Home » News » ಶಹರ ಠಾಣೆ ಪಿಎಸ್ಐ ಜಕ್ಕಲಿ ಅವರಿಗೆ ರಾಜ್ಯಮಟ್ಟದ ವೀರರಾಣಿ ಕಿತ್ತೂರ ಚೆನ್ನಮ್ಮ ಮಹಿಳಾ ಸಾಧನಾ ಪ್ರಶಸ್ತಿ

ಶಹರ ಠಾಣೆ ಪಿಎಸ್ಐ ಜಕ್ಕಲಿ ಅವರಿಗೆ ರಾಜ್ಯಮಟ್ಟದ ವೀರರಾಣಿ ಕಿತ್ತೂರ ಚೆನ್ನಮ್ಮ ಮಹಿಳಾ ಸಾಧನಾ ಪ್ರಶಸ್ತಿ

by CityXPress
0 comments

ವಿಜಯಪುರ:ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ (ರಿ) ವಿಜಯಪುರ ಹಾಗೂ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಗದಗನ ಈಶ್ವರೀಯ ವಿದ್ಯಾಲಯ ಸಂಚಾಲಕರಾದ ರಾಜಯೋಗಿಣಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಲತಾ.ಮ.ಬಿರಾದಾರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಖ್ಯಾತಸಾಹಿತಿಗಳು ಉತ್ತಮ ವಾಗ್ನಿಗಳಾದ ಶ್ರೀ.ಶಂಕರ.ಬೈಚಬಾಳ ಅವರು ಹಾಗೂ ಇನ್ನೋರ್ವ ಸಾಹಿತಿಗಳು ಆದ ಶ್ರೀಮತಿ, ಕಮಲಾ ಮುರಾಳ ಅವರು ವೀರ ವನಿತೆಯರ,ವಿಶೇಷವಾಗಿ ವೀರ ರಾಣಿ ಕಿತ್ತೂರ ಚೆನ್ನಮ್ಮಳ,ಹಾಗೂ ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು.

ಶ್ರೀಮತಿ.ಸೌಮ್ಯ, ಆರ್ ಎಫ್ ಓ,ಅರಣ್ಯ ಇಲಾಖೆ,ಗದಗ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸಸ್ಯ,ಮರಗಳ ಹಾಗೆ ಮಹಿಳೆಯರಿಗೆ ಇರುವ ಸಹನೆ ಗಟ್ಟಿತನ, ಪರೋಪಕಾರ ಗುಣಗಳನ್ನು ಹೊಗಳಿ ಮಾತನಾಡಿದರು. ಶ್ರೀಮತಿ.ಲತಾ.ಮ.ಬಿರಾದಾರ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಂಘ ನಡೆದು ಬಂದ ದಾರಿ,ಮಹಿಳಾ ಸರಕಾರಿ ನೌಕರರ ಸಲುವಾಗಿ ಜರುಗಿದ ಸಂಘದ ಕಾರ್ಯಗಳು,ಮುಂದೆ ಜರುಗಬೇಕಾದ ಕುರಿತು ಮಾತನಾಡಿದರು.

ಇದೇ ವೇಳೆ ಗದಗ ಶಹರ ಪೊಲೀಸ್ ಠಾಣೆ ಪಿಎಸ್ಐ ಜಕ್ಕಲಿ ಅವರಿಗೆ ರಾಜ್ಯಮಟ್ಟದ ವೀರರಾಣಿ ಕಿತ್ತೂರ ಚೆನ್ನಮ್ಮ ಮಹಿಳಾ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

banner

ಗದಗ ಜಿಲ್ಲೆಯ ಖ್ಯಾತ ವೈದ್ಯ ಶ್ರೀಮತಿ.ಡಾ.ಅರುಂಧತಿ ಕುಲಕರ್ಣಿಯವರು ಕಾರ್ಯಕ್ರಮ ಉದ್ಘಾಟಿಸಿ ಆರೋಗ್ಯದ ಆರೋಗ್ಯ ಸಲಹೆ ನೀಡಿದರು. ಶ್ರೀಮತಿ.ಬಸವಣ್ಣೆಮ್ಮ.ಹರ್ತಿ,ಶಿಕ್ಷಕಿಯರು, ಅಡವಿ ಸೋಮಾಪುರ ಹಾಗೂ ಮುತ್ತು.ಮಾದರ, ಶಿಕ್ಷಕರು,ಎಚ್ ಪಿ ಕೆ ಜಿ ಎಸ್.ಡೋಣಿ ಗ್ರಾಮೀಣ ವಲಯ, ಗದಗ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

ಶ್ರೀಮತಿ. ದೇಶಪಾಂಡೆ ಯವರು ಸ್ವಾಗತಿಸಿದರು ಶ್ರೀಮತಿ. ಗುರುನಾಯಕ ಅವರು ವಂದಿಸಿದರು.ಇದೇ ವೇಳೆ  ಸುಮಾರು 100 ಜನ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆ ಪರಿಗಣೆಸಿ ರಾಜ್ಯ ಮಟ್ಟದ ವೀರ ರಾಣಿ ಕಿತ್ತೂರ ಚೆನ್ನಮ್ಮ ಮಹಿಳಾ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb