Home » News » ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕಾರ: ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಒಡಂಬಡಿಕೆ

ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕಾರ: ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಒಡಂಬಡಿಕೆ

by CityXPress
0 comments

ಗದಗ: ನಗರದ ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್ ನಲ್ಲಿ ಮಂಗಳವಾರ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸ್ಮಾರಕ ದತ್ತು ಯೋಜನೆಯಡಿ ಸ್ಮಾರಕ ಮಿತ್ರ ಡೆಕ್ಕನ್ ಹೆರಿಟೇಜ್ ಫೌಂಡೇಷನ್ ದೊಂದಿಗೆ ಗದಗ ಜಿಲ್ಲೆ ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕಾರದ ಒಡಂಬಡಿಕೆ ಕಾರ್ಯಕ್ರಮ ನೆರವೇರಿತು.

ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕರಿಸಿದಕ್ಕೆ ಶ್ರೀಮತಿ ರಾಜಶ್ರೀ ಪಿನ್ನಮನೇನಿ ಅವರಿಗೆ ಪ್ರವಾಸೋದ್ಯಮ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಕೆ.ಪಾಟೀಲ ಅಭಿನಂದನೆಗಳನ್ನು ತಿಳಿಸಿದರು.

ಗದಗ ಜಿಲ್ಲೆ ಸೂಡಿಯೂ ರೋಣ ಮತಕ್ಷೇತ್ರಕ್ಕೆ ಸೇರಿದ್ದು ಭಾರತರತ್ನ ಭೀಮಸೇನ ಜೋಶಿ, ದುರ್ಗಸಿಂಹ ರಂತಹ ಮಹಾನ್ ವ್ಯಕ್ತಿಗಳು ಬೀಡಾಗಿದ್ದು ಗದಗ ಜಿಲ್ಲೆ ಸಂಗೀತ ಸಾಂಸ್ಕೃತಿಕವಾಗಿ ಅಪರಿಮಿತ ಇತಿಹಾಸವನ್ನು ಹೊಂದಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಅಂದಾಜು 25000 ಸ್ಮಾರಕಗಳಿದ್ದು ಅದರಲ್ಲಿ ಈ ವರ್ಷ ಕನಿಷ್ಟ 3 ಸಾವಿರ ಸ್ಮಾರಕಗಳನ್ನು ಸಂರಕ್ಷಿಸಿ ಅದರ ಇತಿಹಾಸವನ್ನು ಮುಂದಿನ ಪೀಳಿಗೆಗೆ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಸ್ಮಾರಕಗಳ ನಿರ್ವಹಣೆಯಲ್ಲಿ ಈಗಾಗಲೇ ಸರ್ಕಾರ ಕಾರ್ಯ ನಿರ್ವಹಿಸುತಿದ್ದು ಅದರ ಜೊತೆಗೆ ಡೆಕ್ಕನ್ ಹೆರಾಲ್ಡ್ ಫೌಂಡೇಶನ್ ಕೈಜೋಡಿಸಿ ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕರಿಸಿದಕ್ಕೆ ಶ್ರೀಮತಿ ರಾಜಶ್ರೀ ಪಿನ್ನಮನೇನಿ ಅವರಿಗೆ ಅಭಿನಂದನೆಗಳು ಎಂದರು.

banner

ಇತ್ತೀಚೆಗೆ ಪಾರಂಪರಿಕ ಪ್ರದೇಶವಾದ ಲಕ್ಕುಂಡಿ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆದಿಯಾಗಿ ಜಿಲ್ಲಾಧಿಕಾರಿ ಜಿ.ಪಂ‌‌ ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಗಳ ನೇತೃತ್ವದಲ್ಲಿ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಕೈಗೊಂಡು ಒಂದೇ ದಿನದಲ್ಲಿ 1 ಸಾವಿರಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸಲಾಗಿದೆ. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕರ್ನಾಟಕದಿಂದ ಲಕ್ಕುಂಡಿ ಇತಿಹಾಸ ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನಗೊಂಡಿದೆ, ಲಕ್ಕುಂಡಿ ಯ ಸಂಪೂರ್ಣ ಇತಿಹಾಸ ತಿಳಿಯಲು ಮತ್ತು ಅದರ ಅಭಿವೃದ್ಧಿಗೆ ಲಕ್ಕುಂಡಿ ಪಾರಂಪರಿಕ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ.

ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳನ್ನು ಉಕ್ಖನನ ಗೊಳಿಸಿ ಹಿಂದಿನ ಇತಿಹಾಸವನ್ನು ಮುಂದಿನ ಪೀಳಿಗೆಯವರಿಗೆ ತಿಳಿಸುವ ಕಾರ್ಯವು ನಮ್ಮೆಲ್ಲರಿಂದ ಆಗಬೇಕಿದೆ ಹಾಗಾಗಿ ಸ್ಮಾರಕಗಳನ್ನು ಉಳಿಸಲು ಎಲ್ಲರ ಸಹಕಾರ ಅತ್ಯವಶಕ ಎಂದು ಹೇಳಿದರು.

ರೋಣ ಮತಕ್ಷತ್ರದ ಶಾಸಕ ಜಿ.ಎಸ್ ಪಾಟೀಲ ಅವರು ಮಾತನಾಡಿ ರಾಜ್ಯದಲ್ಲಿ ಐತಿಹಾಸಿಕ ಸ್ಥಳಗಳನ್ನು ಹಿಂದಿನಿಂದಲೂ ಸರ್ಕಾರ ಸಂರಕ್ಷಣೆ ಮಾಡಿಕೊಂಡು ಬಂದಿದೆ.‌ ಸಚಿವ ಎಚ್ ಕೆ ಪಾಟೀಲರು ವಿಶೇಷ ಆಸಕ್ತಿ ವಹಿಸಿ ಹೊಸ ಆಲೋಚನೆಗಳೊದಿಂಗೆ ಸ್ಮಾರಕ ದತ್ತು ಸ್ವೀಕಾರ ಯೋಜನೆ ಪ್ರಾರಂಭಿಸಿದಕ್ಕೆ ಅಭಿನಂದನೆ ಸಲ್ಲಿಸಿದರು.

ಶ್ರೀಮತಿ ರಾಜಶ್ರೀ ಪಿನ್ನಮನೇನಿ ಅವರು ಹೈದರಾಬಾದ್ ದಿಂದ ಗದಗ ಜಿಲ್ಲೆಯ ಸೂಡಿ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕರಿಸಿದಕ್ಕೆ ವಿಶೇಷ ಅಭಿನಂದನೆಗಳನ್ನ ಸಲ್ಲಿಸಿದರು. ಹಾಗೇ ಇಂತಹ ವ್ಯಕ್ತಿಗಳು ಸಂಸ್ಥೆ ಗಳು ಮುಂದೆ ಬಂದು ಸರ್ಕಾರ ಜೊತೆ ಕೈಜೋಡಿಸಿ ಎಂದು ತಿಳಿಸಿದರು.

ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಸ್ಥಾಪಕರು ಮತ್ತು ಸಹ ಸ್ಥಾಪಕರಾದ ಡಾ ಹೆಲೆನ್ ಫಿಲಾನ್ ಮತ್ತು ಸ್ಟೀಫನ್ ಬ್ಲೋಚ್ ಸಲೋಜ್ ಅವರು ಮಾತನಾಡಿ, ಭಾರತವು ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ ಅದರಲ್ಲಿ ಗದಗಿನ ವಾಸ್ತು ಶಿಲ್ಪ ಸಂಸ್ಕೃತಿ ವಿಶೇಷದಿಂದ ಕೂಡಿದೆ ಸ್ಮಾರಕ ಹತ್ತಿರ ಹೋಗುತ್ತಿದ್ದಂತೆ ಇಲ್ಲಿ ಜನರು ಅತ್ಯಂತ ಪ್ರೀತಿ ವಿಶ್ವಾಸ ದಿಂದ ಕಾಣುತ್ತಾರೆ ಹಾಗು ಇಂತಹ ಕಾರ್ಯಗಳನ್ನು ಕೈಗೆತ್ತಿ ಕೊಂಡಿದ್ದರಿಂದ ನಮಗೆ ಖುಷಿ ತಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ರಾಜಶ್ರೀ ಪಿನ್ನಮನೇನಿ,
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಾರ ಅಕ್ಬರಸಾಬ ಬಬರ್ಚಿ, ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಅಶೋಕ ಮಂದಾಲಿ, ವಿ.ಬಿ. ಸೋಮನಕಟ್ಟಿಮಠ, ಪುರಾತತ್ತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜ ಎ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿ.ಪಂ ಸಿಇಒ ಭರತ್ ಎಸ್, ಡಿಸಿಎಫ್ ಸಂತೋಷಕುಮಾರ, ಡೆಕ್ಕನ್ ಹೆರಿಟೆಜ್ ಪೌಂಡೇಶನ್ ಆಪ್ ಇಂಡಿಯಾದ ಪ್ರತಿಮಾ ರಾವ್, ರಂಗ, ಸುಜಾತ, ಶೀತಲ್, ಜಿಲ್ಲಾಮಟ್ಟದ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb