Sunday, April 20, 2025
Homeಸುತ್ತಾ-ಮುತ್ತಾದೇವಸ್ಥಾನಗಳು ಧಾರ್ಮಿಕವಾಗಿ ಜಾಗೃತಿಗೊಳಿಸಿದರೆ ಶಿಕ್ಷಣ ಸಾಮಾಜಿಕವಾಗಿ ಜಾಗೃತರನ್ನಾಗಿ ಮಾಡುತ್ತದೆ: ನಿರಂಜನಾನಂದ ಶ್ರೀ

ದೇವಸ್ಥಾನಗಳು ಧಾರ್ಮಿಕವಾಗಿ ಜಾಗೃತಿಗೊಳಿಸಿದರೆ ಶಿಕ್ಷಣ ಸಾಮಾಜಿಕವಾಗಿ ಜಾಗೃತರನ್ನಾಗಿ ಮಾಡುತ್ತದೆ: ನಿರಂಜನಾನಂದ ಶ್ರೀ

ಮುಂಡರಗಿ: ಯಾವುದೇ ಒಂದು ಸಮುದಾಯ ಈ ರಾಜ್ಯದಲ್ಲಿ ಪ್ರಬುದ್ಧಮಾನವಾಗಿ ಬೆಳೆಯಬೇಕೆಂದರೆ ಒಂದು ಶಿಕ್ಷಣ ಮತ್ತು ಒಂದು ಆರ್ಥಿಕತೆ.ಇವೆರೆಡರಲ್ಲಿ ಸಮಾಜ ಸದೃಢವಾಗಿ ಬೆಳೆದಾಗ ಮಾತ್ರ ಬಲಿಷ್ಠವಾದ ಸಮಾಜ ವಕಟ್ಟಲು ಸಾಧ್ಯವಾಗುತ್ತದೆ. ಹೀಗಾಗಿ ಮುರುಡಿ ಗ್ರಾಮದವರು ದೇವಸ್ಥಾನದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಒತ್ತುಇ ನೀಡಿ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಶ್ರೀಗಳು ಹೇಳಿದರು.

ಪೂಜ್ಯರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮುರುಡಿ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ಭೂಮಿ ಪೂಜೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಭೂಮಿ ಪೂಜೆ ನೆರವೇರಿಸಿದ ರೋಣ ಕ್ಷೇತ್ರದ ಶಾಸಕರಾದ ಜಿ ಎಸ್ ಪಾಟೀಲ ಅವರು ಮಾತನಾಡಿ,ಬೀರಲಿಂಗೇಶ್ವರ ಎಂದರೆ ಶಿವನ ಸ್ವರೂಪ. ಅಂತಹ ಒಂದು ಐತಿಹಾಸಿಕ ದೇವಸ್ಥಾನ ಸುಮಾರು ವರ್ಷದ ಪ್ರಯತ್ನ ಇಂದು ಭೂಮಿ ಪೂಜೆಯ ಮೂಲಕ ನೆರವೇರುತ್ತಿರುವ‌ದು ಸಂತೋಷ ತಂದಿದೆ. ಪ್ರಾರಂಭದಲ್ಲಿ ನಾನು ಸಹ 10 ಲಕ್ಷ ರೂಪಾಯಿ ನೀಡಿದ್ದು ಹಾಲುಮತ ಸಮುದಾಯ ಶ್ರಮಿಕ ಸಮುದಾಯವಾಗಿದ್ದು ತಾವೆಲ್ಲರೂ ಕೂಡ ಹೆಚ್ಚು ಶ್ರಮವಹಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ನಿಮ್ಮ ಈ ದೇವಸ್ಥಾನ ಸಂಪೂರ್ಣ ಮುಗಿಯುವರೆಗೂ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಅವರು ಮಾತನಾಡಿ, ಈ ಭಾಗದ ಆರಾಧ್ಯ ದೈವ ಹಾಗೂ ಸಾಕ್ಷಾತ್ ಪರಮೇಶ್ವರನ ಸ್ವರೂಪ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ನಾನು ಕೂಡ 5 ಲಕ್ಷ ಅನುದಾನ ನೀಡುತ್ತೇನೆ. ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವೈ ಎನ್ ಗೌಡರ, ಹೇಮಗಿರೀಶ ಹಾವಿನಾಳ್, ಮಂಜುನಾಥ್ ಮುಂಡವಾಡ,ರಾಘವೇಂದ್ರ ಕುರಿ, ಸೋಮಣ್ಣ ಕೊಡ್ಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶೋಭಾ ಕೊಡ್ಲಿ, ಹಾಗೂ ಸದಸ್ಯರುಗಳು ಮತ್ತು ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಮರಡೇಪ್ಪ ಹಳ್ಳಿ, ಪುಟ್ಟನಗೌಡ ಪಾಟೀಲ್, ಟ್ರಸ್ಟ್ ಕಮಿಟಿ ಸದಸ್ಯರುಗಳು, ಸೇರಿದಂತೆ ಅನೆಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments