ಮುಂಡರಗಿ: ಪಟ್ಟಣದಲ್ಲಿ ಇಂದು (ಮಾರ್ಚ-01) ಎಪಿಎಂಸಿ ವರ್ತಕರ ಸಂಘದ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಜರುಗಲಿದೆ.
ಇಲ್ಲಿಯ ಶ್ರೀ ವಿ. ಜಿ. ಲಿಂಬಿಕಾಯಿ ಶಾಲಾ ಆವರಣದಲ್ಲಿ ಸಂಜೆ 5-00 ಘಂಟೆಗೆ ಕಾರ್ಯಕ್ರಮ ಜರುಗಲಿದ್ದು, ಮಾಜಿ ಸಿಎಂ ಹಾಗೂ ಸಂಸದರಾದ ಜಗದೀಶ ಶೆಟ್ಟರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.

ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷರಾದ ಕೊಟ್ರೇಶಪ್ಪ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ.ಚಂದ್ರು. ಲಮಾಣಿ, ರೋಣ ಕ್ಷೇತ್ರದ ಶಾಸಕರಾದ ಜಿ. ಎಸ್. ಪಾಟೀಲ, ವಿಧಾನಪರಿಷತ್ ಸದಸ್ಯರಾದ ಎಸ್. ವಿ. ಸಂಕನೂರ,ಮಾಜಿ ಸಚಿವರಾದ ಕಳಕಪ್ಪ ಬಂಡಿ,ಮಾಜಿ ಶಾಸಕರಾದ, ರಾಮಕೃಷ್ಣ ದೊಡ್ಡಮನಿ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಮಾಜಿ ಸಚಿವರಾದ ಎಸ್. ಎಸ್. ಪಾಟೀಲ, ಕೆ.ಎಲ್.ಇ. ನಿರ್ದೇಶಕರಾದ ಹಾಗೂ ಕರ್ನಾಟಕ ಸರಕಾರದ “ಸಹಕಾರ ರತ್ನ” ಪ್ರಶಸ್ತಿ ಪುರಸ್ಕೃತರಾದ ಶಂಕರಣ್ಣ ಮುನವಳ್ಳಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ,ಡಾ. ಜಿ. ಬಿ.ಬೀಡನಾಳ, ರಾಜೀವಗಾಂಧಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದ ಡಾ.ವೀರೇಶ ಹಂಚಿನಾಳ,ಸತತ 75 ವರ್ಷಗಳ ಕಾಲ ದಲಾಲಿ ಅಂಗಡಿಯನ್ನು ಅಚ್ಚುಕಟ್ಟಿನಿಂದ ಕಾಯಕ ನಿರ್ವಹಿಸಿದ ಪ್ರಯುಕ್ತ ಗಣ್ಯ ವರ್ತಕ ವಸಂತಪ್ಪ, ತಾವರಗೇರಿ,ಗಂಗಾಪೂರ ವಿಜಯನಗರ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಬಿ. ಶಿವರಾಮರಡ್ಡಿ,ಗದಗ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷರಾದ ತಾತನಗೌಡ, ಪಾಟೀಲ ಇವರೆಲ್ಲರಿಗೂ ಗೌರವ ಸನ್ಮಾನ ಜರುಗಲಿದೆ.
ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಂಘದ, ಕಾರ್ಯದರ್ಶಿಗಳಾದ ಪವನ ಚೋಪ್ರಾ, ಸಹಕಾರ್ಯರ್ಶಿ ಭರಮಜ್ಜ ಬೀಡನಾಳ, ಉಪಾಧ್ಯಕ್ಷರಾದ ಮುದಕಪ್ಪ ಬೆಟಗೇರಿ, ಕೋಶಾಧ್ಯಕ್ಷರಾದ ಅಮೀನಸಾಬ್ ಬಿಸನಳ್ಳಿ ಹಾಗೂ ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.