ದೆಹಲಿ NCR ಪ್ರದೇಶದಲ್ಲಿ ಇಂದು ಸೋಮವಾರ ಬೆಳಿಗ್ಗೆ ಭಾರಿ ಭೂಕಂಪ ಸಂಭವಿಸಿದ್ದು ವರದಿಯಾಗಿದೆ. ಬೆಳಿಗ್ಗೆ 5:37 ಕ್ಕೆ, ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆಘಾತದಿಂದ ಬೆಚ್ಚಿಬಿದ್ದಿದ್ದಾರೆ. ಅನೇಕರು ತಮ್ಮ ಮನೆಗಳಿಂದ ಹೊರಗೆ ಧಾವಿಸಿದರು. ಭೂಕಂಪನವು ಮೇಲ್ಮೈಯಿಂದ 5 ಕಿ.ಮೀ ಆಳವನ್ನು ಹೊಂದಿತ್ತು ಮತ್ತು 4.0 ತೀವ್ರತೆಯನ್ನು ಹೊಂದಿತ್ತು ಎಂದು ತಿಳಿದುಬಂದಿದೆ. ನೋಯ್ಡಾದಿಂದ ದೆಹಲಿಯವರೆಗೆ ಜನರು ಹಲವಾರು ನಿಮಿಷಗಳ ಕಾಲ ಈ ಕಂಪನದಿಂದ ಭಯಭೀತರಾಗಿದ್ದರು.

ಭೂಕಂಪದ ಕೇಂದ್ರಬಿಂದು ನವದೆಹಲಿಯಲ್ಲಿತ್ತು, ರಕ್ಟರ್ ಮಾಪನದಲ್ಲಿ 4.0 ಕಂಪನ ದಾಖಲಾಗಿದ್ದರೂ ಭಯಾನಕ ಕಂಪನದ ಅನುಭವದಿಂದ ಜನರು ಬಯ ಬೀತರಾಗಿದ್ದಾರು. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಭೂಕಂಪದ ವೀಡಿಯೊಗಳಿಂದ ತುಂಬಿವೆ, ನೆಟ್ಟಿಗರು ಇದನ್ನು “ಅತ್ಯಂತ ಹುಚ್ಚು ಭೂಕಂಪ” ಮತ್ತು ಅವರ ಜೀವನದ “ಭಯಾನಕ ಕೆಲವು ನಿಮಿಷಗಳು” ಎಂದು ಬಣ್ಣಿಸಿದ್ದಾರೆ.
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರು ಶಾಂತವಾಗಿರಲು ಮತ್ತು ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ತಿಳಿಸದ್ದಾರೆ. “ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಪ್ರತಿಯೊಬ್ಬರೂ ಶಾಂತವಾಗಿರಲು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಒತ್ತಾಯಿಸುತ್ತೇನೆ, ಸಂಭವನೀಯ ಭೂಕಂಪನಗಳ ಬಗ್ಗೆ ಜಾಗರೂಕರಾಗಿರಿ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ” ಎಂದು ಪಿಎಂ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.