ಗದಗ: ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಗದುಗಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಕಾಶಿ ವಿಶ್ವನಾಥನ ದರ್ಶನ ಅಪಾರ ಜನತೆಯನ್ನು ಆಕರ್ಷಿಸಿತು.
ಇದೇ ಸಂದರ್ಭದಲ್ಲಿ ಸೇವಾನಿರತ ರ್ವ ಅಂಚೆ ಪೇದೆಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ, ರಾಜಯೋಗಿನಿ ಬ್ರಹ್ಮಾಕುಮಾರಿ ಜಯಂತಿ ಅಕ್ಕ ಮಾತನಾಡಿ, ಮಕ್ಕಳು ಹುಟ್ಟುವಾಗಲೇ ಆಳಲು ಶುರು ಮಾಡತ್ತವೆ. ಅಂದರೇ ಜಗತ್ತಿನೊಂದಿಗೆ ಕಮ್ಯುನಿಕೇಷನ್ ಪ್ರಾರಂಭವಾಯಿತು ಎಂದರ್ಥ. ಮಹಾಭಾರತದಲ್ಲಿ ಸಂಜಯನು ದೃತರಾಷ್ಟ್ರನಿಗೆ ಕೊಟ್ಟ ಸಮಾಚಾರ ನೋಡಿದರೆ ಅಂದೇ ದೂರದ ವಿಷಯ ಸಂಗ್ರಹಿಸುವ ತಾಕತ್ತು ಇತ್ತು.ಶಂಕರಾಚರ್ಯರು ಸಂಕಲ್ಪದ ಮೂಲಕ ಕಮ್ಯುನಿಕೇಷನ್ ಮಾಡಿದರು. ಪ್ರಾಚೀನ ಕಾಲದಲ್ಲಿ ಆಧ್ಯಾತ್ಮ ಶಕ್ತಿಯಿಂದ ಇದ್ದಂತ ಕಮ್ಯುನಿಕೇಷನ್ ಕಡಿಮೆ ಆಗುತ್ತಾ ಹೋದಂತೆ ಆ ಜಾಗದಲ್ಲಿ ವಿಜ್ಞಾನದ ಶಕ್ತಿ ಬೆಳೆಯಿತು. ಇಂದು ಇಂಟರ್ನೆಟ್ ,ಮೋಬೈಲ್ ಗಳಿಂದ ದೂರದಲ್ಲಿದ್ದರೂ, ಸುಲಭ ಕಮ್ಯುನಿಕೇಷನ್, ಅಂದರೆ, ಕಬೂತರ್ ನಿಂದ ಕಂಪ್ಯುಟರ್ ವರೆಗೂ ಬಂದ್ದಿದೇವೆ.

ಇದರಲ್ಲಿ ಮೊದಲು ಅಂಚೆಯ ಪದ್ಧತಿಯನ್ನು ಈಸ್ಟ ಇಂಡಿಯಾ ಕಂಪನಿಯವರು ಪ್ರಾರಂಭಿಸಿದರು. ಇಂದು ನಮ್ಮ ದೇಶದಲ್ಲಿ ಒಂದುವರೆ ಲಕ್ಷ ಅಂಚೆ ಕಚೇರಿಗಳಿವೆ. ಏನು ಕಂಪ್ಲೆಂಟ್ ಇಲ್ಲದ ವಿಭಾಗ ಇದಾಗಿದೆ. ಮನೆ ಮನೆಗೆ, ಗಲ್ಲಿ ಗಲ್ಲಿಗೆ, ಹಳ್ಳಿ ಹಳ್ಳಿಗೆ ಮೊದಲು ಕಾಲ್ನಡಿಗೆಯಿಂದಲೇ ಅಂಚೆ ಪೇದೆಗಳು ಅಂಚೆಯನ್ನು ತಲುಪಿಸುತ್ತಿದ್ದರು ಅಮೇಲೆ ಸೈಕಲ್, ಸ್ಕೂಟಿ, ಬೈಕುಗಳಿಂದ ತಲುಪಿಸುತ್ತಿದ್ದಾರೆ. ಅಂಚೆ ಪೇದೆಗಳ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಎಲ್ಲವು ತುಂಬಿ ಬರಲಿ. ಪ್ರತಿ ನಿತ್ಯ ೧ ಗಂಟೆ ಅಂದರೇ ಸಂಜೆ ೬ ರಿಂದ ೭ ಗಂಟೆಯವರೆಗೆ , ಗದುಗಿನ ಬಸವೇಶ್ವರ ನಗರ, ಸಿದ್ಧರಾಮೇಶ್ವರ ನಗರ , ಸಿದ್ಧಲಿಂಗ ನಗರ, ಬೆಟಗೇರಿ ಯ ಈಶ್ವರೀಯ ವಿಶ್ವ ವಿದ್ಯಾಲಯದ ಸತ್ಸಂಗದಲ್ಲಿ ಭಾಗಿಯಾಗಲು ಕರೆ ನೀಡಿದರು”.
ಗದುಗಿನ ಅಂಚೆ ವಿಭಾಗದ ಪೋಸ್ಟ ಮಾಸ್ಟರ್ ಆಗಿರುವ ಶ್ರೀ ಡಿ.ಜಿ. ಮ್ಯಾಗೇರಿ ಅವರು ಮಾತನಾಡುತ್ತಾ ಅಧ್ಯಾತ್ಮ ಜ್ಞಾನ ಮತ್ತು ಮೆಡಿಟೇಶನ್ ಜೊತೆಗೆ ಇಟ್ಟುಕೊಂಡರೆ ನಮ್ಮ ಜೀವನವು ಸತ್ಯ, ಸ್ವಚ್ಛ ಮತ್ತು ಸಶಕ್ತವಾಗುವುದು ಎಂದು ಹೇಳಿ ಪೋಸ್ಟ ಮ್ಯಾನ ಅಣ್ಣಂದಿರು, ಅಕ್ಕಂದಿರಿಗೆ ಸನ್ಮಾನಿಸಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಅಂಚೆ ಪೇದೆಯಾಗಿರುವ ಶ್ರೀ ಶರಣಯ್ಯ ಹಿರೇಮಠ ಇಷ್ಟು ವರ್ಷದ ನಮ್ಮ ಸೇವಾ ಜೀವನದಲ್ಲಿ ಈ ರೀತಿ ನಮ್ಮನ್ನ ಯಾರು ಗೌರವಿಸಿ ಸನ್ಮಾನಿಸಿರಲಿಲ್ಲ. ಶಿವನ ಈ ವೇದಿಕೆಯಲ್ಲಿ ಸನ್ಮಾನಿಸಿದಕ್ಕೆ ಧನ್ಯವಾದ ಹೇಳಿದರು. ಒಟ್ಟು ೩೨ ಅಂಚೆ ಪೇದೆಗಳು ವೇದಿಕೆಯ ಮೇಲೆ ಉಪಸ್ಥಿತರಾಗಿ, ಈಶ್ವರೀಯ ಸನ್ಮಾನವನ್ನು ಸ್ವಿಕರಿಸಿದರು. ಬ್ರಹ್ಮಾಕುಮಾರಿ ರೇಖಾ ಸ್ವಾಗತಿಸಿದರು, ಬ್ರಹ್ಮಾಕುಮಾರಿ ಸಾವಿತ್ರಿ ನಿರೂಪಿಸಿದರು.