ರಾಯಚೂರ: ತನ್ನ ಹಿಂದೆ ಬಿದ್ದ ಯುವಕನನ್ನ ತಿರಸ್ಕಾರ ಮಾಡಿದ್ದಕ್ಕೆ ಯುವತಿಯನ್ನ ಕೊಲೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.
ಲಿಂಗಸುಗೂರು ಮೂಲದ ವಿದ್ಯಾರ್ಥಿನಿ ಶಿಫಾ (24) ಹತ್ಯೆಗೀಡಾಗಿದ್ದು, ಟೈಲ್ಸ್ ಕೆಲಸ ಮಾಡುತ್ತಿದ್ದ ಮುಬಿನ್ ಅನ್ನುವ ಯುವಕ, ಸುಮಾರು ದಿನಗಳಿಂದ ಶೀಫಾ ಹಿಂದೆ ಪ್ರೀತಿಗಾಗಿ ಆಕೆಯ ಹಿಂದೆ ಬಿದ್ದಿದ್ದನಂತೆ. ವಿದ್ಯಾರ್ಥಿನಿ ತಿರಸ್ಕರಿಸಿದ್ದಕ್ಕೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಸಿಂಧನೂರಿನ ಸರ್ಕ್ಯೂಟ್ ಹೌಸ್ ಹತ್ತಿರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶಿಫಾ ಎಂಎಸ್ಸಿ ಓದುತ್ತಿದ್ದಳು. ಕಾಲೇಜಿಗೆ ಬಂದಾಗ ಸರ್ಕ್ಯೂಟ್ ಹೌಸ್ ಹತ್ತಿರ ವಿದ್ಯಾರ್ಥಿನಿ ಕೊಲೆಯಾಗಿದೆ.
ಹಾಡುಹಗಲೇ ನಡುರಸ್ತೆಯಲ್ಲಿ ಕುತ್ತಿಗೆಗೆ ಚಾಕು ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಮುಬಿನ್, ಬಳಿಕ, ಲಿಂಗಸುಗೂರು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಮುಬಿನ್ ನ್ನ ವಿಚಾರಣೆಗೊಳಪಡಿಸಿದ್ದಾರೆ. ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.