ಮುಂಡರಗಿ: ಶಿಕ್ಷಣವೆಂಬ ಅಸ್ತ್ರದಿಂದ ನಾವು ಬದುಕಿನಲ್ಲಿ ಅತ್ಯುತ್ತಮವಾದಂತ ಸಾಧನೆ ಮಾಡಲು ಸಾಧ್ಯ ಎಂದು ಮುಂಡರಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎಮ್ ಪಡ್ನೇಸಿಯವರು ಹೇಳಿದರು.
ಅವರು ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಜೆ.ಎನ್ ಕಮ್ಮಾರ್ ಗುರುಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು.ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗುವ ಹಲವಾರು ಯೋಜನೆಗಳನ್ನ ಸರ್ಕಾರ ನೀಡುತ್ತಿದ್ದು ಪಾಲಕರು ಮಕ್ಕಳ ಓದಿನ ಕಡೆಗೆ ಗಮನಹರಿಸಬೇಕು. ಮೊಬೈಲ್ ಹಾಗೂ ಟಿವಿಯಿಂದ ಮಕ್ಕಳನ್ನು ದೂರವಿಡಿ ಎಂದು ಪಾಲಕರಿಗೆ ತಿಳಿಸಿದರು.

ಶಿಕ್ಷಕರಾದ ಮನೋಹರ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ಷಿಕ ವರದಿಯನ್ನು ಪ್ರಧಾನ ಗುರುಗಳಾದ ಪವಾರ ಗುರುಗಳು ಮಂಡಿಸಿದರು. ನಂತರ ಸೇವಾ ನಿವೃತ್ತಿ ಅಂಚಿನಲ್ಲಿರುವ ಜೆ ಎನ್ ಕಮ್ಮಾರ್ ಗುರುಗಳಿಗೆ ಶಾಲಾ ಗುರುಬಳಗದವರು, ಗ್ರಾಮಸ್ಥರು ಶಿಕ್ಷಣ ಇಲಾಖೆ ಹಾಗೂ ಎಸ್ ಡಿ ಎಂ ಸಿ ಬಳಗದಿಂದ ಗೌರವಿಸಲಾಯಿತು.
ಇದೇ ವೇಳೆ, ಕಾನೂನು ವ್ಯವಸ್ಥೆ ಮೂಲಕ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆ ಹಾಗೂ ತಾಲೂಕಿನಲ್ಲಿರುವ ಸಾರ್ವಜನಿಕ ಸಮಸ್ಯೆಗಳನ್ನು ಸುದ್ದಿಯ ಮೂಲಕ ಸರ್ಕಾರದ ಅಧಿಕಾರಿಗಳ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವ ಸುದ್ದಿ ಮಾಧ್ಯಮದವರನ್ನು ಗೌರವಿಸಿ ಸನ್ಮಾನಿಸಿದರು.
ಈ ವೇಳೆ, ಎಸ್ಡಿಎಂಸಿ ಅಧ್ಯಕ್ಷರಾದ ದೇವಪ್ಪ ಕಂಬಳಿ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯ ಜೊತೆ ಗ್ರಾಮಸ್ಥರ ಸಹಕಾರ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ನಮ್ಮೂರ ಶಾಲೆಯಲ್ಲಿ ಉತ್ತಮವಾದ ಗುರು ಬಳಗ ಹೊಂದಿದ್ದು ಗ್ರಾಮಸ್ಥರು ಕೂಡ ಸಹಕಾರ ನೀಡಿದ್ದು ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಗಂಗಾಧರ ಅಣ್ಣಿಗೇರಿ,ಶಂಕರ್ ಹಡಗಲಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ದೇವಪ್ಪ ಹೊಸ ಕುರುಬರ, ಹಾಗೂ ಎಸ್ ಡಿ ಎಮ್ ಸಿ ಸದಸ್ಯರುಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.