ಗದಗ:ನಗರದ ಪ್ರತಿಷ್ಠಿತ ಸಂಸ್ಥೆಯಾದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಬಿಪಿಎನ್ ಚಿಕ್ಕಟ್ಟಿ ಬಿ.ಸಿ.ಎ.ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನ ಆಚರಿಸಲಾಯಿತು.
ಈ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಪ್ರಭಾ ಡಿ ದೇಸಾಯಿ. ಅಧ್ಯಕ್ಷರು (ಸ್ಪರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಗದಗ) ಮಾತನಾಡಿ, ಒಬ್ಬ ಮಹಿಳೆ ತಾನು ಬಯಸಿದ್ದನ್ನು ಸಾಧಿಸುವ ಛಲ ಮತ್ತು ಬುದ್ಧಿಶಕ್ತಿಯನ್ನು ಹೊಂದಿರುತ್ತಾಳೆ ಎಂದರು. ನಿರಂತರ ಶ್ರಮ ಹಾಗೂ ಪ್ರಯತ್ನದಿಂದ ತನ್ನ ಗುರಿಯನ್ನ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಧಾರವಾಡದ ಡಾ. ರಶ್ಮಿ ಮಣಿ (ಎಮ್.ಎಸ್. ಜನರಲ್ ಸರ್ಜರಿ) ಅವರು ಮಹಿಳಾ ದಿನಾಚರಣೆಯ ಕುರಿತು ಮಾತನಾಡಿ, ನಾನು ಈ ಮೊದಲು ಐ.ಎ.ಎಸ್ ಓದಿ ಸಮಾಜ ಸೇವೆ ಮಾಡಬೇಕೆಂಬುದು ನನ್ನ ಮಹಾದಾಸೆಯಾಗಿತ್ತು. ಆದರೆ ಪಾಲಕರ ಒತ್ತಾಸೆಯ ಮೇರೆಗೆ ವೈದ್ಯಳಾದೆ. ಜನ ಸೇವೆ ಮಾಡಲು ಐ.ಎ.ಎಸ್ ಓದಲೇ ಬೇಕೆಂದಿಲ್ಲ ವೈದ್ಯರಾಗಿಯೂ ಜನ ಸೇವೆ ಮಾಡಬಹುದೆಂಬುದನ್ನು ಅರಿತುಕೊಂಡು ಸೇವೆ ಸಲ್ಲಿಸುತ್ತಿರುವೆ. ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯರು ಛಲ ಮತ್ತು ಧೃಡ ಸಂಕಲ್ಪದಿಂದ, ಕಲ್ಪನೆಗೂ ಮೀರಿದ ಸಾಧನೆಯನ್ನು ಮಾಡಿರುತ್ತಾರೆ. “ಮಾನವ ಸೇವೆಯೆ ಮಾಧವನ ಸೇವೆಯೆಂದು” ಅರಿತು ನನ್ನ ವೈದ್ಯಕೀಯ ಸೇವೆ ಮಾಡುತ್ತಲಿರುವೆ ಎಂದರು.
ಡಾ. ಅನಿತಾ ಕೆಂಭಾವಿ (ಎಮ್.ಡಿ ಹುಬ್ಬಳ್ಳಿ) ಅವರು ಮಾತನಾಡಿ, ಆಯುರ್ವೇದದ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ನಾನೂ ಸಹ ಆಯುರ್ವೇದದಲ್ಲಿಯೇ ಸ್ನಾತಕೋತ್ತರ ಪದವಿ ಪಡೆದು ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವೆ, ಈ ಸಂದರ್ಭದಲ್ಲಿ ಪ್ಲಾಸ್ಟಿಕ್‌ನಿಂದ ಉಂಟಾಗುವ ಹಾನಿಗಳ ಕುರಿತು ಸಮಗ್ರವಾಗಿ ತಿಳಿಸಿದರು.
ಡಾ. ವಿ.ಪಿ ನಾಗನೂರು ಕಾರ್ಯದರ್ಶಿ (ಜನಸೇವಾ ಸೊಸೈಟಿ ಬಿಳಗಿ) ಅವರು ಮಾತನಾಡುತ್ತಾ, ಸಮಾಜದಲ್ಲಿ ಸ್ವಸ್ಥ ಸುಸಂಸ್ಕೃತ ಪರಿವಾರವನ್ನಾಗಿಸಲು ಮಹಿಳೆಯರ ಪಾತ್ರ ಮಹತ್ವವಾದುದು ಎಂದರು.

ಡಾ. ವಿಶ್ವನಾಥ ಬಿ ಪಾಟೀಲ್ (ಜನಪರ ಸೇವಾ ಸಂಸ್ಥೆ ಗದಗ) ಮಹಿಳೆಯರಿಗೆ ಗೌರವ ಸ್ಥಾನಮಾನಗಳು ಪ್ರಧಾನವಾಗಿವೆ ಎಂದು ತಿಳಿಸಿದರು. ಪೂಜ್ಯನೀಯವಾದ ಎಲ್ಲ ಸ್ಥಾನಮಾನಗಳೆಲ್ಲವೂ ಸ್ತ್ರೀಯರ ಹೆಸರಿನಲ್ಲಿಯೇ ಇರುವುದು. ಭೂಮಾತೆ, ಗಂಗಾಮಾತೆ, ಹರಿಯುವ ನದಿಗಳೆಲ್ಲ ಗಂಗಾ, ಯಮುನಾ, ಸರಸ್ವತಿ ಅಷ್ಟೇ ಯಾಕೆ ನಾವು ಪೂಜಿಸುವ ಶಿವನೂ ಸಹ ತನ್ನ ದೇಹದ ಅರ್ಧ ಭಾಗವನ್ನು ಪಾರ್ವತಿಗೆ ಬಿಟ್ಟುಕೊಟ್ಟು ಅರ್ಧನಾರೀಶ್ವರನೆಂದು ಹೆಸರಾದ. ಈ ದಿನವನ್ನು ಇಂದು ಮಾತ್ರ ಆಚರಿಸದೆ, ದಿನನಿತ್ಯ ಮಹಿಳೆಯರಿಗೆ ಗೌರವ ಸಲ್ಲಿಸುವಂತಾಗಲಿ ಎಂದರು.
ಚಿಕ್ಕಟ್ಟಿ ಸಂಸ್ಥೆಯ ಸಂಸ್ಥಾಪಕರಾದ ಪ್ರೊ.ಎಸ್.ವಾಯ್.ಚಿಕ್ಕಟ್ಟಿಯವರು ಮಾತನಾಡಿ, ಸಭೆಯಲ್ಲಿ ಆಸೀನರಾದ ಗಣ್ಯಮಾನ್ಯರೆಲ್ಲರೂ ವೈದ್ಯರಾಗಿದ್ದವರು. ಡಾ.ಪ್ರಭಾ ದೇಸಾಯಿಯವರು ವಿಶೇಷವಾದ ವ್ಯಕ್ತಿತ್ವ ಹೊಂದಿದವರು. ಅವರು ಐದು ನಿಮಿಷ ಸಹ ಕಾಲಹರಣ ಮಾಡದವರು, ವೈದ್ಯ ದಂಪತಿಗಳಾದ ಇವರು ಗದಗ ನಗರದಲ್ಲಿ ಸ್ಪರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿ ಅತ್ಯುತ್ತಮವಾದ ಸೇವೆ ಸಲ್ಲಿಸುತ್ತಿದ್ದಾರೆ. ಧಾರವಾಡದಿಂದ ಆಗಮಿಸಿದ ಡಾ. ರಶ್ಮಿಯವರು ತಿಳಿಸಿರುವ ಒಂದು ನುಡಿ ನೆನಪಿಸಿಕೊಳ್ಳುವುದಾದರೆ ಮುಖ್ಯ ಅತಿಥಿಗಳಾಗಿ ಭಾಷಣ ಮಾಡುವುದಕ್ಕಿಂತ, ವೈದ್ಯಕೀಯ ತಪಾಸಣೆ ಮಾಡಲು ಅವಕಾಶ ಕಲ್ಪಿಸಿ ಕೊಡಿ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ದಿನಮಾನದ ಪಾಲಕರು ಮಕ್ಕಳ ಪಾಲನೆ ಪೋಷಣೆ ಹೇಗೆ ಮಾಡಬೇಕೆಂಬುದನ್ನು ಮೊದಲು ಅರಿತುಕೊಳ್ಳಬೇಕೆಂದರು. ಹಾಗೂ ಈ ಕಾರ್ಯಕ್ರಮ ನಡೆಯಲು ಧಾರವಾಡದ ಡಾ ಉಮಾ ನಾಗನೂರು ಹಾಗೂ ಆಡಳಿತಾಧಿಕಾರಿಗಳಾದ ಶ್ರೀ ರಂಗನಾಥ ಅವರ ಮಹತ್ವದ ಪಾತ್ರವಿದೆ ಎಂದರು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಅಂತಿಮವಾಗಿ ಗಣ್ಯಮಾನರೆಲ್ಲರಿಗೂ ವೈದ್ಯಕೀಯ ವಿದ್ಯಾರ್ಥಿಗಳು ವಂದನೆ ಸಲ್ಲಿಸಿದರು. ತದನಂತರ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಕಾರ್ಯಕ್ರಮದಲ್ಲಿ ಗದುಗಿನ ಸ್ಪರ್ಶ ನರ್ಸಿಂಗ್ ಕಾಲೇಜು, ಶ್ರೀಮತಿ ಶಕುಂತಲಾ ಪಾಟೀಲ್ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ ಮತ್ತು ಹುಯಿಲಗೋಳ ನಾರಾಯಣರಾವ್ ಪ್ಯಾರಾಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ,ಪ್ರಾಚಾರ್ಯರು ಹಾಗೂ ನಿರ್ದೇಶಕರು ಪಾಲ್ಗೊಂಡಿದ್ದರು.
