ಲಕ್ಷ್ಮೇಶ್ವರ: ಮನೆಗಳ ಪಟ್ಟಾದಲ್ಲಿ ಚಕ್ ಬಂದಿ ತಿದ್ದುಪಡಿಗೆ ಕೊಟ್ಟು ಆರು ತಿಂಗಳ ಆದರೂ ಪಟ್ಟಾ ತಿದ್ದುಪಡಿ ಮಾಡಿ ಕೊಟ್ಟಿಲ್ಲ ಎಂದು ಆಗ್ರಹಿಸಿ ತಾಲೂಕಿನ ಕುಂದ್ರಳ್ಳಿ ಗ್ರಾಮದ ನಿವಾಸಿಗಳು ಬಟ್ಟೂರ ಗ್ರಾಮ ಪಂಚಾಯಿತಿಗೆ ಬಿಗ ಜಡಿದು ಪ್ರತಿಭಟನೆ ನಡೆಸಿದರು.
ಪಂಚಾಯಿತಿಯಿಂದ ಸರ್ಕಾರಿ ಸೇವಾ–ಸೌಲಭ್ಯಗಳು ಜನರಿಗೆ ಸಿಗುತ್ತಿಲ್ಲ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಕೆಲಸ ಮಾಡುತ್ತಾರೆ ಆದರೆ ಸಾರ್ವಜನಿಕರ ಕೆಲಸ ಎಂದರೆ ಕ್ಯಾರೆ ಎನ್ನಲ್ಲ ಸುಮಾರು ಕುಂದ್ರಳ್ಳಿ ಗ್ರಾಮದಲ್ಲಿ 147 ನಿವಾಸಿಗಳ ಪಟ್ಟಾದಲ್ಲಿ ಚಕ್ ಬಂದಿ ಬದಲಾಣೆ ಆಗಿದೆ. ಪೂರ್ವದಲ್ಲಿ ಬರುವ ಹೆಸರಿನಲ್ಲಿ ಬೇರೆ ಹೆಸರು ಮತ್ತು ಪಚ್ಚಿಮ ದಲ್ಲಿ ಬೇರೆ ಹೆಸರು ಬಂದಿದೆ ಹಾಗಾಗಿ ನಾವು ಪಂಚಾಯತಿ ತಿದ್ದುಪಡಿಗೆ ಸಲ್ಲಿಸಿ ಆರು ತಿಂಗಳ ಆದರು ತಿದ್ದುಪಡಿ ಮಾಡಿಲ್ಲ, ಶಾಸಕರು ಮತ್ತು ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಇದರ ಬಗ್ಗೆ ಪಿಡಿಒ ಅವರಿಗೆ ತಿಳಿಸಿದ್ದರು ಕೆಲಸ ಮಾಡಿಲ್ಲ ಎಂದು ನಿವಾಸಿ ಸಂತೋಷ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಕುಂದು–ಕೊರತೆಗಳನ್ನು ಪರಿಹರಿಸುವವರಿಲ್ಲ. ಪಿಡಿಒ ಪ್ರತಿ ಪಂಚಾಯಿತಿಗೆ ಯಜಮಾನ ಇದ್ದ ಹಾಗೆ, ಅವರಿಲ್ಲದೆ ಪಂಚಾಯಿತಿಯ ಯಾವ ಕೆಲಸಗಳು ನಡೆಯುತ್ತಿಲ್ಲ. ಇದರಿಂದಾಗಿ ಜನರಿಗೆ ತುಂಬಾನೇ ತೊಂದರೆ ಆಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಿಮಿಸಿದ ಕಾರ್ಯ ನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಪ್ರತಿಭಟನಾಕಾರರ ಜತೆ ಕುಳಿತುಕೊಂಡು ನಿಮಗೆ ಯಾವುದೆ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಿತ್ತೆವೆ. ನಾನೆ ಸ್ವತಃ ಕೆಲಸ ಮಾಡಿಸುತ್ತೆನೆ ಆದಷ್ಟು ಬೇಗ ಪಟ್ಟಾ ತಿದ್ದುಪಡಿ ಆಗಿ ನಿಮಗೆ ಕೊಡುವಂತೆ ಮಾಡುತ್ತೆನೆ ಎಂದು ಭರವಸೆ ನೀಡಿದರು. ನಂತರ ಅಧಿಕಾರಿಗಳ ಭರವಸೆಯೊಂದಿಗೆ ಪ್ರತಿಭಟನೆ ಕೈ ಬಿಟ್ಟರು.
ಪ್ರತಿಭಟನೆಯಲ್ಲಿ ಸಂತೋಷ ರಾಠೋಡ, ಮಾನು ಲಮಾಣಿ, ಭೋಜಪ್ಪ ಕಾರಭಾರಿ, ಸಂತೋಷ ಪಮ್ಮಾರ, ಪ್ರವೀಣ ಲಮಾಣಿ, ಸಂತೋಷ ಲಮಾಣಿ, ಕುಬೇರ ಲಮಾಣಿ, ಗೋಪಿ ಲಮಾಣಿ, ಮಂಜು ಲಮಾಣಿ, ಉಮೇಶ ಲಮಾಣಿ ಹಾಗೂ ಗ್ರಾಮಸ್ಥರು ಇದ್ದರು.