ಗದಗ: ಕೌಟುಂಬಿಕ ಕಲಹದಿಂದ ಮನನೊಂದು ಪೊಲೀಸ್ ಸಿಬ್ಬಂದಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.
ಪ್ರಶಾಂತ ಕಂಚೇರಿ (33) ಅನ್ನುವ ಪೊಲೀಸ್ ಸಿಬ್ಬಂದಿಯೇ ಆತ್ಮಹತ್ಯೆಗೆ ಶರಣಾಗಿದ್ದು, ಮೂಲತಃ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹನುಮನಾಳ ಗ್ರಾಮದವರಾಗಿದ್ದಾರೆ.
2012 ರ ಬ್ಯಾಚ್ ನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸಟೇಬಲ್ ಆಗಿ, ಸದ್ಯ (ASC) ಬಾಂಬ್ ನಿಷ್ಕ್ರೀಯ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಸತಿ ಗೃಹದಲ್ಲಿ ವಾಸವಾಗಿದ್ದ ಪ್ರಶಾಂತ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.
ಕೆಲಸದಲ್ಲಿ ಸಾಕಷ್ಟು ಕ್ರೀಯಾಶೀಲರಾಗಿದ್ದ ಪ್ರಶಾಂತ, ಸಾವಿಗೆ ಶರಣಾಗಿರುವದು ಅವರ ಸ್ನೇಹಿತರ ಬಳಗಕ್ಕೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಆಘಾತ ಉಂಟು ಮಾಡಿದೆ. ಪತ್ನಿ ಹಾಗೂ ಓರ್ವ ಮಗುವನ್ನ ಅಗಲಿರೋ ಪ್ರಶಾಂತ ಸಾವಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡವರು ಸೇರಿದಂತೆ ಸಶಸ್ತ್ರ ಮೀಸಲು ಪಡೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಗಳೆಲ್ಲರೂ ಸಂತಾಪ ವ್ಯಕ್ತಪಡಿಸಿದ್ದಾರೆ.
ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.