ಮುಂಡರಗಿ: ಪಟ್ಟಣದ ಪುರಸಭೆ ವ್ಯಾಪ್ತಿಯ 12 ನೇ ವಾರ್ಡನ ಶಿರೋಳದಲ್ಲಿ ಚರಂಡಿ ಹಾಗೂ ಸಿಡಿ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಗುಣಮಟ್ಟದ ಕಾಮಗಾರಿ ಮಾಡುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.
ಗುಣಮಟ್ಟದ ಕಬ್ಬಿಣ ಬಳಕೆ ಮಾಡದೇ ಸಿಡಿ ನಿರ್ಮಾಣ ಮಾಡುತ್ತಿದ್ದು ಎರೆಡ್ಮೂರು ತಿಂಗಳಲ್ಲಿ ಸಿಡಿ ಕುಸಿದು ಹೋಗುವ ಹಂತಕ್ಕೆ ನಿರ್ಮಾಣ ಮಾಡಿದ್ದಾರೆ.
ಅಂತಹ ಕಬ್ಬಿಣ ಹಾಗೂ ಕಾಂಕ್ರೀಟ್ ಬಳಕೆ ಮಾಡುತ್ತಿದ್ದು ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಅನ್ನೋ ಹಾಗೆ ಸರ್ಕಾರ ನೀಡಿದ ಅನುದಾನವನ್ನ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಅನ್ನೋ ಆರೋಪ ಸ್ಥಳಿಯರದ್ದಾಗಿದೆ.

ಗುಣಮಟ್ಟದ ಕಾಮಗಾರಿ ಮಾಡದೆ ತಮ್ಮ ಮನ ಬಂದಂತೆ ಕಾಮಗಾರಿ ಮಾಡುತ್ತಿದ್ದು ವಾರ್ಡಿನಲ್ಲಿ ಬಹುತೇಖವಾಗಿ ರೈತ ಕುಟುಂಬಗಳಿದ್ದು ಪ್ರತಿಯೊಬ್ಬರ ಮನೆಯಲ್ಲಿ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರಗಳು ರೈತರ ದವಸಧಾನ್ಯಗಳನ್ನ ತೆಗೆದುಕೊಂಡು ರಸ್ತೆಗೆ ನಿರ್ಮಿಸಲಾಗುತ್ತಿರುವ ಸಿಡಿ ಮೇಲೆಯೇ ಸಂಚರಿಸುತ್ತವೆ.
ಹೀಗಾಗಿ ಗುಣಮಟ್ಟದ ಕಾಮಗಾರಿ ಅವಶ್ಯವಿದ್ದು, ಸಂಭಂದಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.
ಅಲ್ಲದೇ ಸಿಮೇಂಟ್ ಗಟಾರ್ ಸಹ ಕಾಮಗಾರಿ ನಡೆಯುತ್ತಿದ್ದು, ಅದು ಕೂಡ ಅವೈಜ್ಞಾನಿಕವಾಗಿದೆ. ಕಾಂಕ್ರಿಟ್ ಹಾಕಿದ ಮೇಲೆ ಒಂದು ದಿನವೂ ಕೂಡ ಕ್ಯೂರಿಂಗ್ ಮಾಡಿಲ್ಲ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿ ಎರಡು ತಿಂಗಳಾದರೂ ಕೂಡ, ಸ್ಥಳಕ್ಕೆ ಆಗಮಿಸಿ ಭೇಟಿ ನೀಡಿಲ್ಲ.ಇನ್ನಾದರೂ ಪುರಸಭೆ ಮುಖ್ಯಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿವರ್ಗ ಕಳಪೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.