ಮುಂಡರಗಿ: ಹಾಡುಹಗಲೇ ಮಹಿಳೆಯ ಕತ್ತಲ್ಲಿದ್ದ ಮಾಂಗಲ್ಯಸರ ದೋಚಿ ಕಳ್ಳ ಪರಾರಿಯಾಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ.
ಡಾಲರ್ಸ್ ಕಾಲೋನಿಯಲ್ಲಿರುವ ಜಿ.ಕೆ.ಕಿರಾಣಿ ಸ್ಟೋರ್ ನ
ಅಂಗಡಿ ಮಾಲೀಕರಾದ ಮಂಜುಳಾ ಮೋಹನ ಹಂಪಿ ಅನ್ನೋರ ಚಿನ್ನದ ಮಾಂಗಲ್ಯಸರ ಕಿತ್ತು ಖದೀಮ ಪರಾರಿಯಾಗಿದ್ದಾನೆ.
ಇಂದು (05-02-2025) ಬೆಳ್ಳಂಬೆಳಿಗ್ಗೆ 6-30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಗ್ರಾಹಕನ ಸೋಗಿನಲ್ಲಿ ಅಂಗಡಿಗೆ ಬಂದ ಕಳ್ಳ ಗುಟ್ಕಾ ಬೇಕೆಂದು ಕೇಳಿದ್ದಾನೆ. ಕ್ಷಣ ಮಾತ್ರದಲ್ಲೇ ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದ ಖದೀಮ ಮಹಿಳೆ ಕತ್ತಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಮಾಂಗಲ್ಯಸರ ದೋಚಿ ಪರಾರಿಯಾಗಿದ್ದಾನೆ.

ಇನ್ನು ಕಳೆದ ವಾರವಷ್ಟೇ ಬೈಕ್‌ನಲ್ಲಿ ಹೊರಟಿದ್ದ ಖದೀಮರು ರಸ್ತೆ ಮಧ್ಯೆಯೇ ವೃದ್ಧರೊಬ್ಬರ ಕೈಯಲ್ಲಿದ್ದ ಚಿನ್ನದ ರಿಂಗ್ ಎಗರಿಸಿಕೊಂಡು ಹೋಗಿದ್ದರು. ಆ ಪ್ರಕರಣ ಮಾಸುವ ಮುನ್ನವೆ ಇದೀಗ ಹಾಡುಗಲಿನಲ್ಲಿ ಚಿನ್ನದ ಮಾಂಗಲ್ಯಸರ ಕಿತ್ತುಕೊಂಡು ಖದೀಮ ಪರಾರಿಯಾಗಿದ್ದಾನೆ.
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇತ್ತೀಚೆಗೆ ಪಟ್ಟಣದಲ್ಲಿ ಹಾಡುಹಗಲೇ ಹೆಚ್ಚುತ್ತಿರುವ ಕಳ್ಳತನದ ಪ್ರಕರಣಗಳಿಂದ ಸಾರ್ವಜನಿಕರು ಕೈಯಲ್ಲಿ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನ ಹಿಡಿದು ಹೊರಗಡೆ ಓಡಾಡೋಕೆ ಹಾಗೂ ತಮ್ಮ ವ್ಯಾಪಾರ ವಹಿವಾಟುಗಳನ್ನ ಮಾಡುವದಕ್ಕೂ ಆತಂಕ ಪಡುವಂತಾಗಿದೆ.
ಹೀಗಾಗಿ ಇದಕ್ಕೆಲ್ಲ ಪೊಲೀಸ ಇಲಾಖೆ ಕಡಿವಾಣ ಹಾಕಬೇಕು. ಸಾರ್ವಜನಿಕರು ತಮ್ಮ ಬೆಲೆಬಾಳುವ ವಸ್ತುಗಳ ಸಮೇತ ನಿರ್ಭೀತಿಯಿಂದ ತಮ್ಮ ದಿನಂಪ್ರತಿ ವಹಿವಾಟು ನಡೆಸುವಂತಾಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.