ಗದಗ: ಇತ್ತೀಚಿಗೆ ಸವದತ್ತಿ ಯಲ್ಲಮ್ಮ ಗುಡ್ಡದ ಪ್ರದೇಶದಲ್ಲಿ ಈಜಲು ಹೋಗಿ ಮೃತರಾದ ಗದಗ ನಗರದ ತಳಗೇರಿ ಓಣಿಯ ಬಾಲಕರಾದ ಸಚ್ಚಿದಾನಂದ ಕಟ್ಟಿಮನಿ ಹಾಗೂ ವೀರೇಶ ಕಟ್ಟಿಮನಿ ಅವರ ಮನೆಗೆ ಸಚಿವ ಹೆಚ್.ಕೆ.ಪಾಟೀಲ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮೃತರ ಕುಟುಂಬಸ್ಥರಿಗೆ ಸರ್ಕಾರದ ಪರವಾಗಿ ತಲಾ ಮೂರು ಲಕ್ಷ ರೂಗಳ ಚೆಕ್ ಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಬಾಳಿ ಬದುಕಿ ಜೀವನವನ್ನು ರೂಪಿಸಿಕೊಳ್ಳಬೇಕಾಗಿದ್ದ ಬಾಲಕರ ಸಾವು ಅಘಾತ ತಂದಿದೆ. ಬೆಲೆ ಕಟ್ಟಲಾಗದ ಜೀವವನ್ನು ಕಳೆದುಕೊಂಡಿರುವ ಕುಟುಂಬಸ್ಥರಿಗೆ ದೇವರು ನೋವನ್ನು ಸಹಿಸುವ ಶಕ್ತಿ ನೀಡಲಿ. ಇಂತಹ ಕಷ್ಟದ ಸಮಯದಲ್ಲಿ ಸರ್ಕಾರ ಸದಾ ನಿಮ್ಮೊಂದಿಗೆ ಇದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ತಹಶೀಲ್ದಾರ, ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ನಗರಸಭೆ ಸದಸ್ಯರಾದ ಕೃಷ್ಣಾ ಪರಾಪುರ್,ಕೆಡಿಪಿ ಸದಸ್ಯರಾದ ಎಸ್. ಎನ್. ಬಳ್ಳಾರಿ, ಬಿ. ಬಿ.ಅಸೂಟಿ, ವಿಜಯ ಕಲ್ಮನಿ, ಅಶೋಕ ಮಂದಾಲಿ ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.