ಬಾಗಲಕೋಟೆ: ಸಮವಸ್ತ್ರದಲ್ಲೇ ಸ್ವಾಮೀಜಿ ಕಾಲಿಗೆ ನಮಸ್ಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ 6 ಮಂದಿ ಪೊಲೀಸ್ ಕಾನ್‌ಸ್ಟೇಬಲ್ ಗಳನ್ನ ವರ್ಗವಣೆ ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಸಿದ್ಧನಕೊಳ್ಳ ಸ್ವಾಮೀಜಿ ಕಾಲಿಗೆ, ಪೊಲೀಸರು ಸಮವಸ್ತ್ರ ಸಮೇತ ನಮಸ್ಕಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ವಾಮಿಜಿಯಿಂದ ಆಶಿರ್ವಾದ ರೂಪದಲ್ಲಿ ಹಣ ಪಡೆದಿದ್ದ ವಿಡಿಯೋ ಸಾಕಷ್ಟು ವೈರಲ್ ಆದ ಬೆನ್ನಲ್ಲೆ, 6 ಆರು ಜನ ಕಾನ್ಸೆಬಲ್ ಗಳನ್ನ ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ.

ಬಾದಾಮಿಯಿಂದ ವಿವಿಧ ಠಾಣೆಗೆ 6 ಜನ ಸಿಬ್ಬಂದಿ ವರ್ಗಾವಣೆ ಮಾಡಲಾಗಿದ್ದು, ಎಎಸ್‌ಐ ಜಿಬಿ ದಳವಾಯಿ ಹುನಗುಂದ ಠಾಣೆಗೆ, ಡಿಜೆ ಶಿವಪುರ ಎಎಸ್‌ಐ ಬಾಗಲಕೋಟೆ ಗ್ರಾಮೀಣ ಠಾಣೆ, ನಾಗರಾಜ ಅಂಕೋಲೆ ಬೀಳಗಿ ಠಾಣೆ, ಜಿಬಿ ಅಂಗಡಿ ಇಳಕಲ್ ನಗರ ಠಾಣೆ, ರಮೇಶ್ ಈಳಗೇರ ಬಾಗಲಕೋಟೆ ಗ್ರಾಮೀಣ ಠಾಣೆ, ರಮೇಶ್ ಹುಲ್ಲೂರು ಜಿಲ್ಲಾ ಪೊಲೀಸ್ ಕಚೇರಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಆದರೆ ಸ್ವಾಮಿಜಿ ಪೊಲೀಸರಿಗಷ್ಟೇ ಹಣ ಆಶಿರ್ವಾದ ಮಾಡುವದಿಲ್ಲ. ಅವರ ಆತ್ಮೀಯ ಯಾರೇ ಭಕ್ತರೂ ಅವರ ಬಳಿ ತೆರಳಿದರೂ, ಸ್ವಾಮಿಜಿ ಹಣ ನೀಡುವ ಮೂಲಕ ಆಶಿರ್ವಾದದ ಸಂಪ್ರದಾಯ ಮಾಡಿಕೊಂಡು ಬಂದಿದ್ದಾರೆ.