ಬೆಂಗಳೂರು: IPS ಅಧಿಕಾರಿ ರೂಪಾ ಮೌದ್ಗೀಲ್ ಕೆಳ ಹಂತದ ಸಿಬ್ಬಂದಿಯನ್ನು ಬಳಸಿ ದಾಖಲೆಗಳನ್ನು ಕಳವು ಮಾಡಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದ ಡಿಐಜಿ ವರ್ತಿಕಾ ಕಟಿಯಾರ್ ಅವರನ್ನು ಸೋಮವಾರ ವರ್ಗಾವಣೆ ಮಾಡಲಾಗಿದೆ.
ಆಂತರಿಕಾ ಭದ್ರತಾ ವಿಭಾಗದ ಡಿಐಜಿಯಾಗಿದ್ದ ವರ್ತಿಕಾರನ್ನು ಸಿವಿಲ್ ಡಿಫೆನ್ಸ್ ಮತ್ತು ಗೃಹ ರಕ್ಷಕ ದಳದ ಡಿಐಜಿ ಹಾಗೂ ಹೆಚ್ಚುವರಿ ಕಮಾಂಡೆಂಟ್ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

ರೂಪ ಸೂಚನೆ ಮೇರೆಗೆ ಗೌಪ್ಯ ದಾಖಲೆಗಳನ್ನು ಕದಿಯಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಡಿಐಜಿ ವರ್ತಿಕಾ ಕಟಿಯಾರ್ ದೂರು ನೀಡಿದ್ದರು.