Home » News » ಜನರಿಗೆ ಹಾಗೂ ತಾಯಂದಿರಿಗೆ ಕಣ್ಣಲ್ಲಿ ಮಣ್ಣು ಹಾಕುವ ಯೋಜನೆ ಗ್ಯಾರಂಟಿ ಯೋಜನೆ! ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಜನರಿಗೆ ಹಾಗೂ ತಾಯಂದಿರಿಗೆ ಕಣ್ಣಲ್ಲಿ ಮಣ್ಣು ಹಾಕುವ ಯೋಜನೆ ಗ್ಯಾರಂಟಿ ಯೋಜನೆ! ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

by CityXPress
0 comments

ಗದಗ: ಗ್ಯಾರಂಟಿ ಯೋಜನೆ ರಾಜಕೀಯ ಲಾಭಕ್ಕಾಗಿ, ಮತಕ್ಕಾಗಿ ಮಾಡಿದ ಯೋಜನೆಯಾಗಿದ್ದು, ಜನರಿಗೆ, ತಾಯಂದಿರಿಗೆ ಕಣ್ಣಲ್ಲಿ ಮಣ್ಣುಹಾಕುವ ಯೋಜನೆ ಆಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಗದಗನಲ್ಲಿ ಮಾಧ್ಯಮಗಳೆದುರು‌ ಮಾತನಾಡಿದ ಅವರು, ಗೃಹಲಕ್ಷ್ಮೀ ಹಣ ಸರಿಯಾಗಿ ಯಾವ ತಿಂಗಳೂ ಬಂದಿಲ್ಲ. ಗೃಹ ಲಕ್ಷ್ಮೀ ಯೋಜನೆಯ ಹಣ ಸಂಬಳವೆ? ಅಂತಾ ಕೇಳ್ತಾರೆ. ಅದು ಗೌರವ ಧನ. ತಿಂಗಳು ತಿಂಗಳಿಗೆ ಕೊಟ್ಟಿಲ್ಲ ಅಂದ್ರೆ ಗೌರವ ಕೊಟ್ಟಿಲ್ಲ‌ ಅಂತಾನೆ ಅರ್ಥ. ಹೀಗಾಗಿ ಹೆಣ್ಣು ಮಕ್ಕಳಿಗೆ ಗೌರವ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ‌ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಹಣ ಕಾಸಿನ ವ್ಯವಸ್ಥೆ‌ ಸಂಪೂರ್ಣ ನೆಲಕಚ್ಚಿದೆ. ಆದರೆ ಅದನ್ನ ಸಿಎಂ ಭಂಡತನದಿಂದ ಒಪ್ಪಿಕೊಳ್ತಿಲ್ಲ ಅಷ್ಟೇ, ಕೇವಲ ಗ್ಯಾರಂಟಿಗೆ ಅಷ್ಟೆ ಅಲ್ಲ. ಯಾವುದೇ ಅಭಿವೃದ್ಧಿಗೂ ಹಣ ಇಲ್ಲವಾಗಿದೆ. ಸಾಲದ ರೂಪದ ಯೋಜನೆಗಳನ್ನ ಬಿಟ್ಟರೆ ಯಾವುದು ಇಲ್ಲ. ಕುಡಿಯುವ ನೀರಿನ ಯೋಜನೆಗೆ ಹಣ ಕೊಡದೇ ಕುಂಠಿತವಾಗಿದೆ. ರಾಜ್ಯ ಸರ್ಕಾರ ಜನರನ್ನ ಸಂಕಷ್ಟಕ್ಕೆ ದೂಡುತ್ತಿದೆ. ಜನ ಸಾಮಾನ್ಯರು ಬಳಸುವ ಎಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ತೆರಿಗೆ ಪಡೆದು ಅದನ್ನೇ ಗ್ಯಾರಂಟಿ‌ ರೂಪದಲ್ಲಿ ಮರಳಿ ಕೊಡಲು ಮುಂದಾಗಿದೆ. ಅದರಲ್ಲೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.

*ಹಿಜಾಬ್ ಗೆ ಸರ್ಕಾರ ಕುಮ್ಮುಕ್ಕು ನೀಡ್ತಿದೆ*

banner

ಇವರಿಗೆ ಅಭಿವೃದ್ಧಿ ಮಾಡಲು ಮನಸ್ಸಿಲ್ಲ ಹೀಗಾಗಿ ಹಿಜಾಬ್ ನಂಥಹ ವಿಷಯಗಳನ್ನ ಮುನ್ನೆಲೆಗೆ ತರುತ್ತಿದ್ದಾರೆ. ಕಾಂಗ್ರೆಸ್ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಉದಯಗಿರಿ ಗಲಾಟೆಗಳನ್ನ  ಮುನ್ನೆಲೆಗೆ ತರುತ್ತಿದ್ದಾರೆ. ಹಿಜಾಬ್ ವಿಷಯವಾಗಿ ಹೈಕೋರ್ಟ್ ಈಗಾಗಲೇ ಆದೇಶ ಕೊಟ್ಟಿದೆ.ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೆ. 1980 ರ ಶಿಕ್ಷಣ ನೀತಿಯ ಪ್ರಕಾರ ಸಮವಸ್ತ್ರ ಒಪ್ಪಿಕೊಳ್ಳಲಾಗಿದೆ. ಆದರೂ ಹೀಗೆ ಸರ್ಕಾರ ಹಿಜಾಬ್, ಮತ್ತೊಂದು ತರುವ ಯೋಚನೆ ಮಾಡಲಾಗ್ತಿದೆ. ಕೆಲ ಸಂಘಟನೆಗಳು ಹಿಜಾಬ್ ತರಲು ಮುಂದಾಗಿದ್ದು ಸರ್ಕಾರ ಇದಕ್ಕೆ ಕುಮ್ಮಕ್ಕು ನೀಡ್ತಿದೆ.

*ವಿಶ್ವವಿದ್ಯಾಲಯ ಹೋರಾಟ*

ಇತ್ತ ವಿಶ್ವ ವಿದ್ಯಾಲಯ ಉಳಿಸಿ‌ ಅನ್ನುವ ಹೋರಾಟವೂ ಸಹ ತೀವ್ರಗೊಂಡಿದೆ. ವಿಶ್ವವಿದ್ಯಾಲಯ ಬಿಳಿ ಆನೆಗಳಾಗಿ ಪರಿವರ್ತನೆಗೊಂಡಿವೆ. ನೂರಾರು ಕೋಟಿ ಖರ್ಚು ಮಾಡ್ತಾರೆ. ಸರಿಯಾಗಿ ಪರೀಕ್ಷೆ ನಡೀತಿಲ್ಲ. ರಿಸರ್ಚ್ ಆಗ್ತಿಲ್ಲ. ಪೇಪರ್ ಪ್ರಸೆಂಟೇಷನ್ ಆಗ್ತಿಲ್ಲ. ಯಾವುದೇ ಕೆಲಸ ಆಗ್ತಿಲ್ಲ. ವಿಶ್ವವಿದ್ಯಾಲಯಗಳು ಭ್ರಷ್ಟಾಚಾರದ ಕೂಪಗಳಾಗ್ತಿವೆ. ಅದನ್ನ ಸರಿ ಮಾಡೋದನ್ನ ಬಿಟ್ಟು ಹೊಸ ವಿಶ್ವವಿದ್ಯಾಲಯಗಳನ್ನ ಬಂದ್ ಮಾಡುತ್ತಿದ್ದಾರೆ. ಅತೀ ಕಡಿಮೆ ವೆಚ್ಚದಲ್ಲಿ ಲೋಕಲ್ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗ್ತಿತ್ತು. ವಿಶೇಷವಾಗಿ ಎಸ್ ಸಿ ಎಸ್ ಟಿ, ಒಬಿಸಿ ಹೆಣ್ಣುಮಕ್ಕಳು ದೊಡ್ಡಮಟ್ಟದಲ್ಲಿ ವಿವಿಯಲ್ಲಿ‌ ನೊಂದಾಯಿತರಾಗಿದ್ದಾರೆ.ಇವರ ಭವಿಷ್ಯಕ್ಕೆ ದೊಡ್ಡಮಟ್ಟದ ಕೊಡಲಿ ಪೆಟ್ಟನ್ನ ಕೊಟ್ಟಿದ್ದಾರೆ. ಹೀಗಾಗಿ ಹೊಸ ವಿಶ್ವವಿದ್ಯಾಲಯಗಳನ್ನ ಮುಚ್ಚಲು ಬಿಡಲ್ಲ. ಕಾನೂನು ಹೋರಾಟ ಮುಂದುವರಿಯುತ್ತೆ ಎಂದು ಹೇಳಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb