ಬೆಳಿಗ್ಗೆ 10 ಗಂಟೆ ಸುಮಾರಿಗೆ ಪ್ರಯಾಗ್ರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ದೋಣಿಯಲ್ಲಿ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ಸಂಗಮದಲ್ಲಿರುವ ಸಂಗಮ್ ನೋಸ್ಗೆ ತೆರಳಿದರು. ನಂತರ, ಪಿಎಂ ಮೋದಿ ಒಬ್ಬರೇ ನೀರಿಗೆ ಇಳಿದು, ಸಂಗಮದಲ್ಲಿ ಸ್ನಾನ ಮಾಡಿ ಮಂತ್ರಗಳನ್ನು ಪಠಿಸಿದರು.

“ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದು ಅಪರೂಪದ ಕ್ಷಣ. ಸಂಗಮದಲ್ಲಿ ನಡೆಯುವ ಸ್ನಾನವು ದೈವಿಕ ಸಂಪರ್ಕದ ಒಂದು ಕ್ಷಣವಾಗಿದೆ, ಮತ್ತು ಅದರಲ್ಲಿ ಭಾಗವಹಿಸಿದ ಕೋಟ್ಯಂತರ ಇತರರಂತೆ, ನಾನು ಸಹ ಭಕ್ತಿಯ ಮನೋಭಾವದಿಂದ ತುಂಬಿದ್ದೇನೆ. ಗಂಗಾ ಮಾತೆಯು ಎಲ್ಲರಿಗೂ ಶಾಂತಿ, ಬುದ್ಧಿವಂತಿಕೆ, ಉತ್ತಮ ಆರೋಗ್ಯ ಮತ್ತು ಸಾಮರಸ್ಯವನ್ನು ದಯಪಾಲಿಸಲಿ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ತಮ್ಮ ಭೇಟಿಯ ಸಮಯದಲ್ಲಿ, ಪಿಎಂ ಮೋದಿ ಸೂರ್ಯ ದೇವರಿಗೆ “ಅರ್ಘ್ಯ” ಅರ್ಪಿಸಿದರು ಮತ್ತು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳಿಗೆ ಪ್ರಾರ್ಥನೆ ಸಲ್ಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಗಮದಲ್ಲಿ ಸ್ನಾನ ಮಾಡಿದ ನಂತರ, ಪಿಎಂ ಮೋದಿ ಕಪ್ಪು ಕುರ್ತಾ, ಕೇಸರಿ ಟೋಪಿ ಮತ್ತು ಹಿಮಾಚಲಿ ಟೋಪಿ ಧರಿಸಿ ಪೂಜೆ ಸಲ್ಲಿಸಿದರು.
ಮಹಾ ಕುಂಭಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ಬಂದಿಳಿದ ನಂತರ, ಪ್ರಧಾನಿ ಮೋದಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಸಂಗಮ್ ಗೆ ದೋಣಿ ಪ್ರವಾಸ ಕೈಗೊಂಡರು.