ಗದಗ: ರೈತನ ಶೆಡ್ ಗೆ ಆಕಸ್ಮಿಕ ಬೆಂಕಿ ಬಿದ್ದು, ಶೆಡ್ ನಲ್ಲಿದ್ದ ಒಂದು ಆಕಳು ಹಾಗೂ ಒಂದು ಕರು ಸಜೀವ ದಹನವಾದ ಘಟನೆ, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಆಕಸ್ಮಿಕ ಬೆಂಕಿಯಿಂದ ಈ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲೆಗೆ ಮೂಕಜೀವಿಗಳು ಪ್ರಾಣಬಿಟ್ಟಿವೆ.
ನವೀನ ನವಲೆ ಎನ್ನುವ ರೈತನಿಗೆ ಸೇರಿದ ಶೆಡ್ ನಲ್ಲಿ ಈ ಬೆಂಕಿ ದುರ್ಘಟನೆ ಸಂಭವಿಸಿದ್ದು, ಎರೆಡು ಟ್ರ್ಯಾಕ್ಟರ್ ನಷ್ಟು ಶೇಂಗಾ ಹೊಟ್ಟು ಹಾಗೂ ಎರೆಡು ಟ್ರ್ಯಾಕ್ಟರ್ನಷ್ಟು ತೊಗರಿ ಹೊಟ್ಟು, 10 ಚೀಲ ಈರುಳ್ಳಿ ಸೇರಿದಂತೆ, ಸುಮಾರು 25 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ.

ಬೆಂಕಿ ದುರ್ಘಟನೆಯಲ್ಲಿ ತಾನು ಸಾಕಿದ ಮೂಕಪ್ರಾಣಿಗಳನ್ನ ಕಳೆದುಕೊಂಡಿರುವ ರೈತ ಕುಟುಂಬ ಕಂಗಾಲಾಗಿದೆ. ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.