ಮುಂಡರಗಿ: KSRTC ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಭೀಕರ ಅಪಘಾತದಲ್ಲಿ ಬೈಕ್ ಸವಾರ ಕಾಲು ಕಳೆದುಕೊಂಡ ಘಟನೆ, ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಕೋರ್ಟ್ ಸರ್ಕಲ್ ಬಳಿ ನಡೆದಿದೆ.
ಗವಿಯಪ್ಪ ಬನ್ನಿಕೊಪ್ಪ (27) ಗಂಭೀರ ಗಾಯಗೊಂಡ ಬೈಕ್ ಸವಾರನಾಗಿದ್ದು, ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ನಿವಾಸಿಯಾಗಿದ್ದಾನೆ.

ಮುಂಡರಗಿ ಪಟ್ಟಣದಿಂದ ಹಿರೇವಡ್ಡಟ್ಟಿ ಗ್ರಾಮಕ್ಕೆ ಗವಿಯಪ್ಪ ತೆರಳುತ್ತಿದ್ದನು. ಇತ್ತ ಗದಗನಿಂದ ಮುಂಡರಗಿ ಪಟ್ಟಣಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಡುವೆ ಅಪಘಾತ ಸಂಭವಿಸಿದೆ.
ಈ ಭೀಕರ ಅಪಘಾತಕ್ಕೆ ತುತ್ತಾಗಿರುವ ಬೈಕ್ ಸವಾರ, ತನ್ನ ಒಂದು ಕಾಲನ್ನೇ ಕಳೆದುಕೊಂಡಿದ್ದಾನೆ. ಅಪಘಾತದಲ್ಲಿ ತನ್ನ ಕಾಲು ಕಟ್ ಆಗಿರೋದನ್ನ, ನೋಡಿ ಸವಾರ ಕಂಗಾಲಾಗಿದ್ದಾನೆ.ಅಪಘಾತದ ತೀವ್ರತೆಗೆ ಸವಾರನ ಕಾಲು ಕಟ್ ಆಗಿ ಮತ್ತೊಂದೆಡೆ ಬಿದ್ದಿದೆ.
ಸದ್ಯ ಗಾಯಾಳು ಗವಿಯಪ್ಪನನ್ನ ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.