ಗದಗ: ವಕಾರು ಸಾಲು ಲೀಸ್ ಅವಧಿ ವಿಸ್ತರಣೆ ಸಂಬಂಧ ನಕಲಿ ಠರಾವು ಸೃಷ್ಟಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಗದಗ ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರನ್ನು ಸದಸ್ಯತ್ವದಿಂದ ಅಮಾನತ್ತು ಮಾಡಿದ್ದರು.
ಆದರೆ ಇದೀಗ ಆದೇಶವನ್ನು ಧಾರವಾಡ ವಿಭಾಗೀಯ ಹೈಕೋರ್ಟ್ ಪೀಠ ರದ್ದು ಮಾಡಿ ಆದೇಶಿಸಿದೆ. ಮತ್ತು ಮಂಗಳವಾರ ಸಂಜೆ 5 ಗಂಟೆ ಒಳಗಾಗಿ ಠರಾವಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಪರಿಶೀಲಿಸಲು ಸದಸ್ಯರಿಗೆ ಸಹಕಾರ ನೀಡಬೇಕು. ಜಿಲ್ಲಾಧಿಕಾರಿಗಳು ಪರಿಶೀಲನೆಗೆ ದಾಖಲೆಗಳನ್ನು ಸದಸ್ಯರಿಗೆ ನೀಡಬೇಕು ಎಂದು ಆದೇಶದದಲ್ಲಿ ತಿಳಿಸಿದೆ.

ಜತೆಗೆ ಫೆ. 27 ರಂದು ಮಧ್ಯಾಹ್ನ 3 ಗಂಟೆ ಒಳಗಾಗಿ ಸೂಕ್ತ, ಸಮರ್ಥನೀಯ ದಾಖಲೆಗಳೊಂದಿಗೆ ಪ್ರಾದೇಶಿಕ ಆಯುಕ್ತರ ಕಚೇರಿಗೆಯಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಒಂದು ವೇಳೆ ಸೂಕ್ತ, ಸಮರ್ಥನೀಯ ದಾಖಲೆಗಳನ್ನು ವಿಚಾರಣೆ ವೇಳೆ ಸಲ್ಲಿಸಲು ಸದಸ್ಯರು ವಿಫಲರಾದರೆ ಮುಂದಿನ ಕ್ರಮವನ್ನು ಪ್ರಾದೇಶಿಕ ಆಯುಕ್ತರು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.