿಲ್ಲಾಧಿಕಾರಿಗಳ ಸ್ಥಳದಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಮೇಲೆ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಿ ಸೂಕ್ತ ಕ್ರಮ ಕೈಗೋಳ್ಳಬೇಕು. ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಂತ ಮತ್ತಷ್ಟು ಉಗ್ರ ಹೋರಾಟ ಮಾಡಬೇಕಾಗುತ್ತದೆ. ಬೀದಿ ವ್ಯಾಪಾರಿಗಳ ಕಾಯ್ದೆ ಬದ್ಧ ಹಕ್ಕುಗಳಾಗಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕಾಯ್ದೆ ಪಾಲಿಸದೇ ಅಧಿಕಾರದ ದುರ್ಬಳಕೆ ಹಾಗೂ ಕರ್ತವ್ಯಲೋಪ ಮಾಡಿದ್ದು ಕಂಡು ಬಂದಿದೆ ಅಂತ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

2019 ರಿಂದ 2023 ರವರೆಗೆ ಸ್ಥಳೀಯ ಸಂಸ್ಥೆಗಳಾದ ಗಜೇಂದ್ರಗಡ, ರೋಣ,
ನರೆಗಲ್, ಮುಂಡರಗಿ, ಶಿರಹಟ್ಟಿ, ಲಕ್ಷ್ಮೆಶ್ವರ,
ಮುಳಗುಂದ ಹಾಗೂ ನರಗುಂದ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಕೌಶಲ್ಯಾಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ಇರುವ ಬೀದಿಬದಿ ವ್ಯಾಪಾರಿಗಳು ಒಂದು ಪ್ರಮುಖ ಶುಲ್ಕ ಸಂಗ್ರಹಣೆಯಲ್ಲಿಯೂ ಕೂಡ ಭ್ರಷ್ಟಾಚಾರ ನಡೆಯುತ್ತಿದೆ ಇದರಲ್ಲಿ ಎಲ್ಲ ಅಧಿಕಾರಿಗಳು ಶಾಮೀಲಾದಂತೆ ಕಾಣುತ್ತದೆ ಎಂದು ಬಾಷಾಬಾಸ್ ಮಲ್ಲಸಮುದ್ರ ಆರೋಪಿಸಿದರು.
ಹಕ್ಕೋತ್ತಾಯಗಳು…
1. ಪೂರ್ಣ ಪ್ರಮಾಣದ ಪಟ್ಟಣ ಮಾರಾಟ ಸಮಿತಿ ರಚಿಸಬೇಕು..
2. ಬೀದಿ ವ್ಯಾಪಾರಿಗಳಿಗೆ ಜೋನ್ ಡಿಕ್ಲೇರ್ ಮಾಡಬೇಕು..
3. ಕಡ್ಡಾಯವಾಗಿ ಬೀದಿ ವ್ಯಾಪಾರಿಗಳ ಶುಲ್ಕ ಸಂಗ್ರಹಣೆ ಮಾಡಬೇಕು..
4. ಪಟ್ಟಣ ಮಾರಾಟ ಸಮಿತಿ ಸದಸ್ಯರಿಗೆ ಭತ್ಯೆ ನೀಡಬೇಕು..
5. ಬೀದಿ ವ್ಯಾಪಾರಿಗಳ ಆರೋಗ್ಯ ತಪಾಸಣೆ ನಡೆಸಬೇಕು..
6. ಪ್ರತಿ ವರ್ಷ ಟಿ.ವ್ಹಿ.ಸಿ ಸಮಿತಿಗೆ ಲೆಕ್ಕ ಪರಿಶೋಧನೆ ಮಾಹಿತಿ ನೀಡಬೇಕು..
7. ಟಿ.ವ್ಹಿ.ಸಿ ಸದಸ್ಯರಿಗೆ ಕಳೆದ ಐದು ವರ್ಷದ ಭತ್ಯೆ ನೀಡಬೇಕು..
8. ಸರ್ಕಾರದಿಂದ ಬರುವ ಹಣವನ್ನು ವ್ಯಾಪಾರಿಗಳ ಹಿತಕ್ಕಾಗಿ ಬಳಸಬೇಕು..
9. ಇನ್ನೂ ಹಲವು….
*ಕೋಟ್…*
ಬೀದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಫಲಾನುಭವಿಗಳು ಆಯ್ಕೆಗೆ ಟಾಸ್ಕಪೋರ್ಸ್ ಸಮಿತಿ ರಚಿಸದೇ, ನೇರವಾಗಿ ಖೊಟ್ಟಿ ಫಲಾನುಭವಿಗಳಿಗೆ ಶಿಫಾರಸ್ಸು ಮಾಡಿದ್ದು ಖಂಡನೀಯ. ಅಲ್ಲದೇ, ಸರ್ಕಾರದಿಂದ ಬಂದ ಹಣವನ್ನು ಬಳಕೆ ಮಾಡದೆ ಅಧಿಕಾರಿಗಳು ಹಿಂದಿರುಗಿಸಿದ್ದಾರೆ. ಇವರಿಗೆ ಬೀದಿ ವ್ಯಾಪಾರಿಗಳ ಕಾಳಜಿ ಸ್ವಲ್ಪವೂ ಇಲ್ಲದಂತಾಗಿದ್ದು, ಇಂತಹ ಭ್ರಷ್ಟ ಅಧಿಕಾರಿಗಳಿಂದ ಬಡವರು ಬಡವರಾಗಿಯೇ ಬದುಕುತ್ತಿದ್ದಾರೆ.
ಬಾಷಾಸಾಬ್ ಮಲ್ಲಸಮುದ್ರ
ರಾಜ್ಯ ಉಪಾಧ್ಯಕ್ಷರು
ಬೀದಿ ಬದಿ ವ್ಯಾಪಾರಸ್ಥರ ಸಂಘ
*ಕೋಟ್..*
ಬೀದಿ ಬದಿ ವ್ಯಾಪಾರಸ್ಥರ 27 ಬೇಡಿಕೆಗಳನ್ನು ಅಜೆಂಡಾ ರೂಪದಲ್ಲಿ ಪಡೆದು, ಜಿಲ್ಲೆಯ 9 ಸ್ಥಳಿಯ ಸಂಸ್ಥೆಗಳ ಸಿ.ಓ ಹಾಗೂ ಸಿ.ಎ.ಓಗಳನ್ನು ಮಾರ್ಚ್ 26ರಂದು ಸಾಯಂಕಾಲ 4:00 ಗಂಟೆಗೆ ಬೀದಿ ವ್ಯಾಪಾರಿಗಳ ಮುಖಂಡರ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲು ತಿರ್ಮಾನಿಸಿದ್ದೇನೆ.
ಬಸವರಾಜ ಕೊಟ್ಟೂರು
ಯೋಜನಾ ನಿರ್ದೇಶಕರು, ಗದಗ