ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಹಾವೇರಿಯ ಹನುಮಂತು ವಿಜೇತರಾಗಿದ್ದಾರೆ. ಕಾನ್ಫಿಡೆಂಟ್ ಗ್ರುಪ್ ಕಡೆಯಿಂದ ಅವರಿಗೆ 50 ಲಕ್ಷ ರೂ. ಬಹುಮಾನದ ಕೂಡ ಸಿಕ್ಕಿದೆ.
ಆದರೆ, ಬಹುಮಾನದ ಚೆಕ್ ನಲ್ಲಿದ್ದಷ್ಟು 50 ಲಕ್ಷ ಪೂರ್ಣ ಮೊತ್ತ ಹನುಮಂತು ಕೈಗೆ ಸಿಗೋದಿಲ್ಲ. ಕಾರಣ ಈ ರೀತಿಯ ಮೊತ್ತಕ್ಕೆ ಸರ್ಕಾರ ಬರೋಬ್ಬರಿ 30% ಟ್ಯಾಕ್ಸ್ ವಿಧಿಸುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಹನುಮಂತುಗೆ ಸಿಗೋದು ಕೇವಲ 35 ಲಕ್ಷ ರೂ. ಮಾತ್ರ.

ಟಿವಿ ರಿಯಾಲಿಟಿ ಶೋ, ಲಾಟರಿ, ಸ್ಪರ್ಧೆ, ಕಾರ್ಡ್ ಗೇಮ್‌ನಲ್ಲಿ ಆಡಿ ಗೆದ್ದಲ್ಲಿ 30% ತೆರಿಗೆ ಪಾವತಿಸಬೇಕು. ಕನಿಷ್ಠ 10 ಸಾವಿರ ರೂ. ಇಂದ ಈ ತೆರಿಗೆ ಅನ್ವಯ ಆಗುತ್ತದೆ.